ಸ್ನೇಹಿತರೇ ಒಟ್ಟು ಕುಟುಂಬ ಅಂದರೆ ಏನು? ಅಜ್ಜ ಅಜ್ಜಿ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿ ಜೀವನ ನಡೆಸೋದಕ್ಕೆ ಒಟ್ಟು ಕುಟುಂಬ ಅಥವಾ ಜಾಯಿಂಟ್ ಫ್ಯಾಮಿಲಿ ಅನ್ನುತ್ತೇವೆ. ಈಗಿನ ಕಾಲದಲ್ಲಿ ಜಾಯಿಂಟ್ ಫ್ಯಾಮಿಲಿಗಳ ಸಂಖ್ಯೆ ಬಹಳ ಕಮ್ಮಿ ಆಗಿದೆ. 2000 ಇಸವಿಯಿಂದ 2023 ರವರೆಗೆ ತೆಗೆದುಕೊಂಡರೆ ಅಂದ ರೆ 23 ವರ್ಷ ನೋಡಿದರೆ ಜಾಯಿಂಟ್ ಫ್ಯಾಮಿಲಿಗಳ ಸಂಖ್ಯೆ ತೊಂಬತ್ತೆರಡು ಪರ್ಸೆಂಟ್ ಕಡಿಮೆಯಾಗಿದೆ. ಆದರೆ ಈ ಒಂದು ಮನೆಯಲ್ಲಿ ಬರೋಬ್ಬರಿ 180 ಜನ ಕುಟುಂಬದ ಸದಸ್ಯರು ವಾಸ ಮಾಡುತ್ತಿದ್ದಾರೆ.ವಿಶ್ವದ ಅತಿ ದೊಡ್ಡ ಕುಟುಂಬ ಇರೋದು ನಮ್ಮ ಭಾರತ ದೇಶದ ಮಿಝೋರಾಂ ರಾಜ್ಯದಲ್ಲಿ. ಈ ವ್ಯಕ್ತಿಯ ಹೆಸರು ಜೀಯೂನ ಚೆನ್ನ ಅತ್ಯಂತ ಶ್ರೀಮಂತ ರೈತ ಪ್ರಪಂಚದಲ್ಲಿರುವ ಎಲ್ಲ ರೀತಿಯ ಬೆಳೆ ಬೆಳೆಯುತ್ತಾರೆ. 200 ಕ್ಕೂ ಹೆಚ್ಚು ಹಸು ಸಾಕಿದ್ದಾರೆ ಜೀಯೂನ ಚೆನ್ನಾ ವಯಸ್ಸು 84 ವರ್ಷ ಇವರ ಜೊತೆ ಸಂಸಾರ ಮಾಡುತ್ತಾ ಇರೋದು ಬರೋಬ್ಬರಿ ಮೂವತ್ತೊಂಭತ್ತು ಹೆಂಡತಿಯರು ಇವರಿಗೆ 94 ಮಕ್ಕಳು, 14 ಸೊಸೆ, 133 ಮೊಮ್ಮಕ್ಕಳು.
ಈಗಿನ ಕಾಲದಲ್ಲಿ ಒಂದು ಮದುವೆ ಆಗೋದೇ ಕಷ್ಟ ಅಂತದರಲ್ಲಿ 39 ಹೆಂಡತಿರು .ಇವರೆಲ್ಲರೂ ನಾಲ್ಕು ಅಂತಸ್ತಿನ ಅತಿ ದೊಡ್ಡ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸ್ನೇಹಿತರೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ ಅವರ ಕುಟುಂಬವೇ ಪ್ರಪಂಚದ ಅತಿ ದೊಡ್ಡ ಕುಟುಂಬ ಎಂದು ಪರಿಗಣಿಸಲಾಗಿದೆ. ಈ ಕುಟುಂಬದಲ್ಲಿರುವ ಸದಸ್ಯರೆಲ್ಲರ ರೈತರು ಸಣ್ಣವರಿಂದ ದೊಡ್ಡವರ ತನಕ ಎಲ್ಲರೂ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರು ಬೆಳೆಯುವ ಬೆಳೆಯಲ್ಲಿ ಇಪ್ಪತೈದು ಪರ್ಸೆಂಟ್ ತಮ್ಮ ಕುಟುಂಬಕ್ಕೆ ಇಟ್ಟಿ ಕೊಳ್ಳುತ್ತಾರೆ. ಇನ್ನು ಉಳಿದ 75% ಮಾರಾಟ ಮಾಡಿ ದುಡ್ಡು ಸಂಪಾದನೆ ಮಾಡುತ್ತಾರೆ.
ಕುಟುಂಬದ ಎಲ್ಲ ಹೆಣ್ಮಕ್ಕಳು ಬೆಳಗ್ಗೆ 5:00 ಗಂಟೆಗೆ ಎದ್ದು ಅಡುಗೆ ಕೆಲಸ ಆರಂಭ ಮಾಡುತ್ತಾರೆ. ಇವರು ವಾಸಿಸುತ್ತಿರುವ ಮನೆಯಲ್ಲಿ ಅತಿ ದೊಡ್ಡ ಅಡುಗೆ ಮನೆ ಕೂಡ ಇದೆ.
180 ಸದಸ್ಯರಿರುವ ಈ ಕುಟುಂಬದಲ್ಲಿ ಏನು ಅಡುಗೆ ಮಾಡುತ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ? ಸೋಮವಾರದಿಂದ ಶುಕ್ರವಾರದವರೆಗೆ ದಿನದ ಮೂರು ಹೊತ್ತು ಅನ್ನ ಮತ್ತು ಚಿಕನ್ ಸಾಂಬಾರ್ ಮಾಡುತ್ತಾರೆ. ಪ್ರತಿದಿನ ಪದಾರ್ಥಗಳು ಇವರು ಬಳಸೋದು 140 ಕೆಜಿ ಅನ್ನ 60 ಕೆಜಿ ಆಲೂಗಡ್ಡೆ. ಮೂವತೈದು ಕೆಜಿ ಈರುಳ್ಳಿ ಎಂಟು ಕೆಜಿ ಮೆಣಸಿನಕಾಯಿ, ಆರು ಕೆಜಿ ಮಸಾಲೆ ಪುಡಿ 48 ಕೆಜಿ ಚಿಕನ್ .ವಾರದ ಕೊನೆಯ ಲ್ಲಿ ಅವರು ಒಟ್ಟಾ ರೆ ಖರ್ಚು ಮಾಡಿದ್ದು ಬರೋಬ್ಬರಿ ₹2,00,000. ಮತ್ತೊಂದು ಅದ್ಭುತ ವಿಚಾರ ಏನು ಗೊತ್ತಾ? 39 ಹೆಂಡತಿಯರು ಇವತ್ತಿನವರೆಗೂ ಜಗಳ ಆಡಿಲ್ಲ, ಒಬ್ಬರ ಮೇಲೆ ಒಬ್ಬರು ಸಿಟ್ಟು ಮಾಡಿಕೊಂಡಿಲ್ಲ. ಕುಟುಂಬದ ಯಾವೊಬ್ಬ ಸದಸ್ಯರಿಗೂ ಮೋಸ ಮಾಡಿಲ್ಲ. ಎಲ್ಲರಿಗೂ ಸಮ ಪಾಲು ಆಸ್ತಿ ಹಂಚಿದ್ದಾರೆ.