ನಾವು ಹೇಳುವ ಈ 2 ಟಿಪ್ಸ್ ಗಳನ್ನೂ ಫಾಲೋ ಮಾಡಿದರೆ 2 -3 ತಿಂಗಳವರೆಗೆ ನಿಂಬೆಹಣ್ಣನ್ನು ಫ್ರೆಶ್ ಆಗಿ ಸ್ಟೋರ್ ಮಾಡಬಹುದು. ನಿಂಬೆಹಣ್ಣನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟು ಫ್ರಿಡ್ಜ್ ನಲ್ಲಿ ಇಟ್ಟರೆ 10 – 12 ದಿನಗಳ ಫ್ರೆಶ್ ಆಗಿ ಇರುತ್ತದೆ.
ಇನ್ನು ಹೊರಗಡೆ ಇಟ್ಟರೆ 2 -3 ದಿನಕ್ಕೆ ನಿಂಬೆಹಣ್ಣು ಹಾಳಾಗುತ್ತದೆ. ಇಂದು ನಾವು ಹೇಳುವ ಟಿಪ್ಸ್ ಅನ್ನು ನಾವು ಹೇಳುವ ರೀತಿಯಾಗಿ ಫಾಲೋ ಮಾಡಿದರೆ 2 – 3 ತಿಂಗಳುಗಳ ಕಾಲ ನಿಂಬೆಹಣ್ಣನ್ನು ಫ್ರೆಶ್ ಆಗಿ ಸ್ಟೋರ್ ಮಾಡಬಹುದು.
ಮೊದಲನೆಯ ಟಿಪ್ಸ್: ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ತೆಗೆದುಕೊಂಡ ನಿಂಬೆಹಣ್ಣು ಹಾಗೂ ನೀರನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಕಾಟನ್ ಬಟ್ಟೆಯನ್ನು ಉಪಯೋಗಿಸಿಕೊಂಡು ಪ್ರತಿಯೊಂದು ನಿಂಬೆಹಣ್ಣನ್ನು ನೀರು ಇರದ ಹಾಗೆ ಒರೆಸಿಕೊಳ್ಳಿ.
ನಂತರ ಈ ಪ್ರತಿಯೊಂದು ನಿಂಬೆಹಣ್ಣಿಗೆ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಈ ನಿಂಬೆಹಣ್ಣನ್ನು 5 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿ ಯಾವುದೇ ರೀತಿಯ ಮುಚ್ಚಳವನ್ನು ಮುಚ್ಚದೆ ಇಡಿ. ನಂತರ ನಿಂಬೆಹಣ್ಣು ಸ್ಟೋರ್ ಮಾಡುವ ಪಾತ್ರೆಯ ತಳಕ್ಕೆ ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ನನ್ನು ಹಾಕಿಕೊಳ್ಳಿ.
ನಂತರ ಇದರ ಮೇಲೆ ನಿಂಬೆಹಣ್ಣನ್ನು ಇಟ್ಟುಕೊಳ್ಳಿ. ನಂತರ ಅದರ ಮೇಲೆ ಮತ್ತೆ ಟಿಶ್ಯೂ ಪೇಪರ್ ಅಥವಾ ನ್ಯೂಸ್ ಪೇಪರ್ ನಿಂದ ಮುಚ್ಚಿ ಮುಚ್ಚಳವನ್ನು ಸಹ ಮುಚ್ಚಿ ಫ್ರಿಡ್ಜ್ ನಲ್ಲಿಟ್ಟರೆ 2 – 3 ತಿಂಗಳು ನಿಂಬೆಹಣ್ಣು ಫ್ರೆಶ್ ಆಗಿರುತ್ತದೆ. ಉಪಯೋಗಿಸುವ ಮೊದಲು ಒಂದು ಬಟ್ಟೆಯಿಂದ ಎಣ್ಣೆ ಒರಿಸಿಕೊಂಡು ಉಪಯೋಗಿಸಿ.
ಎರಡನೆಯ ಟಿಪ್ಸ್: ಮೊದಲೇ ಹೇಳಿದ ಹಾಗೆ ನೀರಿನಿಂದ ನಿಂಬೆಹಣ್ಣನ್ನು ತೊಳೆದು ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ.ನಂತರ ನ್ಯೂಸ್ ಪೇಪರ್ ನಿಂದ ಪ್ರತಿಯೊಂದು ನಿಂಬೆಹಣ್ಣನ್ನು ಕವರ್ ಮಾಡಿಕೊಂಡು ಒಂದು ಡಬ್ಬಕ್ಕೆ ಹಾಕಿ ಮುಚ್ಚಳವನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ. ಈ ರೀತಿ ಮಾಡುವುದರಿಂದ ನಿಂಬೆಹಣ್ಣು 1 – 2 ತಿಂಗಳು ಫ್ರೆಶ್ ಆಗಿರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.