ಕಾಡಿನಲ್ಲಿ ಅಥವಾ ಹಳ್ಳಿಯಕಡೆ ದೊರೆಯುವ ಹಣ್ಣುಗಳಲ್ಲಿ ಹಲವಾರು ರೀತಿಯ ಆರೋಗ್ಯಕರ ಲಾಭಗಳು ಸಿಗುತ್ತವೆ. ಯಾಕೆಂದರೆ ಪೂರ್ವಜರು ಇಂತಹ ಹಳ್ಳಿಮದ್ದುಗಳಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಅಂತಹ ಹಣ್ಣುಗಳಲ್ಲಿ ಈ ಬೆಣ್ಣೆಹಣ್ಣು ಕೂಡ ಒಂದಾಗಿದೆ. ಹಾಗಾದರೆ ಈ ಹಣ್ಣಿನಲ್ಲಿ ಏನೇನು ಆರೋಗ್ಯಕಾರಿ ಲಾಭಗಳು ಹಡಗಿವೆ ಎಂಬುದನ್ನು ತಿಳಿಯೋಣ ಬನ್ನಿ.
ನಿಮ್ಮ ತಲೆಯ ಕೂದಲು ಏನಾದರು ಬೆಳ್ಳಗೆ ಹಾಗಿದ್ದರೆ ಈ ಬೆಣ್ಣೆ ಹಣ್ಣಿನ ಎಲೆಗಳನ್ನು ರುಬ್ಬಿ ತಲೆಯ ಕೂದಲಿಗೆ ಪ್ಯಾಕ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಕಪ್ಪಗಾಗುತ್ತದೆ.
ನಿಮ್ಮತುಟಿಗಳು ಒಡೆದಿದ್ದರೆ ಈ ಬೆಣ್ಣೆ ಹಣ್ಣನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕಲಸಿ ತುಟಿಗಳಿಗೆ ಹಚ್ಚಿ 20 ನಿಮಿಷ ಬಿಟ್ಟರೆ ತುಟಿ ಒಡಕು ಕಡಿಮೆಯಾಗಿ ಮುದುವಾಗುತ್ತವೆ.
ನಿಮ್ಮ ಮುಖದ ಚರ್ಮ ಒಣಗಿದ್ದರೆ ಬೆಣ್ಣೆ ಹಣ್ಣಿಗೆ ಬಾದಾಮಿ ಎಣ್ಣೆಯನ್ನು ಬೆರಸಿ ಕಲಸಿ ಮುಖಕ್ಕೆ ಲೇಪಿಸಿದರೆ ಚರ್ಮ ಮೃದುವಾಗುತ್ತದೆ. ಅಷ್ಟೇ ಅಲ್ಲದೆ ಬೆಣ್ಣೆ ಹಣ್ಣಿನ ಪೇಸ್ಟ್‌ಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಲೇಪಿಸಿದರೆ ಮುಖದಲ್ಲಿನ ಮೊಡವೆಗಳು ಕೂಡ ಶಮನವಾಗುತ್ತವೆ.ಹಾಗು ಬೆಣ್ಣೆ ಹಣ್ಣಿಗೆ ಗುಲಾಬಿ ಎಣ್ಣೆ ಬೆರೆಸಿ ಸೋರಿಯಾಸಿಸ್ ಇರುವ ಜಾಗಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.
ಬೆಣ್ಣೆ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ಹಾಗು ನಿಯಮಿತವಾಗಿ ಬೆಣ್ಣೆ ಹಣ್ಣನ್ನು ಸೇವಿಸಿವುದರಿಂದ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.