ನಮಸ್ತೆ ಪ್ರಿಯ ಓದುಗರೇ, ಮದುವೆಯಾದ ನಂತರ ಸ್ನೇಹಿತರು ಹಾಗೂ ಸಂಬಂಧಿಕರು ಕೇಳುವ ಸಾಮಾನ್ಯ ಪ್ರಶ್ನೆ ಅಂದ್ರೆ ಏನೊ ವಿಶೇಷ ಇಲ್ವಾ? ಅಂತ. ಅಂದ್ರೆ ಮಕ್ಕಳು ಇನ್ನೂ ಆಗಿಲ್ವ ಅಂತ. ಮತ್ತು ಸಾಮಾನ್ಯವಾಗಿ ಮದುವೆಯಾದ ದಂಪತಿಗಳಿಗೆ 30 ವರ್ಷ ದಾಟಿದರೆ ಮಗುವನ್ನು ಬೇಗ ಪಡೆಯಬೇಕು ಎನ್ನುವ ಚಿಂತೆ ಇದ್ದೆ ಇರುತ್ತದೆ. ಮಗುವನ್ನು ಬೇಗ ಪಡೆಯಲು ಎಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ. ಅದಕ್ಕಾಗಿ ಪ್ರತಿನಿತ್ಯ ಮಿಲನ ಕ್ರಿಯೆಯಲ್ಲಿ ಕೂಡ ಪಾಲ್ಗೊಳ್ಳುತ್ತಾರೆ. ಹೀಗೆ ಪ್ರತಿನಿತ್ಯ ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರಿಗೆ ಉತ್ತಮ ಪ್ರಮಾಣದ ವೀರ್ಯವನ್ನು ಹೊಂದಲು ಸಾಧ್ಯವಾ? ಎಂದು ಇವತ್ತಿನ ಈ ಲೇಖನದಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲು ಬಯಸುತ್ತಿದ್ದೇವೆ.

ಹಾಗಾಗಿ ಸಂಪೂರ್ಣ ಲೇಖನ ಓದುವುದನ್ನು ಮರೆಯದಿರಿ. ಸ್ನೇಹಿತರೆ ವಿಜ್ಞಾನದ ಪ್ರಕಾರ ಒಂದು ಬಾರಿ ಮಿಲನ ಮಹೋತ್ಸವ ಪಾಲ್ಗೊಂಡ ಬಳಿಕ ಸುಮಾರು 4-5 ದಿನಗಳ ನಂತರ ಮತ್ತೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡರೆ ವೀರ್ಯಾಣುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮತ್ತು ಮೂರರಿಂದ ಐದು ದಿನಗಳ ನಂತರ ಮಿಲನ ಮಹೋತ್ಸವ ತೊಡಗುವುದರಿಂದ ನಿಮಗೆ ಲೈಂಗಿಕ ಕ್ರಿಯಯಲ್ಲಿ ಕೂಡ ಹೆಚ್ಚು ಆಸಕ್ತಿ ಇರುತ್ತದೆ.

ನಿಮಗೆ ಸಾದ್ಯವಾದರೆ ಪ್ರತಿದಿನ ರಾತ್ರಿ 4-5 ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ಬಾದಾಮಿಯನ್ನು ತಿನ್ನಿ. ಹೀಗೆ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಅದರಲ್ಲಿರುವ ಉತ್ತಮ ಪೋಷಕಾಂಶಗಳು ನಿಮ್ಮ ಲೈಂಗಿಕ ಆರೋಗ್ಯ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಾಗೂ ಇದರಲ್ಲಿರುವ ಪೌಷ್ಟಿಕಾಂಶಗಳು ನಿಮ್ಮ ಕಾಮಾಸಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಮತ್ತು ಪ್ರತಿನಿತ್ಯ ಮಲಗುವ ಮುನ್ನ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದಷ್ಟೇ ಅಲ್ಲದೇ ಬಾಳೆಹಣ್ಣಿನಲ್ಲಿರುವ ಉತ್ತಮ ಪೌಷ್ಟಿಕಾಂಶಗಳು ಶಿಶ್ನದ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. ಹಾಗೂ ನಿಮಗೇನಾದರೂ ರಕ್ತದೊತ್ತಡ ಸಮಸ್ಯೆ ಇದ್ದರೆ ಅದನ್ನೂ ನಿವಾರಿಸುತ್ತದೆ.

ಪ್ರತಿನಿತ್ಯ ನೀವು ನಿಯಮಿತವಾಗಿ ಬಾಳೆಹಣ್ಣು ಸೇವಿಸುವುದರಿಂದ ನಿಮ್ಮ ಆರೋಗ್ಯವೂ ಸುಧಾರಿಸಲು ಸಾಧ್ಯವಾಗುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ. ಹಾಗೂ ಬಾಳೆಹಣ್ಣಿನಲ್ಲಿರುವ ವಿಟಮಿನ್ ಏ, ಬಿ1, ವಿಟಮಿನ್ ಸಿ ಹೇರಳವಾಗಿ ಸಿಗುವುದರಿಂದ ಶಕ್ತಿವಂತ ಹಾಗೂ ಆರೋಗ್ಯವಂತ ವೀರ್ಯಾಣುಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಪ್ರತಿನಿತ್ಯ ಪೌಷ್ಟಿಕ ಆಹಾರವನ್ನು ಸೇವನೆ ಮಾಡಿ. ಆದಷ್ಟು ಹೊರಗಿನ ತಿಂಡಿಗಳನ್ನು ಹಾಗೂ ಕರಿಡಿರುವ ಪದಾರ್ಥಗಳಿಂದ ದೂರವಿರಿ. ಹಾಗೂ ಪ್ರತಿನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮಾಡುವುದರಿಂದ ಒಟ್ಟಾಗಿ ನಿಮ್ಮ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಇಂದಿನ ಮಾಹಿತಿ ನಿಮಗಿಷ್ಟವಾಗಿದ್ದರೆ. ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *