ಸಾಮನ್ಯವಾಗಿ ಎಲ್ಲರ ಮನೆಯಲ್ಲಿ ಒಂದು ಲೋಟದಲ್ಲಿ ನೀರಿನ ಜೊತೆ ನಿಂಬೆ ಹಣ್ಣು ಇಟ್ಟಿರುತ್ತಾರೆ ಇದರ ಮಹತ್ವ ಇದನ್ನು ಯಾಕೆ ಈ ರೀತಿಯಾಗಿ ಇಡಲಾಗುತ್ತದೆ ಮತ್ತು ಇದರ ಉದ್ದೇಶ ಏನು ಅನ್ನೋದು ಇಲ್ಲಿದೆ ನೋಡಿ.
ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ಇಡುವುದು ಹಾಗು ದೇವರ ಫೋಟೋ ಪಕ್ಕದಲ್ಲಿ ಇಟ್ಟಿರುತ್ತಾರೆ, ಹೀಗೆ ಮಾಡುವುದರಿಂದ ಯಾವ ಲಾಭಗಳಿವೆ, ಈ ಆಚರಣೆ ಬರಲು ಕಾರಣ ಏನು, ಮತ್ತು ಈ ಆಚರಣೆಯ ಧಾರ್ಮಿಕ ಉಪಯೋಗ ಹಾಗು ವೈಜ್ಞಾನಿಕ ಉಪಯೋಗಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಧಾರ್ಮಿಕ ನಂಬಿಕೆ : ನಿಂಬೆ ಹಣ್ಣಿಗೆ ನಮ್ಮ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು ನಿಯಂತ್ರಿಸಲು ಬಳಸಲಾಗುತ್ತದೆ, ಅದರಂತೆ ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ನಿಂಬೆಹಣ್ಣನ್ನು ಮುಳುಗಿಸಿ ಇಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ತಟಸ್ಥ ಗೊಳಿಸುವುದಲ್ಲದೆ, ಹೆಣ್ಣು ಅಥವಾ ಗಂಡಸರ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ ಎನ್ನಲಾಗುತ್ತದೆ.
ಮುಖ್ಯವಾಗಿ ಮಾಟ ಮಂತ್ರದಂತಹ ಕೆಟ್ಟ ಪ್ರಯೋಗಗಳು ನಿಮ್ಮ ಮೇಲೆ ಪ್ರಯೋಗಿಸಿದಾಗ ಈ ನಿಂಬೆ ಹಣ್ಣು ನಿಮಗೆ ಕೊಳೆತು ಸೂಚನೆ ನೀಡುತ್ತದೆ ಎನ್ನುತ್ತಾರೆ ಹಾಗು ಆ ದುಷ್ಟ ಶಕ್ತಿಯನ್ನು ನಿಯಂತ್ರಿಸುತ್ತದೆ ಎಂದು ಸಹ ನಂಬಲಾಗಿದೆ.
ವೈಜ್ಞಾನಿಕ ಕಾರಣ : ವಾತಾವರದಲ್ಲಿ ಆಮ್ಲಿಯತೆ ಹೆಚ್ಚಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ, ಇದರಿಂದ ಪರಿಹಾರ ಹೊಂದಲು ನಿಂಬೆ ಹಣ್ಣನ್ನು ನೀರಿನ ಗಾಜಿನ ಲೋಟದಲ್ಲಿ ಇಟ್ಟರೆ ಅದರಲ್ಲಿ ಇರುವ ಕ್ಷಾರೀಕ ಗುಣ ವಾತಾವರಣ ಆಮ್ಲಿಯತೆಯನ್ನು ಹೀರಿ ನಿಮ್ಮ ಆರೋಗ್ಯವನ್ನು ಕಾಯುತ್ತದೆ.