WhatsApp Group Join Now

ನಮಸ್ತೆ ಪ್ರಿಯ ಓದುಗರೇ, ನೀವೆಲ್ಲರೂ ಪಾನ್ ಅನ್ನು ತಿಂದೇ ಇರ್ತಿರಾ. ಈ ಪಾನ್ ಗೆ ಗುಲ್ಕನ್ ಅನ್ನುವ ಪದಾರ್ಥವನ್ನು ಹಾಕಿಯೇ ಹಾಕಿರ್ಥಾರೆ. ಯಾರಿಗೆ ಸ್ವೀಟ್ ಪಾನ್ ಇಷ್ಟವೂ ಅವರು ಸ್ವಲ್ಪ ಜಾಸ್ತನೇ ಗುಲ್ಕನ್ ಹಾಕಿಸಿಕೊಂಡು ತಿನ್ನುತ್ತಾ ಇರುತ್ತಾರೆ. ಈ ಗುಲ್ಕನ್ ಅನ್ನು ಗುಲಾಬಿ ಇಂದ ಮಾಡಿರುತ್ತಾರೆ. ಅಂದರೆ ಗುಲಾಬಿ ಎಲೆಗಳಿಂದ ತಯಾರಿಸಿದ ಪದಾರ್ಥ ಇದಾಗಿದೆ. ಇದೊಂದು ಆರೋಗ್ಯಕರವಾದ ಜಾಮ್ ತರಹ ನಾವು ಸೇವಿಸಬಹುದಾಗಿದೆ. ಗುಲ್ಕನ್ ಈ ಗುಲ್ಕನ್ ಅನ್ನು ನಾವು ನಿಯಮಿತವಾಗಿ ಸೇವಿಸುವುದರಿಂದ ಉತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು. ಹೌದು ಸ್ನೇಹಿತರೇ, ಗುಲಾಬಿ ದಳಗಳಿಂದ ತಯಾರಿಸಿದ ಗುಲ್ಕನ್ ಒಂದು ಆಯುರ್ವೇದ ಔಷಧಿ ಆಗಿದೆ. ಹೇಗೆಂದರೆ ಇದು ಪರಿಣಾಮಕಾರಿ ಆಂಟಿ ಆಕ್ಸಿಡೆಂಟ್ ಮತ್ತು ದೇಹವನ್ನು ಚೈತನ್ಯದಾಯಕವಾಗೀ ಇಡಲು ಸಹಾಯವಾಗುತ್ತದೆ.

ಈ ಗುಲ್ಕನ್ ಅನ್ನು ಹಿಂದಿನ ಕಾಲದಿಂದಲೂ ನಮ್ಮ ಭಾರತೀಯರು ಹಾಗೂ ಇತರ ರಾಷ್ಟ್ರದ ಜನರು ಜೀರ್ಣಕಾರಕವಾಗಿ ಹಾಗೂ ಋತುಚಕ್ರದ ಸಮಸ್ಯೆಗಳಿಗೆ ಪರಿಹಾರ ವಾಗಿ ಬಳಸುತ್ತಾ ಬಂದಿದ್ದಾರೆ. ಇಂತಹ ವಿಶೇಷ ಉಪಯೋಗ ವಿರುವ ಗುಲ್ಕನ್ ಅನ್ನು ನಾವು ನಿಯಮಿತವಾಗಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇಂದ ದೂರ ಇರಬಹುದು. ನಿಮಗೇನಾದರೂ ಉಷ್ಣ ಅಥವ ಹೀಟ್ ಆಗಿದ್ದರೆ , ನಿಮ್ಮ ದೇಹ ತಂಪಾಗಬೇಕು ಅಂದರೆ ಈ ಗುಲ್ಕನ್ ಅನ್ನು ಸೇವನೆ ಮಾಡುತ್ತಾ ಬಂದರೆ ದೇಹವು ತಂಪಾಗಿ ಉಷ್ಣ ಪ್ರಕೃತಿ ಇರುವವರಿಗೂ ಒಳ್ಳೆಯದು. ಇನ್ನೂ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆನೋವು ಅನ್ನು ಕೂಡ ಶಮನ ಮಾಡುತ್ತದೆ. ಇನ್ನೂ ಈ ಗುಲ್ಕನ್ ಅನ್ನು ನಾವು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ರಕ್ತ ಅದಾಗಿಯೇ ಶುದ್ಧೀಕರಣಗೊಳ್ಳುತ್ತದೆ. ಇದರಿಂದ ನಮ್ಮ ದೇಹದ ರಕ್ತದಲ್ಲಿನ ಕೆಟ್ಟ ಅಂಶಗಳು ಹೋಗಿ ರಕ್ತವನ್ನು ಶುದ್ಧೀಕರಿಸುತ್ತದೆ.

ಈ ಮೂಲಕ ತ್ವಚೆಯ ಸಮಸ್ಯೆಗಳಾದ ಮೊಡವೆ, ಗುಳ್ಳೆ ಮತ್ತು ಬ್ಲಾಕ್ ಹೆಡ್ಸ್ ಗಳು ಕೂಡ ದೂರವಾಗುತ್ತದೆ. ಇನ್ನೂ ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಬಹಳಷ್ಟು ಜನರಿಗೆ ಮೂಗಿನಲ್ಲಿ ರಕ್ತ ಬರುತ್ತಾ ಇರುತ್ತದೆ. ಅಂಥವರು ಈ ಗುಲ್ಕನ್ ಅನ್ನು ಸೇವನೆ ಮಾಡುವುದರಿಂದ ದೇಹ ತಂಪಾಗೀ ಮೂಗಿನಲ್ಲಿ ರಕ್ತ ಬರುವುದು ನಿಲ್ಲುತ್ತದೆ. ಇನ್ನೂ ಯಾರಿಗೆ ಮಲಬದ್ದತೆ ಅಥವಾ ಮೂಲವ್ಯಾಧಿ ಅಂತಹ ಸಮಸ್ಯೆ ಇರುತ್ತದೆಯೋ ಅಂಥವರು ಇದನ್ನು ಸೇವನೆ ಮಾಡಬಹುದು. ಯಾಕಂದ್ರೆ ಇದರಲ್ಲಿ ಹೆಚ್ಚು ಫೈಬರ್ ಅಥವಾ ನಾರಿನಂಶ ಅಧಿಕವಿರುವುದರಿಂದ ಮಲಬದ್ದತೆ ಸಮಸ್ಯೆ ನಿವರಣೆಯಾಗುವುದು. ಇನ್ನೂ ಇದನ್ನು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ , ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆಯೋ ಅವರು ಇದನ್ನು ಸೇವನೆ ಮಾಡಬಾರದು ಯಾಕಂದ್ರೆ ಇದನ್ನು ತಯಾರಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿರುತ್ತಾರೆ. ಇನ್ನೂ ಇದು ಆನ್ಲೈನ್ ಅಲ್ಲಿ ಲಭ್ಯವಿದೆ, ಹಾಗಾಗಿ ಯಾರಿಗೆ ಇದು ಅಗತ್ಯವೋ ಅವರು ಇಂದೇ ಆರ್ಡರ್ ಮಾಡಿ ತರಿಸಿ ತಿಂದು ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಿ. ನೊಂಡಿದ್ರಲ್ಲ ಸ್ನೇಹಿತರೆ , ಹಾಗಾದರೆ ಇಂದೇ ಪಾನ್ ಅಥವಾ ಬರೀ ಗುಲ್ಕನ್ ತಿನ್ನಲು ಶುರು ಮಾಡಿ. ಇಂದಿನ ಮಾಹಿತಿ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *