ನಮಸ್ತೆ ಪ್ರಿಯ ಓದುಗರೇ, ನಮಗೆ ಊಟ ಆದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ಮಜ್ಜಿಗೆ ಭೂಲೋಕದ ಅಮೃತ ಇದ್ದಂತೆ. ಎಷ್ಟೋ ವರ್ಷಗಳಿಂದ ನಾವು ಮಜ್ಜಿಗೆಯನ್ನು ಕುಡಿಯುತ್ತಾ ಬಂದಿದ್ದೇವೆ. ಎಷ್ಟೋ ಸಲ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಹೋದಾಗ ಊಟ ಆದ ನಂತರ ಮಜ್ಜಿಗೆ ಒಂದುವೇಳೆ ಕುದಿಯಲಿಲ್ಲ ಎಂದರೆ ಆ ಊಟ ಅಪೂರ್ಣ ಎನಿಸುತ್ತದೆ. ಮಜ್ಜಿಗೆ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾನೆ ಮುಖ್ಯ. ಮಜ್ಜಿಗೆ ಕೇವಲ ಆಹಾರ ಪದಾರ್ಥ ಅಲ್ಲ ಇದರಲ್ಲಿ ಹಲವಾರು ಔಷಧ ಗುಣಗಳಿವೆ. ಮಜ್ಜಿಗೆ ಮಾನವನ ಆರೋಗ್ಯಕ್ಕೆ ಅಮೃತದ ಸಮಾನ ಎಂದರೆ ತಪ್ಪಾಗಲಾರದು. ಬನ್ನಿ ಊಟ ಆದ ನಂತರ ಮಜ್ಜಿಗೆ ಕುಡಿಯುವುದರಿಂದ ಏನೆಲ್ಲಾ ಲಾಭಗಳು ಆಗುತ್ತದೆ ಎಂದು ಇಂದಿನ ಲೇಖನದಲ್ಲಿ ನೋಡೋಣ . ಮೊದಲಿಗೆ ಮಜ್ಜಿಗೆಯಲ್ಲಿ ಯಾವೆಲ್ಲ ಪೌಷ್ಟಿಕಾಂಶಗಳು ಇದವೆ ಎಂದು ತಿಳಿಯೋಣ ಸ್ನೇಹಿತರೆ. ಮಜ್ಜಿಗೆಯಲ್ಲಿ ಪ್ರೋಟಿನ್ ಇದೆ, ಕಾರ್ಬೋಹೈಡ್ರೇಟ್ ಇವೆ, ಫ್ಯಾಟ್ ಇದೆ, ಕ್ಯಾಲ್ಸಿಯಂ ಇದೆ, ಫೈಬರ್ ಇದೆ, ಸೋಡಿಯಂ ಇದೆ, ರೈಬೋಫ್ಲೋವಿನ್ ಇದೆ ಮತ್ತು ವಿಟಮಿನ್ ಬಿ 12 ಕೂಡ ಇದೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವಂತಹ ಮಜ್ಜಿಗೆಯನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಗಳಿಗೆ ರಕ್ಷಣೆ ಸಿಗುತ್ತದೆ.

ಹೌದು ಮಜ್ಜಿಗೆಯಲ್ಲಿ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಡಿ ಹಾಗೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುವುದರಿಂದ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಬಲಿಷ್ಠವಾಗಿ ಇರುತ್ತವೆ. ಇನ್ನೂ ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಹೆಚ್ಚಾಗಬೇಕು ಎಂದರೆ ಮಜ್ಜಿಗೆಯಲ್ಲಿ ಸ್ವಲ್ಪ ಉಪ್ಪು ಹಾಗೂ ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯುವುರಿಂದ ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಇನ್ನೂ ಮಜ್ಜಿಗೆಯಲ್ಲಿ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ಸೇರಿಸಿ ಕುಡಿಯುವದರಿಂದ ಪಿತ್ತದಿಂದ ಕಾಡುವ ಎದೆಉರಿ, ಹುಳಿತೇಗು ಶಮನವಾಗುತ್ತದೆ. ಮತ್ತು ಮಜ್ಜಿಗೆಯಲ್ಲಿ ಉಪ್ಪು ಹಾಗೂ ಹಸಿ ಶುಂಠಿ ರಸ ಸೇರಿಸಿ ಕುಡಿಯುವುದರಿಂದ ವಾಂತಿ ಕೂಡ ಕಡಿಮೆ ಆಗುತ್ತದೆ. ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯ ಇರುವ ಖನಿಜಗಳು ಇರುತ್ತವೆ, ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಅಜೀರ್ಣ ಹೊಟ್ಟೆ ನೋವು ಕಂಡು ಬಂದರೆ ಅರ್ಧ ಲೋಟ ಮಜ್ಜಿಗೆಗೆ ಇಂಗು, ಉಪ್ಪು ಸೇರಿಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆ ನೋವು ಕೂಡ ಕಡಿಮೆ ಆಗುತ್ತದೆ.

ಮಜ್ಜಿಗೆಯಲ್ಲಿ ಇರುವ ಪೊಟ್ಯಾಸಿಯಂ ಅಂಶವು ರಕ್ತದ ಒತ್ತಡವನ್ನು ಸಹಿತ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಹಾಗೂ ಇದರಲ್ಲಿರುವ ಕ್ಯಾಲ್ಸಿಯಂ ಹಾಗೂ ಉತ್ತಮವಾದ ಪೌಷ್ಟಿಕಾಂಶಗಳು ನಮ್ಮ ಮೂಳೆಗಳಿಗೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಮತ್ತು ನಿಯಮಿತವಾಗಿ ಮಜ್ಜಿಗೆಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ನಮ್ಮ ರಕ್ತ ನಾಳಗಳಲ್ಲಿ ಲೇಪಿತವಾಗಿರುವ ಅಥವಾ ಶೇಖರಣೆ ಆಗಿರುವ ಕೊಬ್ಬಿನ ಅಂಶ ಕೂಡ ತೆಗೆದು ಹಾಕಲು ಸಹಾಯ ಮಾಡುತ್ತದೆ. ಹಾಗೂ ಮಜ್ಜಿಗೆಯ ಜಠರದ ಒಳ ಪದರದಲ್ಲಿ ಲೆಪಿತವಾಗಿರುವ ಜಠರದ ತೀಕ್ಷ್ಣ ಸ್ರಾವವನ್ನು ಕೂಡ ನಿಯಂತ್ರಿಸುತ್ತದೆ. ಇನ್ನು ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನೂ ನಿಮಗೇನಾದರೂ ಮೂತ್ರ ವಿಸರ್ಜನೆ ಮಾಡುವಾಗ ಕಷ್ಟವಾಗುತ್ತ ಇದ್ದರೆ ಮಜ್ಜಿಗೆಗೆ ಸ್ವಲ್ಪ ಬೆಲ್ಲವನ್ನೂ ಸೇರಿಸಿ ಕುಡಿಯುವುದರಿಂದ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಮಜ್ಜಿಗೆಯನ್ನು ನಿಯಮಿತವಾಗಿ ಊಟಾ ಆದ ನಂತರ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಅಂತ. ಈ ಮಾಹಿತಿ ಇಷ್ಟ ಆಗಿದ್ದರೆ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *