WhatsApp Group Join Now

ಬೆಳೆ ತೆಗೆಯುವುದು ರೈತನಿಗೆ ಒಂದು ಚಾಲೆಂಜ್ ಆದರೆ ಆ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಇನ್ನೊಂದು ದೊಡ್ಡ ಚಾಲೆಂಜ್. ಹೀಗೆ ಬೆವರು ಸುರಿಸಿ ಬೆಳೆದ ಪರಂಗಿ ಹಣ್ಣನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಈ ರೈತನಿಗೆ ಒಂದು ಸಮಸ್ಯೆ ಎದುರಾಯಿತು. ಈಗ ಈ ರೈತ ಮಾಡಿದ ಐಡಿಯಾ ಏನು ಎಂದು ನೋಡೋಣ ಬನ್ನಿ. ತೆಲಂಗಾಣ ರಾಜ್ಯದ ಕರನೂರು ಜಿಲ್ಲೆಯಲ್ಲಿ ಮಾರಿರು ತಿಮ್ಮಿ ಎನ್ನುವ ಹಳ್ಳಿ ಇದ್ದು ಅರಣ್ಯದಲ್ಲಿರುವ ಒಂದು ಗ್ರಾಮ ಇದೇ ಗ್ರಾಮದಲ್ಲಿ ವಾಸ್ತವಿರುವ ಗೋಪಯ್ಯ ತಮ್ಮ ಜಮೀನಿನಲ್ಲಿ ತುಂಬಾ ಕಷ್ಟಪಟ್ಟು ಪರಂಗಿ ಹಣ್ಣನ್ನು ಬೆಳೆದಿದ್ದರು.

ಹಾಗೆ ಪ್ರತಿದಿನ ತಾವು ಬೆಳೆದ ಪರಂಗಿ ಹಣ್ಣನ್ನು ಕೊಲ್ಲಾಪುರಕ್ಕೆ ಬಸ್ನಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬರುತ್ತಿದ್ದರು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಈ ಹಳ್ಳಿಗೆ ಇದ್ದದ್ದು ಒಂದೇ ಸರಕಾರಿ ಬಸ್. ಎಂದಿನಂತೆ ಆ ದಿನ ಕೂಡ ಗೋಪಯ್ಯ ತಾವು ಬೆಳೆದ ಪರಂಗಿ ಹಣ್ಣನ್ನು ಬಾಸ್ ಗೆ ತುಂಬಿಕೊಂಡು ಬಸ್ ಗಾಗಿ ಕಾಯುತ್ತಿದ್ದರು. ಬಸ್ ಏನೋ ಬಂತು ಆದರೆ ಬಸ್ ಡ್ರೈವರ್ ನೀನು ಫ್ರೀ ಆಗಿ ನನಗೆ ಪರಂಗಿ ಹಣ್ಣು ಕೊಡು ಎಂದು ಗೋಪಯ್ಯ ಅವರನ್ನು ಕೇಳಿದ್ದಾನೆ

ಅದಕ್ಕೆ ಉತ್ತರಿಸಿದ ಗೋಪಯ್ಯ ಇವತ್ತು ಲೆಕ್ಕ ಮಾಡಿ ಇಟ್ಟಿದ್ದೇನೆ ಬೇರೆ ದಿನ ಕೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಬಸ್ ಡ್ರೈವರ್ ಬಸ್ ನಿಲ್ಲಿಸದೆ ಗೋಪಯ್ಯ ಅವರನ್ನು ಅಲ್ಲಿಯೇ ಬಿಟ್ಟು ಹೊರಟುಹೋಗಿದ್ದಾನೆ. ಬಸ್ ಕೊಲ್ಲಾಪುರಕ್ಕೆ ಹೋಗಿ ವಾಪಸ್ ಹಳ್ಳಿಗೆ ಬಂದಾಗ ಅಲ್ಲೇ ಕಾದು ಕುಳಿತ ಗೋಪಯ್ಯ ಡ್ರೈವರ್ ಗೆ ಬುದ್ಧಿ ಕಲಿಸಲು ಮುಂದಾದರು. ಪರಂಗಿ ಹಣ್ಣು ತುಂಬಿದ ಭಾಗಗಳನ್ನು ರೋಡಿಗೆ ಅಡ್ಡ ಇಟ್ಟು ಈಗ ಹೇಗೆ ಹೋಗ್ತೀಯ ಹೋಗು ಎಂದಗೋಪಯ್ಯ ಬಸ್ ಡ್ರೈವರ್ ಗೆ ಸವಾಲು ಹಾಕಿದ್ದಾರೆ. ಯಾರು ಎಷ್ಟೇ ಹೇಳಿದರೂ ಪಕ್ಕಕ್ಕೆ ಕದಲದ ಈ ಬಡ ರೈತ ರಸ್ತೆಯಲ್ಲಿ ಕೂತಿದ್ದಾರೆ ನಂತರ ಅಲ್ಲಿ ತುಂಬಾ ಜನ ಸೇರಿ ಬಸ್ ಡ್ರೈವರ್ ಇನ್ನು ಮುಂದೆ ಹಾಗೆ ಮಾಡಲ್ಲ ಎಂದು ಗೋಪಯ್ಯ ಅವರ ಮನವೊಲಿಸಿ ಬಸ್ ಮುಂದೆ ಹೋಗುವಂತೆ ಮಾಡಿದ್ದಾರೆ. ಹೀಗೆ ಫ್ರೀಯಾಗಿ ಪರಂಗಿ ಹಣ್ಣಿನ ಆಸೆಗೆ ಬಿದ್ದು ಗೋಪಯ್ಯ ಅವರನ್ನು ಬಿಟ್ಟು ಹೋದ ಬಸ್ ಡ್ರೈವರ್ ಗೆ ಈ ರೈತ ಬೆವರು ಇಳಿಸಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *