ನಾವು ಜೀವನವನ್ನು ನಡೆಸಲು ನಮಗೆ ಯಾಕೆ ಮುಖ್ಯವಲ್ಲ ವಸ್ತು ಎಂದರೆ ಅದು ಹಣ ಇದನ್ನು ಸಂಪಾದಿಸಲು ನಾವು ಹಲವಾರು ರೀತಿಯಿಂದ ಪ್ರಯತ್ನವನ್ನು ಪಡುತ್ತೇವೆ ಅದರಲ್ಲಿ ಯಶಸ್ಸನ್ನು ಕೂಡ ನಾವು ಪಡೆಯುತ್ತೇವೆ. ಮಹಿಳೆಯರ ವಿಷಯದಲ್ಲಿ ಕೆಲವೊಮ್ಮೆ ಪತಿಯ ಮೇಲೆ ಹೆಚ್ಚಾಗಿ ಆವಲಂಬಿತವಾಗಿರುತ್ತಾರೆ ಆದರೆ.ಇವತ್ತಿನ ಮಾಹಿತಿಯಲ್ಲಿ ಮಹಿಳೆಯರು ಯಾವ ರೀತಿಯಿಂದ ಕರ್ನಾಟಕ ಸರ್ಕಾರದಿಂದ ಹಣದ ರೂಪದಲ್ಲಿ ಸಹಾಯವನ್ನು ಪಡೆದು ಅದರಿಂದ ತಮ್ಮ ಜೀವನವನ್ನು ಹೇಗೆ ಕಟ್ಟಿಕೊಳ್ಳಬಹುದೆಂದು ಇಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮಹಿಳೆಯರು ತಮ್ಮ ಪತಿಯ ಸಹಾಯವಿಲ್ಲದೆ ತಮ್ಮ ಕಾಲಿನ ಮೇಲೆ ತಾವೇ ನಿಲ್ಲಬಹುದು .ಹೆಣ್ಣು ಮಕ್ಕಳಿಗೆ ಹಣದ ಸಹಾಯವನ್ನು ಮಾಡುವುದರ ಮುಖಾಂತರ, ಆ ಹಣವನ್ನು ಮಹಿಳೆಯರು ಪಡೆದು ಕೆಲವೊಂದಷ್ಟು ಕೆಲಸವನ್ನು ಮಾಡುವುದರ ಮುಖಾಂತರ ಅಂದರೆ ಉದಾಹರಣೆಗೆ ಟೈಲರಿಂಗ್, ಕೆಲಸ ಚಿಕ್ಕ ಗಿರಣಿ ಅಂಗಡಿ, ತರಕಾರಿ ಅಂಗಡಿ, ಬ್ಯೂಟಿ ಪಾರ್ಲರ್, ಅಗರಬತ್ತಿ ತಯಾರಿಕೆ, ಡೈರಿ,ಹೀಗೆ ಯಾವ ಕೆಲಸಕ್ಕೆ ಹಣದ ಅವಶ್ಯಕತೆ ಇರುತ್ತದೆಯೋ ಅಂತಹ ಕೆಲಸಗಳಿಗೆ ಉಪಯೋಗವಾಗುವಂತೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಲು ಕೆಳಗೆ ಕೊಟ್ಟಿರುವಂತಹ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಸಿ.
ಉದ್ಯೋಗಿನಿ ಯೋಜನೆಯಡಿ ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ. ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಇವುಗಳಲ್ಲಿ ಹೊಲಿಗೆ, ಮತ್ರೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ, ಡೈರಿ ಹಾಗೂ ಕುಕ್ಕುಟೋದ್ಯಮ ಕೂಡ ಸೇರಿವೆ.ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಾಲ ದೊರೆಯುತ್ತದೆ.
ಇದಕ್ಕೂ ಕೂಡ ವಯಸ್ಸಿನ ಮಿತಿ ಇದೆ ಅದೇನೆಂದರೆ 18ರಿಂದ 55 ವರ್ಷಷ ವಯಸ್ಸಿನ ಮಹಿಳೆಯರು ಬಡ್ಡಿರಹಿತ ಸಾಲ ಪಡೆಯಲು ಅರ್ಹರಾಗಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಾದರೆ ಕುಟುಂಬದವರಿಗೆ ಹೆಚ್ಚಿನ ಆದಾಯವಿದ್ದರೂ ಸಾಲ ನೀಡಲು ಪರಿಗಣಿಸಲಾಗುತ್ತದೆ. ಇದಕ್ಕೆ ಬೇಕಾಗಿರುವಂತಹ ಪತ್ರಗಳನ್ನು ನೋಡುವುದಾದರೆ .
ಆಧಾರ್ ಕಾರ್ಡ್ ಜನನ ಪ್ರಮಾಣಪತ್ರ ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್‌ಹೆಡ್ ಇರುವ ಪತ್ರ ಬಿಪಿಎಲ್ ಕಾರ್ಡ್ ಪ್ರತಿ ಜಾತಿ ಪ್ರಮಾಣಪತ್ರ ಆದಾಯ ಪ್ರಮಾಣಪತ್ರ ಇಷ್ಟೆಲ್ಲ ಮುಖ್ಯವಾದ ಅಂತಹ ಪ್ರಮಾಣ ಪತ್ರಗಳು ನಿಮ್ಮಲ್ಲಿ ಮುಂಚಿತವಾಗಿ ಇರಬೇಕಾಗುತ್ತದೆ ಇವೆಲ್ಲವನ್ನು ಒಂದು ಕಡೆ ಇಟ್ಟುಕೊಂಡು ನೀವು ನಿಮ್ಮ ಕೆಲಸವನ್ನು ಶುರು ಮಾಡಿದರೆ ನಿಮಗೆ ಯಾವುದೇ ರೀತಿಯಾದಂತಹ ಅಡೆತಡೆಗಳು ಬರುವುದಿಲ್ಲ ಕೆಲವೊಮ್ಮೆ ಈ ಪತ್ರಗಳು ಸರಿಯಾಗಿ ಇಲ್ಲದಿರುವಂತಹ ಕಾರಣ ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತಾರೆ ಅದಕ್ಕಾಗಿಯೇ ಮುಂಜಾಗ್ರತವಾಗಿ ನೀವು ಇವನ್ನೆಲ್ಲ ಪಾಲಿಸಿ.
ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್‌ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆಯಂಡ್ ಸಿಂಗ್ ಬ್ಯಾಂಕ್, ಸಾರಸ್ವತ ಬ್ಯಾಂಕ್‌ಗಳಲ್ಲಿಯೂ ಸಾಲ ಪಡೆಯಹುದಾಗಿದೆ. ಇವುಗಳು ಮಾತ್ರವಲ್ಲದೆ ಎಲ್ಲ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳಿಂದಲೂ ಸಾಲ ಪಡೆಯಬಹುದಾಗಿದೆ. ನೀವು ಕೂಡ ಈಗಲೇ ನಿಮ್ಮ ಅರ್ಜಿಯನ್ನು ಸಲ್ಲಿಸಿ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿ. ಈ ಮಾಹಿತಿಯನ್ನು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.