WhatsApp Group Join Now

ಊಟದ ತಟ್ಟೆಯಲ್ಲಿ ಬಡಿಸಿರುವ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳು ಅತ್ಯಲ್ಪ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿಗೆ ಹೋಗುತ್ತವೆ. ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ.

ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ. ಈ ಲಹರಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಕೆಟ್ಟ ಶಕ್ತಿಗಳ ವಾಸನೆ ಜಾಗೃತವಾಗುವುದು ಹೆಚ್ಚುಕಡಿಮೆ ಅಸಾಧ್ಯವೇ ಆಗಿದೆ.

ಹಿಂದೂ ಸಂಸ್ಕೃತಿಯಂತೆ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನು ಹಾಕಿ, ಆಪತತ್ತ್ವಾತ್ಮಕ ಕವಚವನ್ನು ನಿರ್ಮಾಣ ಮಾಡಿ ಅನ್ನವನ್ನು ಸ್ವೀಕರಿಸುವ ವ್ಯಕ್ತಿಗೆ, ಇತರ ವ್ಯಕ್ತಿಗಳ ತುಲನೆಯಲ್ಲಿ ಮೈಯಲ್ಲಿ ಸೇರುವುದು ಅಥವಾ ವ್ಯಕ್ತಿಯ ಮೇಲೆ ಹಿಡಿತ ಸಾಧಿಸಲು ಕೆಟ್ಟ ಶಕ್ತಿಗಳಿಗೆ ಶೇ.೨೦ರಷ್ಟು ಹೆಚ್ಚು ಕಠಿಣವಾಗಿರುತ್ತದೆ.ಕೆಲವೊಮ್ಮೆ ವ್ಯಕ್ತಿಗೆ ತೊಂದರೆಗಳನ್ನು ಕೊಡಲು ದೊಡ್ಡ ಕೆಟ್ಟ ಶಕ್ತಿಗಳು ಅನ್ನದ ಮಾಧ್ಯಮದಿಂದ ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತವೆ ಎಂದು ಹೇಳಲಾಗುತ್ತದೆ.

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ ವಾಸನೆ ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುವುದರಿಂದ ಊಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದಾಗ ಅವನಿಗೆ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬಾರದು.

WhatsApp Group Join Now

Leave a Reply

Your email address will not be published. Required fields are marked *