ಭಾರತೀಯ ಆಹಾರ ಪದ್ಧತಿಯ ಊಟದಲ್ಲಿ ವಿವಿಧ ಬಗೆಯ ಪದಾರ್ಥಗಳನ್ನು ಮಾಡುತ್ತಾರೆ ಅದರಲ್ಲಿ ಹಪ್ಪಳ ಕೂಡ ಒಂದು. ಕೆಲವು ವಿಶೇಷ ಸಂದರ್ಭಗಳಲ್ಲಿ ಹೆಬ್ಬಾಳವಿಲ್ಲದೆ ಊಟವೇ ಮುಗಿಯುವುದಿಲ್ಲ. ಅದರಲ್ಲಿ ಹಲವು ರೀತಿಯ ವಿಧಗಳು ಇವೆ. ಮಸಾಲೆ ಹಪ್ಪಳ ಕಾರದ ಹಪ್ಪಳ ಸಿಹಿ ಹಪ್ಪಳ ಇತ್ಯಾದಿ. ಇನ್ನು ಹಳ್ಳಿಗಳಲ್ಲಿ ಹಲಸಿನ ಕಾಯಿ ಹಪ್ಪಳ ಬೇರು ಹಲಸಿನ ಹಪ್ಪಳ ಬಾಳೆಕಾಯಿ ಹಪ್ಪಳ ಹೀಗೆ ತರಹೆಬಾರಿ ವಿಧಗಳನ್ನು ಕಾಣಬಹುದು. ಬಾಳೆ ಎಲೆಗಳಲ್ಲಿ ಎಣ್ಣೆಯಲ್ಲಿ ಹಾಕಿ ತಡೆದಿದ್ದಾರೆ ಗರಿ ಗರಿ ಹಪ್ಪಳ ತಿನ್ನಲು ಸಿದ್ಧ. ಊಟದೊಂದಿಗೆ ಹಪ್ಪಳ ಸೇವಿಸಿದರೆ ಅದರ ರುಚಿಯೇ ಬೇರೆ.
ಆದರೆ ಈ ರೀತಿ ಕರೆದ ಹಪ್ಪಳವನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನೀವು ನಂಬಲೇಬೇಕು. ಹೌದು ಎಣ್ಣೆಗಳಲ್ಲಿ ಕರಿದ ಪದಾರ್ಥಗಳನ್ನು ನಿಯಮಿತ ಸೇವನೆಯಿಂದ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ಹಪ್ಪಳವನ್ನು ತಿನ್ನುವುದರಿಂದ ಯಾವೆಲ್ಲ ಅನಾರೋಗ್ಯ ಕಾಡಬಹುದು ಎನ್ನುತ್ತೀರಾ.
ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಅದಕ್ಕಿಂತ ಮುಂಚೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಕೆಲವು ಮಸಾಲೆಯುಕ್ತ ಅಪ್ಪಳಗಳು ತಿನ್ನಲು ಬಹಳ ರುಚಿಯಾಗಿರುತ್ತವೆ. ಆದರೆ ಆರೋಗ್ಯಕ್ಕೆ ಅಷ್ಟೇ ಹಾನಿಯನ್ನು ಉಂಟುಮಾಡುತ್ತವೆ. ಮಸಾಲೆಯುಕ್ತ ಹಪ್ಪಳಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲಿಯಂತೆ ಉಂಟಾಗಿ ಅಸಿಡಿಟಿ ಮತ್ತು ಗ್ಯಾಸ್ಟಿಕ್ ಸಮಸ್ಯೆಗಳು ಬರುತ್ತವೆ. ಅದರಲ್ಲೂ ಹಸಿದ ಹೊಟ್ಟೆಯಲ್ಲಿ ಕರಿದ ಪದಾರ್ಥಗಳ ಸೇವನೆ ಕೆಟ್ಟದೆ.
ಹೀಗಾಗಿ ಮಸಾಲೆಯುಕ್ತ ಹಪ್ಪಳಗಳು ಹೊಟ್ಟೆಯ ಸಮಸ್ಯೆಗೆ ಖಂಡಿತವಾಗಲು ಕಾರಣವಾಗುತ್ತದೆ. ರುಚಿಯಾಗಿದೆ ಎಂದು ಹಪ್ಪಳವನ್ನು ತಿನ್ನುವ ಮುನ್ನ ಯೋಚಿಸಿಕೊಳ್ಳಿ. ಇನ್ನು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಮಸಾಲೆಯುಕ್ತ ಹಪ್ಪಳಗಳಲ್ಲಿ ಉಪ್ಪಿನ ಪ್ರಮಾಣ ಅಧಿಕವಾಗಿ ಇರುತ್ತದೆ. ಇದನ್ನು ತಿಂದಾಗ ದೇಹದಲ್ಲಿ ಸೋಡಿಯಂ ಅಂಶ ಜಾಸ್ತಿಯಾಗಿ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೆ ಹೆಚ್ಚು ಉಪ್ಪಿನ ಪದಾರ್ಥಗಳ ಸೇವನೆಯಿಂದ ಬಾಯಾರಿಕೆಯೂ ಅಧಿಕವಾಗುತ್ತದೆ. ಹಪ್ಪಳವನ್ನು ಕರೆಯಲು ಎಣ್ಣೆಯ ಅತಿ ಹೆಚ್ಚು ಉಪಯೋಗವಾಗುತ್ತದೆ ಎಣ್ಣೆಯನ್ನು ಕೊಬ್ಬಿನಾಂಶ ದೇಹದಲ್ಲಿ ದ್ವಿಗುಣವಾಗುತ್ತದೆ ಹಾಗಾಗಿ ಆದಷ್ಟು ಇದನ್ನು ದೂರ ಇಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು .
ಅತಿಯಾದ ಎಣ್ಣೆ ಬಳಕೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಹಾಗೆಯೇ ಎಣ್ಣೆಯ ಪದಾರ್ಥಗಳು ನಮ್ಮ ಎದೆಯ ಭಾಗಕ್ಕೆ ಪರಿಣಾಮಕಾರಿಯಾಗಿ ಬೀಳುತ್ತವೆ. ಇನ್ನ ಮಾರುಕಟ್ಟೆಯಲ್ಲಿ ಸಿಗುವ ಹಪ್ಪಳದಲ್ಲಿ ಮೈದಾ ಇರುವುದರಿಂದ ಮಲಬದ್ಧತೆಯ ಕಾರಣಗಳಿಗೂ ತುತ್ತಾಗುತ್ತವೆ. ಇದರ ಬದಲು ಮನೆಯಲ್ಲಿಯೇ ನಿಮಗೆ ಬೇಕಾಗಿರುವಂತಹ ಆರೋಗ್ಯಕರ ಪದಾರ್ಥಗಳಿಂದ ಹಪ್ಪಳವನ್ನು ತಯಾರಿಸಬಹುದು ಇದರಿಂದ ನಮ್ಮ ಜೇಬಿಗೂ ಹಾಗೂ ನಮ್ಮ ದೇಹಕ್ಕೆ ಬೀಳುವ ಕತ್ತರಿಯನ್ನು ನಾವು ತಪ್ಪಿಸಬಹುದು.