ಇವತ್ತಿನ ಒಂದು ವಿಶೇಷವಾದ ಸೊಪ್ಪಿನ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇದ್ದೇವೆ. ಈ ಸೊಪ್ಪಿನ ಹೆಸರು ಹಕ್ಕರಿಕೆ ಪಲ್ಯ ಅಥವಾ ಅಕ್ಕರಿಕಿ ಸೊಪ್ಪು ಅಂತ ನಮ್ಮ ಉತ್ತರ ಕರ್ನಾಟಕದಲ್ಲಿ ಕರೆಯುತ್ತಾರೆ ನಮ್ಮ ಉತ್ತರ ಕರ್ನಾಟಕದಲ್ಲಿ ಯಾವುದೇ ರೀತಿಯಾಗಿ ಈ ಸೊಪ್ಪಿಗೆ ಮಾಡಿ ಬೆಳೆಯುವುದಿಲ್ಲ ತನ್ನಿಂದ ತಾನೇ ಬೆಳೆಯುವಂತಹ ಒಂದು ಬೆಳೆಯಾಗಿದೆ ಇದನ್ನು ಉತ್ತರ ಕರ್ನಾಟಕದಲ್ಲಿ ರೊಟ್ಟಿಯ ಜೊತೆಗೆ ತಿನ್ನುತ್ತಾರೆ ಇದರಲ್ಲಿ ಕಬ್ಬಿಣ ಅಂಶ ಮಿನರಲ್ ಮತ್ತು ಪೋಷಕಾಂಶಗಳು ಹೇರಳವಾಗಿ ಇದೆ.

ಇನ್ನು ಈ ಸೊಪ್ಪನ್ನು ಯಾವುದೇ ರೀತಿಯಾಗಿ ಬೇಯಿಸದೇ ಇದನ್ನು ಹಸಿಯಾಗಿ ರೊಟ್ಟಿ ಜೊತೆಗೆ ಅಥವಾ ಸಲಾಡ್ ರೂಪದಲ್ಲಿ ಠೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು.ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸುತ್ತದೆ. ನರಮಂಡಲದ ಮೇಲೆ ಪ್ರಯೋಜನಕಾರಿ ಪರಿಣಾಮ ಉಂಟುಮಾಡಿ, ನಿದ್ರೆ ಬರುವಂತೆ ಮಾಡುತ್ತದೆ.

ಹಾಗಾಗಿ ನಮ್ಮ ಪೂರ್ವಜರು ಮತ್ತು ರೈತರಿಗೆ ಎಷ್ಟು ಅನುಭವ ಮತ್ತು ಜ್ಞಾನವಿತ್ತು ಎಂದರೆ ಈ ಅಕ್ಕರಿಗೆ ಪಲ್ಯ ಮೆಂತೆ ಪಲ್ಯ ಸೌದೆ ಕಾಯಿ ಮೂಲಂಗಿ ಮತ್ತು ಉಳ್ಳಾಗಡ್ಡಿ ಹಸಿಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆ ನೀಡಿದ್ದಾರೆ. ಇನ್ನು ಈ ಹಕ್ಕರಿಕೆ ಪಲ್ಯ ಸೇವನೆ ಮಾಡುವುದರಿಂದ ನಮಗೆ ಯಾವೆಲ್ಲ ರೀತಿಯಾದಂತಹ ಲಾಭಗಳು ಆಗುತ್ತವೆ ಅಂತ ನೋಡುವುದಾದರೆ.

ಮೊದಲನೇದಾಗಿ ಇದನ್ನು ಸೇವನೆ ಮಾಡುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆಮತ್ತು ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ಚರ್ಮದ ರೋಗಿಗಳಿಗೂ ಕೂಡ ಇದು ತುಂಬಾನೇ ಉಪಯೋಗಕಾರಿಯಾಗಿದೆ ಇದು ಮೂಳೆಗಳ ಸವಿತವನ್ನು ಕೂಡ ತಡೆಗಟ್ಟುತ್ತದೆ. ಇದು ಸೇವನೆ ಮಾಡುವುದರಿಂದ ನಮ್ಮ ಆಯಾಸ ಕೂಡ ಉಂಟಾಗುತ್ತದೆ ಮತ್ತು ಯಾರಿಗೆ ಸಕ್ಕರೆಕಾಯಿಲೆ ಇರುತ್ತದೆ ಅದನ್ನು ಇವರಿಗೆ ಕೊಟ್ಟರೆ ತುಂಬಾನೇ ಒಳ್ಳೆಯದು ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಜೊತೆಗೆ ನಮ್ಮ ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದರಲ್ಲಿ ವಿಶೇಷವಾದ ಉಪಯುಕ್ತಗಳು ಏನೆಂದರೆ ಇದರಲ್ಲಿ ಇರುವಂತ ಪೌಷ್ಟಿಕಾಂಶಗಳು ಕಿಣ್ವಗಳು ನಮ್ಮ ಮೂತ್ರಪಿಂಡಗಳಲ್ಲಿ ಹರಳು ಉಂಟು ಮಾಡುವುದನ್ನು ತಡೆಯುತ್ತದೆ. ರೋಗನಿರೋಧಕ ಗುಣ ಈ ಸೊಪ್ಪಿನಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಗೆ, ದೀರ್ಘಕಾಲದ ಕಾಯಿಲೆಗಳಿಗೆ ಔಷಧದಂತೆ ವರ್ತಿಸುತ್ತದೆ. ರೋಗ ಬರದಂತೆ ತಡೆಯುವ ನೈಸರ್ಗಿಕ ಪರಿಹಾರ ಗುಣ ಇದಕ್ಕಿದೆ.

Leave a Reply

Your email address will not be published. Required fields are marked *