ನೀವು ಸಹ ಊಟದ ಜೊತೆ ತುಪ್ಪವನ್ನು ಬೆರಸಿ ತಿನ್ನುತ್ತಿರಾ ಹಾಗಾದ್ರೆ ನೀವು ಈ ವಿಚಾರವನ್ನು ಖಂಡಿತವಾಗಿ ತಿಳಿದುಕೊಳ್ಳಲೇಬೇಕು ಇದರಿಂದ ಏನ್ ಎನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ತುಪ್ಪದ ವಿಚಾರದಲ್ಲಿಆರೋಗ್ಯಕ್ಕೆ ಸಂಬಂಧಿಸದಂತೆ ನಮ್ಮ ಆಯುರ್ವೇದದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ, ರುಚಿಗೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಈ ತುಪ್ಪವನ್ನು ಬಳಸಲಾಗುತ್ತದೆ, ಇನ್ನೂ ಯಾವ ಆರೋಗ್ಯ ಸಮಸ್ಯೆಗಳಿಗೆ ಈ ತುಪ್ಪವು ರಾಮಬಾಣ ಎಂಬುದರ ಬಗ್ಗೆ ಎಂದು ತಿಳಿಯೋಣ.
ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದವರು ಅಥವಾ ಮಲಬದ್ಧತೆಯ ಸಮಸ್ಯೆ ಇದ್ದವರು ಪ್ರತಿದಿನ ರಾತ್ರಿ ಮಲಗುವ ಮುನ್ನ 2 ಚಮಚ ತುಪ್ಪವನ್ನು ತಿನ್ನಬೇಕು ಹಾಗೂ ಅದರ ಜೊತೆಯಲ್ಲಿ ಹಾಲನ್ನು ಕುಡಿಯಬೇಕು ಇದರಿಂದ ಕರುಳು ಶುದ್ಧವಾಗಿರುತ್ತದೆ ಸಮಸ್ಯೆಗಳಿದ್ದರೆ ಅದೂ ನಿವಾರಣೆಯಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ ದೈನಂದಿನ ಆಹಾರದ ಜೊತೆಯಲ್ಲಿ ತುಪ್ಪವನ್ನು ಸೇವಿಸುವ ಅಭ್ಯಾಸ ಇದ್ದವರಿಗೆ ಸೊಂಟದ ಸುತ್ತಲಿನ ಬೊಜ್ಜು ಕರಗುತ್ತದೆ ಪ್ರಮಾಣದ ಅಮಿನೋ ಆಸಿಡ್ ಅಂಶವಿರುತ್ತದೆ, ಇದು ದೇಹದಲ್ಲಿ ಬೇಡದ ಕೊಬ್ಬುಗಳನ್ನು ಬೆಳೆಯಲು ಬಿಡುವುದಿಲ್ಲ ಹಾಗೂ ಈ ಮುಂಚೆ ಬೆಳೆದ ಕೊಬ್ಬುಗಳನ್ನು ಕರಗಿಸಿ ಬಿಡುತ್ತದೆ.
ತ್ವಚೆಯ ಆರೋಗ್ಯ ಅಥವಾ ತ್ವಚೆಯ ರಕ್ಷಣೆಗಾಗಿ ತುಪ್ಪವನ್ನು ಮೊದಲಿನಿಂದಲೂ ಬಳಸಲಾಗುತ್ತಿತ್ತು ತುಪ್ಪವು ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಕಡಲೆಹಿಟ್ಟಿಗೆ ಸ್ವಲ್ಪ ತುಪ್ಪ ಸ್ವಲ್ಪ ಅರಿಶಿನ ಮತ್ತು ನೀರು ಸೇರಿಸಿ ಪೇಸ್ಟ್ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು ಮತ್ತು ಅದನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಆರೋಗ್ಯವಾಗಿಯೂ ಇರುತ್ತದೆ ಮತ್ತು ಉತ್ತಮ ಕಾಂತಿಯನ್ನು ಪಡೆಯುತ್ತದೆ.
ಗಂಟಲಿನ ಕೆರೆತ ಹಾಗೂ ನೆಗಡಿಯಿಂದ ಮೂಗು ಕಟ್ಟಿಕೊಂಡರೆ ಉಸಿರಾಡಲು ಬಹಳಷ್ಟು ಸಮಸ್ಯೆ ಆಗುತ್ತದೆ ಅಷ್ಟೇ ಅಲ್ಲದೆ ವಾಸನೆ ಗ್ರಹಿಸುವ ಶಕ್ತಿಯು ಕಡಿಮೆಯಾಗುತ್ತದೆ, ನಗಡಿ ಸಮಸ್ಯೆಯೂ ಹೀಗೆ ಮುಂದುವರೆದರೆ ಇದರಿಂದ ತಲೆ ನೋವು ಕೂಡ ಕಾಣಿಸಿಕೊಳ್ಳುತ್ತದೆ, ತುಪ್ಪದಿಂದ ಈ ಸಮಸ್ಯೆಗೆ ಒಂದು ಸರಳ ಉಪಾಯವನ್ನು ನೀಡುತ್ತೇವೆ, ತುಪ್ಪವನ್ನು ಸ್ವಲ್ಪ ಮಟ್ಟಿಗೆ ಬಿಸಿ ಮಾಡಿ ಹಾಗೂ ಬೆಚ್ಚಗಾದ ಕೂಡಲೇ ಮೂಗಿನ ನಾಳಕ್ಕೆ ಬಿಡಿ, ಈ ಕಾರ್ಯವನ್ನು ಬೆಳಗ್ಗೆ ಎದ್ದ ಕೂಡಲೇ ಮಾಡಬೇಕು ಹೀಗೆ ಮಾಡುವುದರಿಂದ ಮೂಗು ಹಾಗೂ ಗಂಟಲಿನ ಸೋಂಕು ಗುಣವಾಗಿ ಉಸಿರಾಟ ಸುಲಭವಾಗುತ್ತದೆ.