ನಮಸ್ತೆ ಪ್ರಿಯ ಓದುಗರೇ, ವ್ಯಕ್ತಿಯೂ ಜೀವನ ಮಾಡಲು ಆಹಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅಗತ್ಯವಿರುವ ಆಹಾರವನ್ನು ನಾವು ಸೇವನೆ ಮಾಡಿದರೆ ನಮ್ಮ ಆರೋಗ್ಯ ಎಲ್ಲಾ ದೃಷ್ಟಿಯಿಂದ ಆರೋಗ್ಯವಾಗಿ ಇರುತ್ತದೆ ಆದ್ರೆ, ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದ್ರೆ ನಮ್ಮ ದೇಹಕ್ಕೆ ತೊಂದರೆ ತಪ್ಪಿದ್ದಲ್ಲ. ಕ್ರಮಬದ್ಧವಾದ ಆಹಾರ ಶೈಲಿ ಮಾತ್ರವೇ ನಮ್ಮ ದೇಹಕ್ಕೆ ಸರಿ ಆಗುತ್ತದೆ. ಆಹಾರ ಸೇವಿಸುವುದು ಎಷ್ಟು ಮುಖ್ಯವೋ ಅಷ್ಟೇ ಅದನ್ನು ಜೀರ್ಣಗೊಳಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೇ ಇದ್ದರೆ, ಸಮಸ್ಯೆಗಳು ತಪ್ಪಿದ್ದಲ್ಲ. ತಿಂದ ಆಹಾರ ಜೀರ್ಣವಾಗುವುದಕ್ಕೆ ಸಮಯ ಬೇಕು. ಅದಕ್ಕೆ ಒಮ್ಮಲೇ ಹೊಟ್ಟೆ ತುಂಬುವಷ್ಟು ತಿಂದರೆ ಜೀರ್ಣ ಕ್ರಿಯೆಗೆ ಅಡ್ಡಿ ಆಗುತ್ತದೆ. ಆಹಾರ ತಿಂದ ನಂತರ ಕನಿಷ್ಟ ಎರಡು ಗಂಟೆ ಆದರೂ ಜೀರ್ಣ ಕ್ರಿಯೆಗೆ ಅವಕಾಶ ನೀಡಬೇಕು. ಬಾಯಿ ಚಪಲಕ್ಕೆ ತಿನ್ನುವುದರಿಂದ ಆಹಾರ ಜೀರ್ಣವಾಗದೇ ದೇಹವು ಬೋಜ್ಜಿನಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರಿಗೆ ಊಟದ ನಂತರ ಏನಾದರೂ ಸೇವಿಸುವ ಚಟ ಇರುತ್ತದೆ. ಅವರ ಬಾಯಿಗೆ ಸ್ವಲ್ಪ ಹೊತ್ತು ಕೂಡ ವಿಶ್ರಾಂತಿ ನೀಡಬಾರದು ಎಂದು ನಿರ್ಧಾರ ಮಾಡಿರುತ್ತಾರೆ ಏನೋ ಸದಾ ತಿನ್ನುತ್ತಾ ಇರುತ್ತಾರೆ. ಆದ್ರೆ ಊಟಾ ನಂತರ ಮಾಡಬಾರದಾ ಕೆಲವು ಸಂಗತಿಗಳ ಬಗ್ಗೆ ವೈದ್ಯರು ಸದಾ ಹೇಳುತ್ತಲೇ ಇರುತ್ತಾರೆ. ಅದ್ರಲ್ಲಿ ಮುಖ್ಯವಾದ ವಿಷಯಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಮೊದಲನೆಯದು ಕೆಲವರು ಊಟಾ ಆದ ನಂತರ ಚಹಾ ಕುಡಿಯುವ ಅಥವಾ ಧೂಮಪಾನ ಮದ್ಯಪಾನ ಮಾಡುತ್ತಾರೆ. ವೈದ್ಯರ ಪ್ರಕಾರ ಇಂತಹ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬಾರದು. ಹೌದು! ಚಹಾ ಅಸಿಡಿಟಿ ಕ್ರಿಯೇಟ್ ಮಾಡುವುದರಿಂದ ಊಟಾ ಮಾಡಿದ ತಕ್ಷಣ ಚಹಾ ಸೇವನೆ ಮಾಡುವುದು ಉತ್ತಮವಲ್ಲ. ಇನ್ನೂ ಧೂಮಪಾನವನ್ನು ಯಾವುದೇ ಸಮಯದಲ್ಲಿ ಮಾಡಿದ್ರೂ ಕೂಡ ಹಾನಿ ಆಗುತ್ತದೆ. ಆದ್ರೆ ಊಟಾ ಆದ ನಂತರ ಧೂಮಪಾನ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಮತ್ತಷ್ಟು ಹಾನಿ ಆಗಬಹುದು. ಊಟಾ ಆದ ಮೇಲೆ ಸೇದುವ ಒಂದು ಸಿಗರೇಟ್ ಬೇರೆ ಸಮಯದಲ್ಲಿ ಹತ್ತು ಸಿಗರೇಟ್ ಸೆದಿದರೆ ಎಷ್ಟು ಪರಿಣಾಮ ಬೀರುತ್ತದೆ ಅಷ್ಟೇ ಪರಿಣಾಮ ಈ ಊಟಾ ಆದ ಬಳಿಕ ಒಂದೇ ಸಿಗರೇಟ್ ಸೇದುವುದ ರಿಂದ ಆಗುತ್ತದೆ. ಇನ್ನೂ ಊಟಾ ಆದಮೇಲೆ ಸ್ನಾನ ಮಾಡಬಾರದು, ಹೌದು! ಊಟಾ ಆದ ಮೇಲೆ ಸ್ನಾನ ಮಾಡುವುದರಿಂದ ಜೀರ್ಣ ಕ್ರಿಯೆ ಕುಂಠಿತಗೊಳ್ಳುತ್ತದೆ ಆದ್ದರಿಂದ ಊಟಾದ ತಕ್ಷಣ ಸ್ನಾನ ಮಾಡಬಾರದು.
ಹಣ್ಣುಗಳನ್ನು ಸೇವನೆ ಮಾಡಬಾರದು. ಹೌದು ಊಟಾ ಆದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದ್ರೆ ಸತ್ಯವೇ ಬೇರೆ, ಊಟಾ ಆದ ಎರಡು ಗಂಟೆಗಳ ನಂತರ ಅಥವಾ ಊಟಾ ದ ಒಂದು ಘಂಟೆ ಮುಂಚೆ ಹಣ್ಣನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಊಟಾ ಆದ ತಕ್ಷಣ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು, ಹೌದು! ಕೆಲವರು ಊಟಾ ಆಗಿ ಕೈ ತೊಳೆದ ಬಳಿಕ ಹಾಸಿಗೆಯಲ್ಲಿ ಬಿದ್ದುಬಿಡುತ್ತರೆ. ಆದ್ರೆ ಅದು ತೀರಾ ಕೆಟ್ಟ ಅಭ್ಯಾಸ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಮನುಷ್ಯರಿಗೆ ಅಗತ್ವಾಗಿರುವಷ್ಟು ನಿದ್ದೆ ಬೇಕು ಆದ್ರೆ ನಿದ್ದೆ ಮಾಡುವುದಕ್ಕೆ ಸಮಯವಿದೆ. ಊಟಾ ಆದ ನಂತರ ಕನಿಷ್ಟ ಎರಡು ಗಂಟೆ ಆದರೂ ನಿದ್ದೆ ಮಾಡಬಾರದು. ಕುಳಿತಲ್ಲೇ ಕುಳಿತುಕೊಳ್ಳಬಾರದು. ತಿಂದಿದ್ದು ಜೀರ್ಣ ಆಗಬೇಕು ಅಂದ್ರೆ ದೈಹಿಕ ಚಟುವಟಿಕೆ ಅಗತ್ಯ. ಆದ್ದರಿಂದ ಊಟಾ ಆದ ನಂತರ ಸ್ವಲ್ಪ ನಡೆಯುವುದು ಏನಾದರೂ ಕೆಲಸ ಮಾಡುವುದು ಉತ್ತಮ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ನೋಡಿದ್ರಲ್ವಾ ಸ್ನೇಹಿತರೆ ಊಟಾ ಆದ ತಕ್ಷಣ ನಿಮಗೆ ಈ ತರಹ ಕೆಟ್ಟ ಅಭ್ಯಾಸ ಇದ್ರೆ ಈಗಲೇ ಬಿಡಲು ಪ್ರಯತ್ನ ಪಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.