ಹಲವಾರು ಉಪಯೋಗಗಳು: ಉತ್ತರಾಣಿ ಎಲೆಯ ಕಷಾಯ, ಇಲ್ಲವೇ ರಸ ಸೇವನೆಯಿಂದ ಮೂತ್ರ ವಿಸರ್ಜನೆಯ ಕ್ಲೇಶವಿರುವುದಿಲ್ಲ. ಭೇದಿಯಾಗುವ ಸಂದರ್ಭದಲ್ಲಿ ಈ ಎಲೆಯ ರಸವನ್ನು ಮೊಸರಿಗೆ ಬೆರೆಸಿಕೊಂಡು ಸೇವಿಸಿದರೆ ತಕ್ಷಣ ಭೇದಿ ನಿಲ್ಲುತ್ತದೆ.
ಉತ್ತರಾಣಿ ರಸದಿಂದ ಮೂಲವ್ಯಾಧಿ, ಹೊಟ್ಟೆ ನೋವು, ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯೌಷಧ. ಉತ್ತರಾಣಿ ಬೇರನ್ನು ಕುಟ್ಟಿ ರಸತೆಗೆದು ನೀರಿನಲ್ಲಿ ಕುದಿಸಿ ಕುಡಿದರೆ ನಿದ್ರಾಹೀನತೆ ದೂರವಾಗುತ್ತದೆ.
ಒಣಗಿದ ಉತ್ತರಾಣಿ ಕಡ್ಡಿಯ ಕಾಂಡವನ್ನು ಸುಟ್ಟು ಭಸ್ಮಮಾಡಿ ಅದಕ್ಕೆ ಕಾಳುಮೆಣಸಿನಪುಡಿ ಜೇನುತುಪ್ಪಕ್ಕೆ ೩-೪ ಚಿಟಿಕೆಹಾಕಿಕೊಂಡು ಸೇವಿಸಿದರೆ ನೆಗಡಿ ಕೆಮ್ಮು, ರಕ್ತಹೀನತೆ, ಅಸ್ತಮಾ, ಹೃದಯ ಸಂಬಂಧೀ ಕಾಯಿಲೆಗಳಿಗೆ ಉಪಯೋಗಕಾರಿಯಾಗುತ್ತದೆ.
ಚೇಳು, ಜೇನುಹುಳ, ಮತ್ತಿತರ ಕೀಟಗಳು ಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಲೇಪವನ್ನು ಗಾಯದಮೆಲೆ ಹಚ್ಚಿದರೆ ಉಪಶಮನವಾಗುತ್ತದೆ.
ಬೆಲ್ಲಕ್ಕೆ ಒಂದು ಚಮಚೆ ಉತ್ತರಾಣಿ ರಸವನ್ನು ಸೇರಿಸಿ ಬೆಳಿಗ್ಯೆ ಎದ್ದಕೂಡಲೇ ಖಾಲಿಹೊಟ್ಟೆಗೆ ಸೇವಿಸುವುದರಿಂದ ರಕ್ತಹೀನತೆಗೆ ಒಳ್ಳೆಯ ಉಪಕಾರಿಯಾಗುತ್ತದೆ.
ಉತ್ತರಾಣಿಯ ಭಸ್ಮ, ಕ್ಷಾರದ ಗುಣವನ್ನು ಹೊಂದಿರುವುದರಿಂದ ಬಟ್ಟೆ ತೊಳೆಯಲು ಮಾರ್ಜಕವಾಗಿಯೂ ಬಳಸಬಹುದಾಗಿದೆ. ಉತ್ತರಾಣಿಯ ಭಸ್ಮ, ಉಪ್ಪು ಹಾಗೂ ಸಾಸಿವೆ ಎಣ್ಣೆಯ ಲೇಹ್ಯದಿಂದ ಹಲ್ಲುಜ್ಜಿದರೆ, ಹಲ್ಲುನೋವು ನಿವಾರಣೆಯಾಗುತ್ತದೆ. ಕೆಲವರು ಉತ್ತರಾಣಿಯ ಒಣಗಿದ ಕಡ್ಡಿಯಿಂದ ಹಲ್ಲುಜ್ಜುತ್ತಾರೆ.