ಹೌದು ಉತ್ತಮ ಆರೋಗ್ಯಕ್ಕೆ ಮೊಟ್ಟೆ ತಿನ್ನುವದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಇದೀಗ ಉತ್ತಮ ಆರೋಗ್ಯಕ್ಕೆ ಬಿಳಿ ಮೊಟ್ಟೆ, ಕಂದು ಮೊಟ್ಟೆ ಇದರಲ್ಲಿ ಯಾವುದು ಬೆಸ್ಟ್ ಅನ್ನೋದು ನಿಮಗೆ ಗೊತ್ತಾ.
ಬಿಳಿ ಮತ್ತು ಕಂದು ಮೊಟ್ಟೆಗಳಲ್ಲಿರುವ ನ್ಯೂಟ್ರೀಶನಲ್ ವ್ಯಾಲ್ಯೂ ನಡುವೆ ಹೆಚ್ಚೇನು ವಿಭಿನ್ನತೆ ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಕಾಲಾಗುವ ನಾಟಿ ಕೋಳಿಗಳು ಹಾಕುವ ಮೊಟ್ಟೆಯು ಕಂದು ಬಣ್ಣದಿಂದ ಕೂಡಿರುತ್ತದೆ. ಅದೇ ರೀತಿ ಫಾರಂನಲ್ಲಿ ಬೆಳೆಯಲಾಗು ಪೌಲ್ಟ್ರಿ ಕೋಳಿಗಳು ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಇಲ್ಲಿ ಕಂಟ್ರಿ ಕೋಳಿ, ಪೌಲ್ಟ್ರಿ ಕೋಳಿಗಿಂತ ಹೆಚ್ಚು ಆಹಾರವನ್ನು ಸೇವಿಸುತ್ತದೆ ಎಂಬುದೇ ವ್ಯತ್ಯಾಸ ಎನ್ನುತ್ತಾರೆ.
ಮಾಂಸ ಮತ್ತು ಮೊಟ್ಟೆಗಾಗಿ ಸಾಕಾಲಾಗುವ ಪೌಲ್ಟ್ರಿ ಕೋಳಿಗಳು ಬಿಳಿ ಮೊಟ್ಟೆ ಇಡುತ್ತದೆ. ಇವುಗಳು ಹೆಚ್ಚು ಮೊಟ್ಟೆಗಳನ್ನು ಇಡುವುದರಿಂದ ಮಾರುಕಟ್ಟೆಯಲ್ಲಿ ಬಿಳಿ ಮೊಟ್ಟೆಗಳು ಅಧಿಕ ಸಂಖ್ಯೆಯಲ್ಲಿ ಸಿಗುತ್ತಿದೆ. ಹಾಗೆಯೇ ಹೆಚ್ಚಿನವರು ಕಂದು ಮೊಟ್ಟೆಯ ಲೋಳೆಗಳು ಹೆಚ್ಚು ಸಮೃದ್ಧವಾಗಿರುತ್ತದ ಎಂದು ಅಭಿಪ್ರಾಯ ಪಡುತ್ತಾರೆ. ಅದು ಕೋಳಿಗಳು ತಿನ್ನುವ ಆಹಾರದಿಂದ ಬದಲಾಗುವುದು ಹೊರತು, ಮೊಟ್ಟೆಯ ಶೆಲ್ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ದೇಸಿ ಕೋಳಿಗಳು ನೈಸರ್ಗಿಕ ಆಹಾರಗಳನ್ನು ಸೇವಿಸುವುದರಿಂದ ಅವುಗಳ ಮಾಂಸ ಮತ್ತು ಮೊಟ್ಟೆಗಳು ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಹೊರತು ಪಡಿಸಿ ಇವೆರಡು ಕೋಳಿಗಳ ಮೊಟ್ಟೆಯ ಪೌಷ್ಠಿಕಾಂಶದಲ್ಲಿ ಅಂತಹ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಹೀಗಾಗಿ ಮೊಟ್ಟೆಯ ಬಣ್ಣದಲ್ಲಿ ವ್ಯತ್ಯಾಸವಿದೆ ಹೊರತು ಮೊಟ್ಟೆಯಿಂದ ಸಿಗುವ ಆರೋಗ್ಯಕರ ಗುಣದಲ್ಲಿ ಅಲ್ಲಾ ಎಂಬುದು ತಜ್ಞರ ಅಭಿಪ್ರಾಯ.