ಇತ್ತೀಚಿನ ದಿನಗಳಲ್ಲಿ ಆಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಾಕಷ್ಟು ಮಂದಿಯಲ್ಲಿ ಕಾಡುವ ಸಮಸ್ಯೆ. ಈ ಆಸಿಡಿಟಿ ಮನುಷ್ಯನ ದೇಹದ ಯಾವ ಭಾಗದಲ್ಲಿ ಹೆಚ್ಚಾಗಿರುತ್ತದೆ. ಆಸಿಡಿಟಿಯಿಂದಾಗುವ ಸಮಸ್ಯೆಗಳಲ್ಲಿ ಕಂಡು ಹಿಡಿಯೋದೆ ಕಷ್ಟವಾಗುತ್ತದೆ. ಆ ರೀತಿಯಲ್ಲಿ ಆಸಿಡಿಟಿ ಕಾಡುತ್ತದೆ. ಬಾಯಿ ರುಚಿಗೆ ಏನಾದರೂ ತಿನ್ನೋಣ ಅಂತಾ ಮನುಷ್ಯ ಅಂದುಕೊಳ್ಳುವಷ್ಟರಲ್ಲಿ ಈ ಆಸಿಡಿಟಿಗೆ ಎದುರುತ್ತಲೇ ಆ ತಿನಿಸುಗಳಿಂದ ದೂರವಾಗಿ ಬಿಡುತ್ತಾನೆ. ಹಾಗಾದರೆ ಈ ಆಸಿಡಿಟಿ ಉಂಟಾದರೆ ಮನೆ ಮದ್ದು ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಆಸಿಡಿಟಿಗೆ ಮನೆ ಮದ್ದುಗಳು ಸಾಕಷ್ಟುಇವೆ. ಆದರೂ ಕೆಲವೊಮ್ಮೆ ಹಿತ್ತಲ ಗಿಡದ ಮದ್ದು ಮದ್ದಲ್ಲ ಎಂಬ ಗಾಧೆಯಂತೆ ಕೆಲವೊಮ್ಮೆ ಮರೆತು ಬಿಡ್ತೇವೆ. ಸಾಮಾನ್ಯವಾಗಿ ದಿನಂಪ್ರತಿ ಅಡುಗೆಗೆ ಬಳಸುವ ಅನೇಕ ವಸ್ತುಗಳೇ ಸಾಕು ಆಸಿಡಿಟಿಯನ್ನು ಕಡಿಮೆ ಮಾಡೋದಿಕ್ಕೆ. ಯಾವೆಲ್ಲಾ ಅಂಶಗಳು, ಯಾವೆಲ್ಲಾ ಪದಾರ್ಥಗಳು ಇವೆ ಅಂತೀರಾ ಇಲ್ಲಿ ನೋಡಿ.
ಸಾಮಾನ್ಯವಾಗಿ ಆಸಿಡಿಟಿಗೆ ಮನೆ ಮದ್ದ ಅಂದರೆ ಮನೆಯಲ್ಲಿಯೇ ಬೆಳೆಯುವ ಗಿಡ ತುಳಸಿ. ಆಸಿಡಿಟಿ ಓಗಲಾಡಿಸಲು ತುಳಸಿ ಬೆಸ್ಟ್ ಅನ್ನೋದು ಹಲವಾರು ಮಂದಿಯ ಮಾತು. ಈ ತುಳಸಿ ಕೆಲವೊಂದು ರೋಗಗಳಿಗೆ ರಾಮಭಾಣವೂ ಹೌದು, ಈ ತುಳಸಿಯನ್ನು ಜಗಿಯೋದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ. ಆಸಿಡಿಟಿಯಿಂದ ದೂರು ಉಳಿಯುವಂತೆ ಮಾಡುತ್ತದೆ.
ಇನ್ನು ಸಾಂಬಾರ್ ಪದಾರ್ಥಗಳಲ್ಲಿ ಪ್ರಮುಖವಾದ ಪದಾರ್ಥ ಕಾಳು ಮೆಣಸು. ಆಸಿಡಿಟಿ ಆದಾಗ ಕಾಳು ಮೆಣಸನ್ನು ಜಜ್ಜಿ ಮಜ್ಜಿಗೆಗೆ ಹಾಕಿ ಕುಡಿಯೋದರಿಂದ ಆಸಿಡಿಟಿ ದೂರವಾಗುತ್ತದೆ. ಎರಡು ಅಥವಾ ಮೂರು ಬಾರೀ ಹೀಘೆ ಮಾಡಿಸರೆ ಸಾಕು.
ಇನ್ನು ಆಸಿಡಿಟಿಗೆ ಓಂ ಕಾಳು ಕೂಡ ಮುಖ್ಯವಾದ ಪದಾರ್ಥ. ಓಂ ಕಾಳನ್ನು ಜಗಿಯುವುದರಿಂದ ಆಸಿಡಿಟಿಯನ್ನು ದೂರ ಮಾಡಬಹುದಾಗಿದೆ. ಸದ್ಯ ಆಸಿಡಿಟಿ ತಕ್ಷಣಕ್ಕೆ ಕಡಿಮೆ ಮಾಡಲು ಓಂ ಕಾಳು ಪ್ರಮುಖ ಪಾತ್ರ ವಹಿಸುತ್ತದೆ. ಆಸಿಡಿಟಿಯನ್ನು ಕಡಿಮೆ ಮಾಡಲು ಮನೆಯಲ್ಲಿಯೇ ಸಾಕಷ್ಟು ಮದ್ದುಗಳಿವೆ.