ಧೂಮಪಾನ ಆರೋಗ್ಯಕ್ಕೆ ಹಾಕಿಕಾರಕ ಎಂದು ಗೊತ್ತಿದ್ದರೂ ಅದನ್ನು ಬಿಡದೆ ಸೇದುತ್ತಾರೆ. ಆದೌ ಕೊನೆಗೆ ಕಾನ್ಸರ್ ನಂತಹ ಮಾರಕ ಕಾಯಿಲೆಗೆ ದೂಡುತ್ತದೆ. ಆದ್ದರಿಂದ ಸಿಗರೇಟ್ ಚಟವನ್ನು ಬಿಡಿಸಲು ಮತ್ತು ಬಿಡಲು ತುಂಬಾ ಪ್ರಯತ್ನ ಮಾಡುತ್ತೀರಾ. ಆದರೆ ಆಗುವುದಿಲ್ಲ. ಈ ಸಿಗರೇಟ್ ಚಟವನ್ನು ಬಿಡಿಸಲೆಂದೇ ಮಾರುಕಟ್ಟೆಗೆ ಅದೆಷ್ಟೋ ಚ್ಯುಯಿಂಗಮ್ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಸಿಗರೇಟ್ ಚಟಕ್ಕೆ ಗುಡ್ಬಾಯ್ ಹೇಳಬಹುದು ಎಂದು ತಿಳಿಸಲಾಗಿದೆ.
ಥಾಯ್ಲೆಂಡ್ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಸಿಗರೇಟ್ ಸೇವಿಸುತ್ತಿದ್ದ 2 ತಂಡಗಳ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.47 ರಷ್ಟು ಮಂದಿಗೆ ಪ್ರತಿದಿನ ನಿಂಬೆ ರಸ ನೀಡಲಾಗಿತ್ತು. ಶೇ.53 ರಷ್ಟಿದ್ದ ಮತ್ತೊಂದು ಗುಂಪಿಗೆ ನಿಕೋಟಿನ್ ಚ್ಯುಯಿಂಗಮ್ ನೀಡಲಾಯಿತು. ನಂತರ 12 ವಾರಗಳವರೆಗೆ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಈ ವೇಳೆ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಿಗರೇಟ್ನಿಂದ ಮುಕ್ತಿ ಪಡೆಯಲು ನಿಂಬೆ ರಸವನ್ನು ಪ್ರತಿನಿತ್ಯ ಕುಡಿಯಬೇಕಾಗುತ್ತದೆ. ಈ ಜ್ಯೂಸ್ ತಯಾರಿಸಲು 1 ನಿಂಬೆ ಹಣ್ಣು, 1 ನಿಂಬೆಕಾಯಿ, 1 ಟೀ ಚಮಚ ಸಕ್ಕರೆ, 1 ಕಪ್ ನೀರು ಹಾಗೂ ಸ್ವಲ್ಪ ಐಸ್ ಅವಶ್ಯಕ. ಒಂದು ಸಣ್ಣ ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣುಗಳನ್ನು ಕತ್ತರಿಸಿ ರಸ ಹಿಂಡಿರಿ. ಈ ರಸಕ್ಕೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಹೀಗೆ ಮಾಡುವುದರಿಂದ ಸಿಗರೇಟ್ ಸೇದಬೇಕೆಂಬ ಬಯಕೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಸಂಶೋಧಕರು.