ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಸಾಮಾನ್ಯವಾಗಿ ನಮಗೆ ಕೈಕಾಲು ಎಲ್ಲ ಇದ್ದರೂ ಕೂಡ ನಮಗೆ ಏನಾದರೂ ಒಂದು ರಿಸನ್ ಅನ್ನು ಹೇಳಿಕೊಂಡು ನಮ್ಮ ಗುರಿಗಳನ್ನು ಪಕ್ಕಕ್ಕೆ ಇಡುತ್ತಿರುತ್ತೀವಿ. ಆದರೆ ಇವರು ಕಣ್ಣಿಲ್ಲದೆ ನೇ ಒಂದು ಸಾಧನೆ ಮಾಡಿದ್ದಾರೆ ಅಂತ ಕೇಳಿದರೆ ಅದರಲ್ಲೂ ಮೊದಲನೇ ಬಾರಿ ಇವರನ್ನು ರಿಜೆಕ್ಟ್ ಮಾಡುತ್ತಾರೆ. ಆದರೆ ಎರಡನೇ ಬಾರಿ ಐಎಎಸ್ ಅಧಿಕಾರಿಯಾಗಿ ದ್ದಾರೆ. ಆದರೆ ಯಾರಪ್ಪ ಇವರು ಇವರ ಸಾಧನೆಯಾದರೂ ಏನು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಮೊದಲನೆಯದಾಗಿ ಇವರ ಹೆಸರು ಪ್ರಜ್ವಲ್ ಪಾಟೀಲ್. ಇವರು ತಮ್ಮ ಚಿಕ್ಕವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಳ್ಳುತ್ತಾರೆ. ಕಣ್ಣನ್ನು ಕಳೆದುಕೊಂಡ ನಂತರ ಹಲವಾರು ಸರ್ಜರಿ ಗಳನ್ನು ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅವರ ಕಣ್ಣು ವಾಪಸ್ ಬರುವುದಿಲ್ಲ.
ಹಾಗಂತ ಕಣ್ಣು ಹೋಯಿತು ನನ್ನ ಜೀವನದಲ್ಲಿ ಏನು ಅಚಿವ್ ಮಾಡುವುದಕ್ಕೆ ಆಗುವುದಿಲ್ಲ ಅಂತ ಅವರು ಸುಮ್ಮನೆ ಕೂತಿಲ್ಲ. ಡಿಗ್ರಿಯನ್ನು ಮುಗಿಸುತ್ತಾರೆ. ಅದಾದ ನಂತರ ಸಿವಿಲ್ಗೆ ಪ್ರಿಪೇರ್ ಆಗುತ್ತಾರೆ. ಮೊದಲ ಅತೆಂಪ್ಟ್ ನಲ್ಲಿ 723 ನೇ ರಾಂಕ್ ಬರುತ್ತದೆ. ಈ ರ್ಯಾಂಕ್ ನಿಂದ ಇಂಡಿಯನ್ ರೈಲ್ವೆ ನಲ್ಲಿ ಕೆಲಸ ಸಿಗುತ್ತದೆ. ಆದರೆ ಇವರಿಗೆ ಕಣ್ಣು ಇಲ್ಲ ಅಂತ ಹೇಳಿ ರೈಲ್ವೆ ಅವರು ಇವರನ್ನು ರಿಜೆಕ್ಟ್ ಮಾಡುತ್ತಾರೆ. ಅದಾದ ನಂತರ ಇವರು ಮತ್ತೆ ಸುಮ್ಮನೆ ಆಗುವುದಿಲ್ಲ. ಮತ್ತೆ ಯುಪಿಎಸ್ಸಿ ಯನ್ನು ಬರೆಯುತ್ತಾರೆ. ಈ ಬಾರಿ 125ನೇ ರ್ಯಾಂಕಿಂಗ್ ಅನ್ನು ಇವರು ಪಡೆದುಕೊಳ್ಳುತ್ತಾರೆ. ಈ ಬಾರಿ ಐಎಎಸ್ ಅಧಿಕಾರಿ ಕೂಡ ಆಗುತ್ತಾರೆ. ನೋಡಿದ್ರಲ್ಲ ವೀಕ್ಷಕರೇ ಕಣ್ಣಿಲ್ಲದ ವ್ಯಕ್ತಿಗಳು ಕೂಡ ಇವತ್ತು ಐಎಎಸ್ ಅಧಿಕಾರಿ ಆಗುತ್ತಿದ್ದಾರೆ. ಹಾಗಿದ್ದರೆ ಕೈ ಕಾಲು ಕಣ್ಣು ಎಲ್ಲ ಇರುವವರು ನಾವು ನೀವು ಎಲ್ಲರೂ ಎಷ್ಟು ಸಾಧನೆ ಮಾಡಬಹುದು ಅಂತ ನೀವೇ ಯೋಚನೆ ಮಾಡಿ. ಇನ್ನು ಮೇಲೆ ಆದರೂ ಗುರಿಯತ್ತ ಯೋಚನೆ ಮಾಡುವುದನ್ನು ಸ್ಟಾರ್ಟ್ ಮಾಡಿ.