WhatsApp Group Join Now

ಹೌದು ಊಟವಾದ ಮೇಲೆ ಯಾವುದೇ ಕಾರಣಕ್ಕೂ ಇವುಗಳನ್ನು ಮಾಡಬೇಡಿ ಯಾವ ಯಾವ ಕೆಲ್ಸಗಳು ಅನ್ನೋದು ಇಲ್ಲಿದೆ ನೋಡಿ. ಊಟ ಮಾಡಿದ ತಕ್ಷಣ ಟೀ ಕುಡಿಯಬಾರದು ಬಾರದು :ಈ ತಪ್ಪನ್ನು ಬಹು ಸಂಖ್ಯೆಯಲ್ಲಿ ನಮ್ಮ ದೇಶದ ಜನ ಮಾಡೇ ಮಾಡುತ್ತಾರೆ, ಯಾಕೆ ಮಾಡ ಬಾರದು ಎಂದು ಕೇಳಿದರೆ ಅದಕ್ಕೆ ಉತ್ತರ ಆಹಾರ ಸೇವಿಸಿದ ತಕ್ಷಣವೇ ನೀವು ಟೀ ಕುಡಿದರೆ ಅಧಿಕ ಪ್ರಮಾಣದಲ್ಲಿ ಆಸಿಡ್ ಬಿಡುಗಡೆಯಾಗಿ ಜೀರ್ಣ ಕ್ರಿಯೆ ಸರಿಯಾಗಿ ನಡೆಯಲು ಬಿಡುವುದಿಲ್ಲ.

ಊಟ ಮಾಡಿದ ತಕ್ಷಣ ನಡೆಯ ಬಾರದು: ಊಟದ ನಂತರ ನಡೆಯುವುದು ಒಳ್ಳೆಯದು ಆದರೆ ತಕ್ಷಣ ನಡೆಯಬೇಡಿ 30 ನಿಮಿಷ ವಿಶ್ರಮಿಸಿ ನಂತರ ನಡೆಯ ಬಹುದು, ಕಾರಣ ಇಲ್ಲೂ ಸಹ ಅತಿಯಾಗಿ ಆಸಿಡ್ ಬಿಡುಗಡೆ ಗೊಂಡು ಹೊಟ್ಟೆ ಹುರಿಗೆ ಕಾರಣವಾಗುತ್ತದೆ.

ತಿಂದ ಮೇಲೆ ಬೆಲ್ಟ್ ಲೂಸ್ ಮಾಡಬೇಡಿ: ಹೆಚ್ಚಿಗೆ ಆಹಾರ ಸೇವನೆಯಾದರೆ ಬೆಲ್ಟ್ ಅನ್ನು ಸಡಿಲಮಾಡಿ ಕೊಳ್ಳುವುದು ಹಾಗು ಪ್ಯಾಂಟ್ ಅನ್ನು ಲೂಸ್ ಮಾಡಿಕೊಳ್ಳುವುದು ಮಾಡಿದರೆ ದೇಹದಲ್ಲಿ ರಕ್ತ ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.

ತಿಂದ ಮೇಲೆ ಸ್ನಾನ ಮಾಡಬೇಡಿ: ಬೆಳಗ್ಗೆ ಅಥವ ಸಂಜೆ ಯಾವುದೇ ಸಮಯವಿರಲಿ ಊಟದ ಬಳಿಕ ಸ್ನಾನ ಮಾಡಬಾರದು ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.

ಊಟ ಮಾಡಿದ ತಕ್ಷಣ ನಿದ್ದೆ ಮಾಡಬಾರದು: ಕೆಲವರಿಗೆ ತಿಂದ ತಕ್ಷಣ ಮಲಗುವ ಕೆಟ್ಟ ಅಭ್ಯಾಸ ಇರುತ್ತದೆ ಇಂತವರಿಗೆ ಅನಾರೋಗ್ಯ ಕಟ್ಟಿಟ್ಟ ಬಿತ್ತಿ, ತಿಂದ ತಕ್ಷಣ ಮಲಗಿದರೆ ಆಹಾರ ಜೀರ್ಣ ಸರಿಯಾಗಿ ಆಗುವುದಿಲ್ಲ ಗ್ಯಸ್ಟಿಕ್ ಸಮಸ್ಯೆ ಕಾಡುತ್ತದೆ.

WhatsApp Group Join Now

Leave a Reply

Your email address will not be published. Required fields are marked *