ಹಿಂದೆ ಎಲ್ಲರ ಮನೆಯಲ್ಲಿಯೂ ನೆಲದ ಮೇಲೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ನಮ್ಮ ಶಾಸ್ತ್ರಗಳು ಕೂಡ ಈ ಆಚರಣೆಯ ಬಗ್ಗೆ ಹೇಳುತ್ತವೆ. ಆದ್ರೆ ಇತ್ತೀಚೆಗೆ ಕೆಲವು ಜನರು ಊಟ ಮಾಡಲೆಂದೇ ಡೈನಿಂಗ್ ಟೇಬಲ್, ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಬೆಳೆಸಿಕೊಂಡಿರ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಆರಾಮದಾಯಕವಾಗಿರಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಮಾರಕವಾಗೋದಂತೂ ಖಂಡಿತ. ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನು ಅಳವಡಿಸಿದ್ದರು. ಅದೇನಂದ್ರೆ ಎಲ್ಲರೂ ನೆಲದ ಮೇಲೆ ಕುಳಿತು ಆಹಾರ ಸೇವಿಸೋದು. ಹೀಗೆ ನೆಲದ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ ಎನ್ನಲಾಗುತ್ತೆ.
ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮಗೇ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತೆ. ಅದೇನೆಂದರೆ ಸುಖಾಸನ ಅಥವಾ ಅರ್ಧ ಪದ್ಮಾಸನ ಹಾಕಿ ಕುಳಿತು ಊಟ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತೆ. ಕೆಲವರ ಅಭಿಪ್ರಾಯದಂತೆ ನಾವು ಸುಖಾಸನದಲ್ಲಿ ಕುಳಿತ ಕೂಡಲೇ ನಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆ. ಇದರ ಜೊತೆಗೆ ನಾವು ತಟ್ಟೆಯಲ್ಲಿ ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗುತ್ತೀವಿ. ಮತ್ತು ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀವಿ. ಹೀಗೆ ನಿಯಮಿತವಾಗಿ ಹಿಂದೆ-ಮುಂದೆ ಬಾಗುವುದರಿಂದ ನಮ್ಮ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ.
ಇದರಿಂದ ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಸ್ರವಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತೆ. ಹೀಗೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇನ್ನು ಅನೇಕ ಲಾಭಗಳಾಗುತ್ತವೆ ಆ ಬಗ್ಗೆ ಈಗ ತಿಳಿಯೋಣ. ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು ತೂಕವನ್ನು ಇಳಿಸಿಕೊಳ್ಳಲು ಸಹಕಾರಿ ನಮ್ಮ ದೇಹಕ್ಕೆ ಮತ್ತಷ್ಟು ನಮ್ಯತೆಯನ್ನು ಒದಗಿಸುತ್ತೆ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲು ನೆರವಾಗುತ್ತೆ ನಮ್ಮನ್ನು ದೀರ್ಘಾಯುಷಿಗಳನ್ನಾಗಿಸುತ್ತೆ ನಮ್ಮ ಮೊಣಕಾಲುಗಳು ಮತ್ತು ಮೊಣಕೈಗಳ ಸಂಧಿಗಳಲ್ಲಿ ದ್ರವಗಳನ್ನು ಸ್ಫುರಿಸಿ ಅವುಗಳ ಆರೋಗ್ಯವನ್ನು ಸುಧಾರಿಸುತ್ತೆ. ಮನಸ್ಸನ್ನು ಪ್ರಶಾಂತಗೊಳಿಸುತ್ತೆ ಉದ್ವೇಗವನ್ನು ತಡೆಯುತ್ತೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯವನ್ನು ಸದೃಢಗೊಳಿಸುತ್ತೆ ಹೀಗೆ ನೆಲದ ಮೇಲೆ ಊಟ ಮಾಡೋದ್ರಿಂದ ಹಲವಾರು ಲಾಭಗಳಾಗುತ್ತವೆ. ಇನ್ನಾದರೂ ಡೈನಿಂಗ್ ಟೇಬಲ್ಗೆ ಗುಡ್ಬೈ ಹೇಳಿ. ನೆಲದ ಮೇಲೆ ಕುಳಿತು ಊಟ ಮಾಡೋಣ. ಆರೋಗ್ಯಯುತ ಜೀವನವನ್ನು ನಮ್ಮದಾಗಿಸಿಕೊಳ್ಳೋಣ.