ಉಗುರು ಸುತ್ತು ಹಲವಾರು ಜನರಿಗೆ ಕಾಡುತ್ತಿರುತ್ತದ್ದೆ. ಉಗುರು ನೋವು ಆಗಿರಬಹುದು ಉಗುರು ಕಟ್ಟಾಗಿರಬಹುದು ಅಂತದಲ್ಲೇ ಕಟ್ಟಾಗಿರಬಹುದು ನೋವು ಕಾಡುತ್ತಾ ಇರುತ್ತದೆ ಇದೆಲ್ಲ ಉಗುರು ಸುತ್ತಿನ ಲಕ್ಷಣ. ಈ ಉಗುರು ಸುತ್ತಿನಿಂದಾಗಿ ಆಗುವಂತ ಸಮಸ್ಯೆಗಳು ತುಂಬಾನೇ ಇರುತ್ತವೆ. ಇದು ನಮ್ಮ ಸೌಂದರ್ಯ ವರ್ಧನಿಗೆ ಅದು ತೊಂದರೆಯನ್ನು ಕೊಡುತ್ತದೆ. ಹಾಗಾಗಿ ಗುರು ಸುತ್ತಿನ ನಿವಾರಿಸಿಕೊಳ್ಳುವುದಕ್ಕೆ ನೀವು ಹಲವಾರು ಔಷಧಿಗಳನ್ನು ಹಚ್ಚುತ್ತಿರಬಹುದು.
ಅದರ ಜೊತೆಗೆ ನಾನು ಹೇಳುತ್ತಿರುವ ಮನೆಮದ್ದುಗಳನ್ನು ಕೂಡ ನೀವು ಪ್ರಯತ್ನ ಮಾಡಿ ಅದು ಯಾವುದು ಅಂತ ತಿಳಿದುಕೊಳ್ಳುವುದಕ್ಕಿಂತ ಮೊದಲು ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಹೌದು ಸುತ್ತಿನಿಂದಾಗಿ ಉಗುರು ನೋವುತ್ತಿರುವಂಥದ್ದು ಕಪ್ಪು ಆಗುತ್ತಿರುವಂತಹದ್ದು ಆಗುವುದು ಮಾಮುಲಿ. ಅರ್ಧ ಕತ್ತರಿಸಿದ ನಿಂಬೆಹಣ್ಣನ್ನು ಉಗುರು ಸುತ್ತಾದ ಬೆರಳಿಗೆ ಟೋಪಿಯಂತೆ ಹಾಕಿಕೊಂಡು ಕಾಟನ್ ಬಟ್ಟೆಯನ್ನು ಸುತ್ತಿಕೊಳ್ಳುವುದರಿಂದ ನಿಂಬೆಹಣ್ಣಿನ ರಸವೂ ಉಗುರು ಸುತ್ತಾ ಬೆರಳಿನ ಒಳಗೆ ಹೋಗುತ್ತದೆ.
ಹೀಗೆ ಆದಾಗ ಉಗುರು ಸುತ್ತಿನ ಸಮಸ್ಯೆಯು ಕಡಿಮೆಯಾಗುತ್ತದೆ ಬೇವಿನ ಸೊಪ್ಪು ಎಲ್ಲರ ಮನೆಯಲ್ಲೂ ಸಿಗುತ್ತದೆ ಅಥವಾ ತೋಟದಲ್ಲಿ ಬೆಳೆದಿರುತ್ತದೆ ಬೇವಿನ ಸೊಪ್ಪನ್ನು ಕುಯ್ದು ತರಬೇಕು ಹತ್ತರಿಂದ ಹದಿನೈದು ಬೇವಿನ ಎಲೆಗಳು ತಂದು ಅದನ್ನು ಚೆನ್ನಾಗಿ ತೊಳೆದು ಅದನ್ನು ನುಣ್ಣಗೆ ಅರಿಯಬೇಕು ಅರೆಯುವಾಗ ಸ್ವಲ್ಪ ಉಪ್ಪನ್ನು ಹಾಕಿಕೊಳ್ಳಬೇಕು. ಈ ಬೇವಿನ ಸೊಪ್ಪಿನ ಲೇಪ ಮತ್ತು ಅಡುಗೆ ಮಿಶ್ರಣದಿಂದ ಚೆನ್ನಾಗಿ ಹರಿದು ಈ ಬೇವಿನ ಸೊಪ್ಪಿನ ಲೇಪವನ್ನು ನೀವು ಯಾವ ಉಗುರಿಗೆ ಆಗಿದೆ ಆ ಊರಿಗೆ ಹಚ್ಚಿ ಅದನ್ನು ಬೇರೆ ಬಟ್ಟೆಗೆ ಸುತ್ತಿ ಅದನ್ನು ಹಾಗೆ ಬಿಡುವಂತಹದ್ದು
ಒಂದು ಅರ್ಧ ಗಂಟೆ ಮುಕ್ಕಾಲು ಗಂಟೆಗಳ ಕಾಲ ಅದೇ ತರಹ ಬಿಟ್ಟು ನಂತರ ಅದನ್ನು ನೀವು ತೆಗೆಯಬಹುದು ಬೆಳಗ್ಗೆ ಮತ್ತು ಸಂಜೆ ಎರಡು ಸಲನು ಇದು ಮಾಡಬೇಕು ಒಂದು 15 ದಿನಗಳ ಕಾಲ ಮಾಡುತ್ತಾ ಬಂದರೆ, ಉಗುರಿನ ಶುದ್ಧೀಕರಣವಾಗುತ್ತದೆ. ಉಗುರು ಸುತ್ತಿಗೆ ಪುಡಿ ಮಾಡಿದ ಏಲಕ್ಕಿ, ಅರಶಿನ ಪುಡಿ, ಕಾಳು ಮೆಣಸಿನ ಹುಡಿ, ನಿಂಬೆ ಹಣ್ಣು, ನಿಂಬೆಹಣ್ಣಿನಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಪುಡಿ ಮಾಡಿದ ಇವು ಮೂರು ಮಿಶ್ರಣವನ್ನು ನಿಂಬೆಹಣ್ಣಿನಲ್ಲಿ ಮಾಡಿದ ರಂಧ್ರಕ್ಕೆ ಹಾಕಿಕೊಳ್ಳಿ. ಈ ನಿಂಬೆಹಣ್ಣಿನ್ನು ಉಗುರುಸುತ್ತಿನ ಬೆರಳಿಗೆ ಹಾಕಿಕೊಳ್ಳಿ.
ಹೀಗೆ ಮಾಡುವುದರಿಂದ ಎರಡು ಮೂರು ದಿನಗಳಲ್ಲಿ ಉಗುರು ಸುತ್ತು ಕಡಿಮೆಯಾಗುತ್ತದೆ. ಪುಡಿ ಮಾಡಿದ ಕಪ್ಪು ಎಳ್ಳು, ಪುಡಿ ಮಾಡಿದ ಕಲ್ಲು ಉಪ್ಪು, ಸೈಂಧವ ಲವಣ, ಅರಶಿಣ, ಈ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ರಂಧ್ರ ಮಾಡಿದ ನಿಂಬೆಹಣ್ಣಿನ ಒಳಗೆ ಸಣ್ಣಗೆ ರಂಧ್ರ ಮಾಡಿ, ರಂಧ್ರದೊಳಗೆ ಈ ಮಿಶ್ರಣವನ್ನು ಹಾಕಿ. ಉಗುರು ಸುತ್ತಾದ ಕಾಲಿನ ಅಥವಾ ಕೈಯ ಬೆರಳಿಗೆ ಟೋಪಿಯಂತೆ ಹಾಕಿಕೊಳ್ಳಿ. ಈ ರೀತಿಯಾಗಿ ಮಾಡಿದರೆ ಉಗುರು ಸುತ್ತಿನ ಸಮಸ್ಯೆಯು ಕಡಿಮೆಯಾಗುತ್ತದೆ.