ಹೌದು ಒಣಕೊಬರಿ ಅನ್ನೋದು ಒಂದು ಕೇವಲ ಅಡುಗೆಗೆ ಬಳಸುವ ಆಹಾರದ ವಸ್ತುವಲ್ಲ ಇದರಿಂದ ಅನೇಕ ಲಾಭಗಳಿವೆ. ಮತ್ತು ಈ ಒಣಕೊಬ್ಬರಿಯನ್ನು ಈ ರೀತಿಯಾಗಿ ದೇವರಿಗೆ ನೀವು ಅರ್ಪಿಸಿದರೆ ನಿಮ್ಮ ಎಲ್ಲ ಸಂಕಷ್ಟಗಳು ದೂರವಾಗಲಿವೆ.
ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ. ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ಕಡಿಮೆಯಾಗುತ್ತದೆ..
ಒಣಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು, ಕೆಂಪು ಅಥವ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಮ್ಮ ನಿಂತು ಹೋಗಿರುವ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ..
ಕಡಲೆಹಿಟ್ಟಿನ ಜೊತೆಯಲ್ಲಿ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾಮವನ್ನು ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ.
ಒಣಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರ ಮಾಡಿ, ಎಲ್ಲರಿಗೂ ಹಂಚಿದರೆ, ಮಂಗಳ ಕಾರ್ಯಗಳು, ಸುಸೂತ್ರವಾಗಿ ನಡೆಯುತ್ತದೆ.
ಈ ಕಾರಣಕ್ಕೆ ಲಗ್ನಪತ್ರಿಕಾ ಹಾಗೂ ವರಪೂಜೆಯ ಸಮಯದಲ್ಲಿ, ಶುಭಕಾರ್ಯದಲ್ಲಿ, ಕೊಬ್ಬರಿ- ಸಕ್ಕರೆ ಹಂಚುತ್ತೇವೆ.
ಶ್ರೀ ಮಹಾಗಣಪತಿಯ ಹೋಮಕ್ಕೆ, ಕೊಬ್ಬರಿಸಕ್ಕರೆಯಿಂದ ಮಾಡಿದ ಕಡುಬು ಮಾಡಿಸಿ, ಹೋಮಕ್ಕೆ ಕೊಟ್ಟರೆ, ನಿಮ್ಮ ಋಣಭಾಧೆಗಳು ಕಡಿಮೆಯಾಗಿ ಸಕಲ ಕಾರ್ಯಗಳು,ಇಷ್ಟಾರ್ಥಗಳು ನೆರವೇರುತ್ತದೆ ಮತ್ತು ಸಾಲದ ಭಾದೆ ನಿವಾರಣೆಯಾಗುತ್ತದೆ.
ಕೊಬ್ಬರಿ ಒಬ್ಬಟ್ಟನ್ನು ಮಾಡಿಸಿ, ಮನೆದೇವರಿಗೆ, ಸ್ರೀ ದೇವತೆಗಳ ದೇವಸ್ಥಾನಗಳಲ್ಲಿ ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ಮತ್ತು ಭಕ್ತಾದಿಗಳಿಗೆ ಹಂಚಿದರೆ, ಕುಜದೋಷ ತುಂಬಾ ಕಡಿಮೆಯಾಗುತ್ತದೆ.
ಶ್ರೀ ದುರ್ಗಾದೇವಿಗೆ ಪಾರಿಜಾತ ಹೂವಿನ ಮಾಲೆ ಹಾಕಿ, ಅಷ್ಟೋತ್ತರ ಪೂಜೆ ಮಾಡಿ, ಒಬ್ಬಟ್ಟು ನೈವೇದ್ಯ ಮಾಡಿ ದಾನ ಮಾಡಿದರೆ, ಕಾಳಸರ್ಪ ದೋಷ ನಿವಾರಣೆಯಾಗುತ್ತದೆ.