ಎಲ್ಲರಿಗೂ ನಮಸ್ಕಾರ. ಸಿಹಿ ಆದರೆ ಅಮೃತವೂ ವಿಷವಂತೆ ಎನ್ನುವ ಗಾದೆ ಮಾತಿನಂತೆ ನಾವು ಗ್ರೀನ್ ಟೀಯನ್ನು ದೇಹದ ತೂಕ ಅಥವಾ ಬೊಜ್ಜು ಕರಗಿಸಬೇಕು ಎಂಬ ದೃಷ್ಟಿಯಿಂದ ಅತಿಯಾಗಿ ಸೇವನೆ ಮಾಡುತ್ತೇವೆ. ಆದರೆ ಇದು ನಮ್ಮ ದೇಹದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು. ಎಚ್ಚರ ಗ್ರೀನ್ ಟೀಯನ್ನು ಯಾಕೆ ಮತ್ತೆ ಯಾರು ಅತಿಯಾಗಿ ಸೇವನೆ ಮಾಡಬಾರದು
ಅನ್ನುವುದು ಇಲ್ಲಿದೆ ನೋಡಿ. ರಕ್ತಹೀನತೆ ಇರುವವರು ಗ್ರೀನ್ ಟೀಯನ್ನು ಕುಡಿಯಬೇಡಿ ಏಕೆಂದರೆ ಕಬ್ಬಿನ ಅಂಶವಿರುವ ಆಹಾರವನ್ನು ಸೇವಿಸಿದ ಬಳಿಕ ಗ್ರೀನ್ ಟೀ ಕುಡಿದರೆ ದೇಹವು ಕಬ್ಬಿಣಾಂಶವು ಹೀರಿಕೊಳ್ಳಲು ತಡೆಯುತ್ತದೆ. ಗ್ರೀನ್ ಟೀಯಲ್ಲಿರುವ ಅಂಶಗಳು ಕಿಣ್ವಗಳನ್ನು ನಿಯಂತ್ರಿಸುವುದರಿಂದ ಕೆಲವರಿಗೆ ಎದೆ ಉರಿ ಕೂಡ ಕಾಣಿಸಬಹುದು. ಗ್ರೀನ್ ಟೀಯನ್ನು ಮಿತಿಮೀರಿ ಕುಡಿದರೆ ಹೃದಯದ ಬಡಿತದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಕೆಲವೊಮ್ಮೆ ವಾಂತಿ ಭೇದಿ ಉಂಟಾಗುವುದು. ಸ್ನಾಯು ಸೆಳೆತ ಉಂಟಾಗುತ್ತಿದ್ದರೆ ಟೀ ಕುಡಿಯುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಕರುಳಿನ ಕ್ಯಾನ್ಸರ್ ಇರುವವರು ಸಂತಾನ ನಿಯಂತ್ರಣ ಔಷಧಿ ಮಧುಮೇಹ ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿರುವ ಅವರು ಗ್ರೀನ್ ಟೀಯನ್ನು ಕುಡಿಯಬೇಡಿ ಇದು ನಿಮ್ಮ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಮಾಹಿತಿಯನ್ನು ಓದಿದಿರಲ್ಲ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಮಾಹಿತಿಯನ್ನು ಶೇರ್ ಮಾಡಿ.