ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ನೀವೆಲ್ಲ ಸೃಷ್ಟಿಯ ಲಯಕರ್ತನಾದ ಪರಮೇಶ್ವರನು ಮಹೇಶ್ವರ, ಮಲ್ಲಿಕಾರ್ಜುನ, ಮಹಾಬಲೇಶ್ವರ, ತ್ರಯಂಬಕೇಶ್ವರ, ಮಂಜುನಾಥ ಹೀಗೆ ಬೇರೆ ಬೇರೆ ಹೆಸರುಗಳಿಂದ ಅನೇಕ ಸ್ಥಳಗಳಲ್ಲಿ ನೆಲೆ ನಿಂತಿರುವುದನ್ನು ಕೆಳಿದ್ದಿವಿ ನೋಡಿದ್ದಿವಿ ಆದ್ರೆ ಯಾವತ್ತಾದರೂ ಪಾರ್ವತಿ ಪತಿಯನ್ನು ಮಾತನಾಡುವ ಮಹಾಲಿಂಗ ಎಂದು ಕರೆಯುವ ಕ್ಷೇತ್ರದ ಬಗ್ಗೆ ಕೇಳಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ಮಾತನಾಡುವ ಮಹಾಲಿಂಗ ಎಂದೇ ಕರೆಯುವ ಶಿವನ ಆ ಪುಣ್ಯ ಸ್ಥಳ ಯಾವುದು ಇಲ್ಲಿನ ಮಹಿಮೆಗಳನ್ನು ಏನು ಎಂಬುದನ್ನು ತಿಳಿದುಕೊಂಡು ಬರೋಣ. ಉಳ್ತೂರಿನಲ್ಲಿ ಸುಮಾರು ೮೦೦-೯೦೦ ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿರುವ ಪ್ರಾಚೀನ ಶಿವಾಲಯವಿದ್ದು ಈ ಶಿವಾಲಯವನ್ನು ಬಾರ್ಕೂರಿನ ರಾಜ ಮನೆತನದವರು ನಿರ್ಮಿಸಿದರು ಎಂಬ ಐತಿಹ್ಯ ಇದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇಗುಲವನ್ನು ಸ್ವಲ್ಪ ವರ್ಷಗಳ ಹಿಂದೆ ಪುನರ್ ನಿರ್ಮಾಣ ಮಾಡಲಾಗಿದ್ದು, ನೂತನ ದೇಗುಲವು ಗರ್ಭಗೃಹ, ಹೆಬ್ಬಾಗಿಲು, ತೀರ್ಥ ಮಂಟಪ, ಒಳ ಹೆಬ್ಬಾಗಿಲುಗಳನ್ನೂ ಒಳಗೊಂಡಿದೆ.

 

ಈ ಆಲಯದ ಗರ್ಭ ಗುಡಿಯಲ್ಲಿ ಕಪ್ಪು ವರ್ಣದ ಶಿಲೆಯಲ್ಲಿ ಇರುವ ಮೂಲ ಶಿವನ ಲಿಂಗವನ್ನು ಪುನಃ ಪ್ರತಿಷ್ಠಾಪಿಸಲಾಗಿದೆ. ಈ ದೇವನನ್ನು ನಂಬಿ ಬಂದರೆ ಎಂತಹ ಕಷ್ಟಗಳು ಇದ್ದರೂ ಅವು ದೂರಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಇತರರಿಗೆ ಸದಾ ಒಳಿತನ್ನು ಬಯಸುವ ಊರು ಎಂದೇ ಕರೆಯುತ್ತಿದ್ದ ಒಳತ್ತೋರು ಕಾಲ ಕ್ರಮೇಣ ಒಳ್ತೂರು ಎಂದಾಗಿ ಬಾಯಿಂದ ಬಾಯಿಗೆ ಹರಿದಾಡಿ ಈ ಸ್ಥಳವು ಉಳ್ತೂರೂ ಎಂದು ಕರೆಯಲ್ಪಡುತ್ತಿ ದ್ದು, ಉಳ್ತೋರು ಸೀಮೆಯ ಆರಾಧ್ಯ ದೈವವಾದ ಶ್ರೀ ಮಹಾಲಿಂಗೇಶ್ವರ ನನ್ನು ಒಳತ್ತೊರು ಕೆರೆಯ ಮಹಾದೇವ, ಮಾತನಾಡುವ ಮಹಾಲಿಂಗ ಎಂಬ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇಲ್ಲಿನ ದೇವರನ್ನು ಮಾತನಾಡುವ ಮಹಾಲಿಂಗ ಎಂದು ಕರೆಯುವುದರ ಹಿಂದೆ ಒಂದು ಘಟನೆ ಇದೆ. ಈ ಕ್ಷೇತ್ರಕ್ಕೆ ಬಂದು ದೇವರ ಎದುರು ನಿಂತು ಮನದಲ್ಲಿರುವ ಮಾತುಗಳನ್ನು ಬಾಯಿ ಬಿಟ್ಟು ಹೇಳಿಕೊಂಡರೆ ಆ ಸ್ವಾಮಿ ನಾವು ಹೇಳುವ ಮಾತುಗಳನ್ನು ಕೇಳಿಸಿಕೊಂಡು ಎಷ್ಟೇ ಕಷ್ಟಕರವಾದ ಸಮಸ್ಯೆಗಳು ಇದ್ದರೂ ಅವುಗಳನ್ನು ಪರಿಹರಿಸುತ್ತಾರೆ ಎನ್ನುವ ಕಾರಣದಿಂದ ಇಲ್ಲಿ ನೆಲೆಸಿರುವ ದೇವನನ್ನು ಮಾತನಾಡುವ ಮಹಾಲಿಂಗ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ಕ್ಷೇತ್ರಕ್ಕೆ ಬಂದು ಏನನ್ನೇ ಹರಕೆ ಹೊತ್ತುಕೊಂಡರೆ ಅವು ಮಹಾಲಿಂಗೇಶ್ವರನ ಕೃಪೆಯಿಂದ ನೆರವೇರುತ್ತದೆ ಎಂದು ಈ ದೇವನನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಪ್ರತೀ ವರ್ಷ ಫೆಬ್ರವರಿ ತಿಂಗಳಲ್ಲಿ ಈ ದೇಗುಲದಲ್ಲಿ ದೇವರ ಜಾತ್ರಾ ಮಹೋತ್ಸವವನ್ನಾ ಐದು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಇಷ್ಟಾರ್ಥಗಳು ಸಿದ್ಧಿ ಆದರೆ ತುಲಾಭಾರ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತುಕೊಂಡು ಭಕ್ತರು ಇಲ್ಲಿಗೆ ಬಂದು ಸ್ವಾಮಿಗೆ ತುಲಾಭಾರ ಸೇವೆಯ ಹರಕೆಯನ್ನು ತೀರಿಸಿ ಕೃತಾರ್ಥರಾಗುತ್ತಾರೆ.

 

ಇನ್ನೂ ಕೆಲವೇ ಕೆಲವು ದೇಗುಲಗಳಲ್ಲಿ ಮಾತ್ರ ನಡೆಸುವ ಓಕುಳಿ ಸೇವೆಯನ್ನು ಈ ಕ್ಷೇತ್ರದಲ್ಲಿ ಜಾತ್ರೆ ಸಮಯದಲ್ಲಿ ನಡೆಸಲಾಗುತ್ತದೆ. ಭಕ್ತರು ಬೇಡಿದ ವರವನ್ನು ನೀಡುವ ಮಹಾಲಿಂಗೇಶ್ವರ ಗೆ ನಿತ್ಯವೂ ಅಭಿಷೇಕ, ಅನ್ನ ನೈವೇದ್ಯ, ನಿತ್ಯ ಬಲಿ, ಮುಂತಾದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆಯನ್ನು ಮಾಡಲಾಗುತ್ತಿದ್ದು, ಕಾರ್ತಿಕ ಸೋಮವಾರ, ಶಿವರಾತ್ರಿಯಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯ ಬೆಳಿಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಸಂಜೆ ೫ ರಾತ್ರಿ ೮ ಗಂಟೆ ವರೆಗೆ ಈ ದೇವರ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ, ಅಷ್ಟ ನಾಮವಳಿ ಸೇವೆ, ಹರಿಣಾಮ ನೈವೇದ್ಯ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೇಗುಲದ ಅರ್ಚಕರ ದೂರವಾಣಿ ಸಂಖ್ಯೆ 9964143573 ಯನ್ನ ಸಂಪರ್ಕಿಸಬಹುದು. ಮಾತನಾಡುವ ಮಹಾಲಿಂಗ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ತುರೂ ಎಂಬ ಊರಿನಲ್ಲಿದೇ. ಈ ದೇಗುಲವು ಬೆಂಗಳೂರಿನಿಂದ 404 ಕಿಮೀ, ಉಡುಪಿಯಿಂದ 31 ಕಿಮೀ, ಕುಂದಾಪುರದಿಂದ 12 ಕಿಮೀ, ತೆಕ್ಕಟ್ಟೆ ಇಂದ ಕೇವಲ 4.5 ಕಿಮೀ ದೂರದಲ್ಲಿದೆ. ಕುಂದಾಪುರ ವೂ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಕುಂದಾಪುರ ದಿಂದ ಸರ್ಕಾರಿ ಬಸ್ ಬಾಡಿಗೆ ವಾಹನದ ಮುಖಾಂತರ ಸುಲಭವಾಗಿ ಈ ಕ್ಷೇತ್ರಕ್ಕೆ ತಲುಪಬಹುದು. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆಯಾದರೂ ನೀವೂ ಭೇಟಿ ನೀಡಿ. ಒಳ್ಳೆಯದಾಗಲಿ. ಶುಭದಿನ.

Leave a Reply

Your email address will not be published. Required fields are marked *