ಒಣಕೊಬ್ಬರಿ ಇದು ನೋಡಲು ಗಟ್ಟಿಯಾಗಿ ಜೊತೆಗೆ ತಿನ್ನಲು ಕೂಡ ತುಂಬಾನೇ ಕಠಿಣವಾಗಿ ಇರುತ್ತದೆ. ಹಸಿ ಕೊಬ್ಬರಿ ಮತ್ತು ಒಣ ಕೊಬ್ಬರಿ ಸಿಗುತ್ತದೆ. ಈ ಒಣ ಕೊಬ್ಬರಿಯಿಂದ ಹಲವಾರು ಅಡುಗೆ ಪದಾರ್ಥಗಳನ್ನು ಮಾಡುತ್ತಾರೆ. ಇದನ್ನು ಪೂಜೆ ಮಾಡುವಾಗ ಕೂಡ ತುಂಬಾನೇ ಬಳಕೆ ಮಾಡುತ್ತಾರೆ. ಇದು ಅಡುಗೆಗೆ ಮಾತ್ರವಲ್ಲದೆ ಮತ್ತು ಪೂಜೆಗು ಮಾತ್ರವಲ್ಲದೆ ಆರೋಗ್ಯಕ್ಕೆ ತುಂಬಾನೆ ಲಾಭದಾಯಕ ಆಗಿದೆ. ಜೊತೆಗೆ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಒಣಕೊಬ್ಬರಿ ತಿನ್ನಲು ಕಷ್ಟ ಅಂತ ಅದನ್ನು ನಿರ್ಲಕ್ಷ ಮಾಡಬೇಡಿ.ಇದನ್ನು ಸರಿಯಾದ ಸಮಯಕ್ಕೆ ಸೇವನೆ ಮಾಡಿದರೆ ನೀವು ಊಹಿಸಲಾರದಷ್ಟು ಉಪಯೋಗವನ್ನು ಪಡೆಯುತ್ತಿರಿ. ತೆಂಗಿನಕಾಯಿ ಗಿಡದ ಪ್ರತಿಯೊಂದು ಭಾಗವು ತುಂಬಾನೇ ಉಪಯೋಗಕಾರಿಯಾಗಿದೆ. ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಬಂಜೆತನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಣಕೊಬ್ಬರಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬಂಜೆತನ ನಿವಾರಣೆ ಆಗುತ್ತದೆ ಮತ್ತು ಮೂಳೆಗಳು ಸ್ನಾಯುಗಳು ತುಂಬಾನೇ ಬಲಗೊಳ್ಳುತ್ತದೆ. ಈಗಿನ ಆಧುನಿಕ ಕಾಲದಲ್ಲಿ ಜನರು ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಇನ್ನಿತರ ಎಣ್ಣೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ.ಈಗಾಗಿ 35 ವರ್ಷ ದಾಟಿದರೆ ಸಾಕು ಕೀಲು ನೋವು, ಮೈ ಕೈ ನೋವು, ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ.ಈ ಕಾರಣದಿಂದ ಜನರು ಆಸ್ಪತ್ರೆಗೆ ತುಂಬಾನೇ ದುಡ್ಡು ಖರ್ಚು ಮಾಡುತ್ತಾರೆ.ಆದರೆ ಇದರಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ.
ಆದಷ್ಟು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಆದಷ್ಟು ಆಹಾರ ಕ್ರಮದ ಮೇಲೆ ಸೇವಿಸುವ ಆಹಾರದ ಮೇಲೆ ತುಂಬಾನೇ ಪ್ರತ್ಯೇಕ ಕಾಳಜಿ ಇರಬೇಕು.ಇನ್ನು ಕೈ ಕಾಲು ನೋವು ಬರಲು ಕಾರಣ ಮನುಷ್ಯನಲ್ಲಿ ಕ್ಯಾಲ್ಸಿಯಂ ಕೊರತೆ.ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಸ್ನಾಯುಗಳು ಕುಂಟಿತಗೊಳ್ಳುತ್ತದೆ. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಇದರಿಂದ ಹೊರಗೆ ಬರಬಹುದು. ಇನ್ನು ಅಧಿಕವಾದ ಕ್ಯಾಲ್ಸಿಯಂ ಇರುವ ಒಣಕೊಬ್ಬರಿಯನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ಮೂಳೆಗಳನ್ನು ಬಲಗೊಳಿಸುತ್ತದೆ. ಮಧ್ಯಾಹ್ನ ಊಟ ಮಾಡಿದ ನಂತರ ಒಣಕೊಬ್ಬರಿಯನ್ನು ತುರಿದು ಹಾಲು ಮತ್ತು ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆ ಚೆನ್ನಾಗಿ ಆಗುವುದಕ್ಕೆ ಸಹಾಯ ಮಾಡುತ್ತದೆ.