ಉದ್ಯೋಗವಿಲ್ಲದೆ ಇದ್ದಾರೆ ಮನೆಯಲ್ಲಿ ಮಾಡಬಹುದಾದ ಬಿಸಿನೆಸ್ ಗಳಲ್ಲಿ ಟಾರ್ಪಾಲ್ ಬಿಸಿನೆಸ್ ಒಳ್ಳೆಯ ಬಿಸಿನೆಸ್ ಆಗಿದೆ. ಈ ಬಿಸಿನೆಸ್ ನಿಂದ ಆಗುವ ಲಾಭ, ಹೇಗೆ ಪ್ರಾರಂಭಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಕುಳಿತುಕೊಂಡು ಟಾರ್ಪಾಲ್ ಬಿಸಿನೆಸ್ ಮಾಡುವುದರಿಂದ ಪ್ರತಿದಿನ ಲಾಭ ಗಳಿಸಬಹುದು. ಕೃಷಿ ಮಾಡುತ್ತಿರುವವರು ಟಾರ್ಪಾಲ್ ಅನ್ನು ಅನೇಕ ಉದ್ದೇಶಗಳಿಗೆ ಬಳಸುತ್ತಾರೆ. ಮಳೆಗಾಲಗಳಲ್ಲಿ ಕೋಳಿ ಫಾರ್ಮ್ ಗಳಲ್ಲಿ ಟಾರ್ಪಾಲ್ ಹಾಕುತ್ತಾರೆ, ಅಲ್ಲದೇ ಇನ್ನೂ ಅನೇಕ ಕೆಲಸಗಳಿಗೆ ಟಾರ್ಪಾಲ್ ಬೇಕಾಗುತ್ತದೆ. ಇದರೊಂದಿಗೆ ದೊಡ್ಡ ಪ್ಲಾಸ್ಟಿಕ್ ಸಿಗುತ್ತದೆ ಅದನ್ನು ಲಾರಿಗಳಿಗೆ ಬಳಸುತ್ತಾರೆ. ನಮ್ಮ ಭಾರತ ದೇಶದಲ್ಲಿ ದೊಡ್ಡ ದೊಡ್ಡ ಇಂಡಸ್ಟ್ರಿಗಳು ಟಾರ್ಪಲ್ ಅನ್ನು ತಯಾರಿಸುತ್ತಾರೆ. ಎಲ್ಲರೂ ಒಂದಲ್ಲ ಒಂದು ಕೆಲಸಕ್ಕೆ ಟಾರ್ಪಾಲ್ ಖರೀದಿಸುತ್ತಾರೆ ಆದರೆ ಅದನ್ನು ಬಿಸಿನೆಸ್ ಮಾಡಬಹುದು ಎಂದು ಗೊತ್ತಿಲ್ಲದೆ ಅವರು ಅದರ ಬಗ್ಗೆ ಯೋಚಿಸುವುದಿಲ್ಲ, ಇದು ಪ್ರಾಫಿಟೇಬಲ್ ಬಿಸಿನೆಸ್ ಆಗಿದೆ. ಹಳ್ಳಿಗಳಲ್ಲಿ ಆಗಲಿ ಸಿಟಿಗಳಲ್ಲಿ ಆಗಲಿ ಟಾರ್ಪಾಲ್ ನ ಬಳಕೆ ಮಾಡಲಾಗುತ್ತದೆ.
ಟಾರ್ಪಾಲ್ ನಲ್ಲಿ ಕೂಡ ವೈವಿಧ್ಯಮಯ ಸಿಗುತ್ತದೆ ವಾಟರ್ ಪ್ರೂಫ್ ಟಾರ್ಪಾಲ್, ಎಚ್ ಡಿಬಿ ಟಾರ್ಪಾಲ್, ಪ್ಲಾಸ್ಟಿಕ್ ಟಾರ್ಪಾಲಿಯನ್, ಪಿವಿಸಿ ಟಾರ್ಪಾಲಿಯನ್, ಲಾರಿಗಳ ಮೇಲೆ ಹಾಕಲು ಟ್ರಕ್ ಟಾರ್ಪಾಲಿಯನ್, ಕಾಟನ್ ಟಾರ್ಪಾಲಿಯನ್ ಎಂದು ಸಿಗುತ್ತದೆ ಅಲ್ಲದೆ ಇದರಲ್ಲಿ ಗ್ರೇಡ್ಸ್ ಗಳಿವೆ. ಜಿಎಸ್ಎಂ90, ಜಿಎಸ್ಎಂ70, ಜಿಎಸ್ಎಂ120, ಜಿಎಸ್ಎಂ200 ಇರುತ್ತದೆ ಜಿಎಸ್ಎಂ ಎಂದರೆ ಗ್ರಾಮ್ ಪರ್ ಸ್ಕ್ವೇರ್ ಮೀಟರ್ ಎಂದು ಅರ್ಥ. ಈ ರೀತಿಯ ಮೆಜರ್ಮೆಂಟ್ ವೇಟ್ ಅನ್ನು ತಡೆದುಕೊಳ್ಳುತ್ತದೆ. ಜಿಎಸ್ಎಂ200 ಎನ್ನುವುದು ತುಂಬಾ ವೇಟ್ ಮತ್ತು ಟಿಕ್ ಟಾರ್ಪಾಲಿಯನ್ ಎಂದು ತಿಳಿದುಕೊಳ್ಳಬೇಕಾಗುತ್ತದೆ.
ಟಾರ್ಪಾಲ್ ಕಟ್ ಮಾಡಿ ಸೇಲ್ ಮಾಡುತ್ತಿರುತ್ತಾರೆ. ಟಾರ್ಪಾಲ್ ತಯಾರಿಸುವ ಇಂಡಸ್ಟ್ರಿಯಿಂದ ಖರೀದಿಸುವಾಗ ಕಡಿಮೆ ಬೆಲೆಗೆ ಸಿಗುತ್ತದೆ. ಕೆಲವರು ಟಾರ್ಪಾಲ್ ವೆರೈಟಿ ನೋಡಿಕೊಂಡು ಕೆಜಿ ಲೆಕ್ಕದಲ್ಲಿ ಸೇಲ್ ಮಾಡುತ್ತಿರುತ್ತಾರೆ. ಇನ್ನು ಕೆಲವರು ಟಾರ್ಪಾಲ್ ಸ್ಕ್ವೇರ್ ಫೀಟ್ ಗೆ 5,10,15 ರೂಪಾಯಿಯಂತೆ ಸೇಲ್ ಮಾಡುತ್ತಿರುತ್ತಾರೆ.
ಜಿಎಸ್ಎಂ ಮೇಲೆ ಅದರ ಬೆಲೆ ಅವಲಂಬಿತವಾಗಿರುತ್ತದೆ. ಒಂದು ಸ್ಕ್ವೇರ್ ಫೀಟ್ ಟಾರ್ಪಾಲ್ ಗೆ ಐದು ರೂಪಾಯಿ ಇರುತ್ತದೆ ಇದರಿಂದ ಒಂದು ಲಕ್ಷದವರೆಗೂ ಸಂಪಾದನೆ ಮಾಡಬಹುದು. ಮೆನುಫ್ಯಾಕ್ಚರಿಂಗ್ ಇಂಡಸ್ಟ್ರಿಗೆ ನೇರವಾಗಿ ಹೋಗಿ ಖರೀದಿಸುವುದರಿಂದ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ, ರೋಲ್ಸ್ ನಲ್ಲಿ ಕೂಡ ಸಿಗುತ್ತದೆ, ಅದನ್ನು ಖರೀದಿಸಬಹುದು ಅಥವಾ ಕಟ್ ಮಾಡಿ ಬೇರೆ ಬೇರೆ ಸೈಜ್ ನಲ್ಲಿಯೂ ಕೊಡುತ್ತಾರೆ. ಈ ಬಿಸಿನೆಸ್ ಮಾಡಲು 5 ಲಕ್ಷ ರೂಪಾಯಿ ಬೇಕಾಗುತ್ತದೆ 5 ಲಕ್ಷ ರೂಪಾಯಿ ಇಟ್ಟುಕೊಂಡರೆ ಮಾತ್ರ ನೀವು ವೆರೈಟಿ ಖರೀದಿಸಬಹುದು. ನೀವು ಹೆಚ್ಚಿನ ಪ್ರಮಾಣದಲ್ಲಿ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು. ಪಾರ್ಟ್ನರ್ ಶಿಪ್ ಮೇಲೆ ಬಿಸಿನೆಸ್ ಪ್ರಾರಂಭಿಸಿ ತಿಂಗಳಿಗೆ ಐದು ಲಕ್ಷ ರೂಪಾಯಿವರೆಗೂ ಗಳಿಸಬಹುದು ಅಂದರೆ ದಿನಕ್ಕೆ 50,000 ರೂಪಾಯಿ ಗಳಿಸಬಹುದು.
ಕೃಷಿ ಚಟುವಟಿಕೆಗಳಿಗೆ ಟಾರ್ಪಾಲ್ ಬೇಕೇ ಬೇಕು. ನಮ್ಮ ದೇಶದಲ್ಲಿ ಕೃಷಿಕರು ಹೆಚ್ಚು ಇರುವುದರಿಂದ ಟಾರ್ಪಾಲ್ ಮಾರಾಟ ಆಗುತ್ತದೆ ಅಲ್ಲದೆ ಸಿಟಿಗಳಲ್ಲಿ ಧಾನ್ಯಗಳನ್ನು ಸಾಗಿಸುವ ದೊಡ್ಡ ದೊಡ್ಡ ಲಾರಿಗಳಿಗೆ ಕೂಡ ಬಳಸಲಾಗುತ್ತದೆ, ಮಾರ್ಕೆಟ್ ಗಳಲ್ಲಿ ಬಳಸುತ್ತಾರೆ ಅಲ್ಲದೆ ವಾಟರ್ ಫೀಲ್ಡ್ ಗಳಲ್ಲಿಯೂ ಬಳಸುತ್ತಾರೆ ಹಾಗಾಗಿ ಇದರ ಬೇಡಿಕೆ ಕಡಿಮೆಯಾಗುವುದಿಲ್ಲ. ಮಳೆಗಾಲದ ಸಮಯದಲ್ಲಿ ಇದರ ಬೇಡಿಕೆ ಹೆಚ್ಚಿರುತ್ತದೆ. ಟಾರ್ಪಾಲ್ ರೇಟ್ ಫಿಕ್ಸ್ ಆಗಿರುವುದಿಲ್ಲ ಒಮ್ಮೆ ಹೆಚ್ಚಾಗುತ್ತದೆ ಒಮ್ಮೆ ಕಡಿಮೆಯಾಗುತ್ತದೆ. ಟಾರ್ಪಾಲ್ ಶಾಪ್ ಅನ್ನು ಸಿಟಿಯಲ್ಲಿ ಇಟ್ಟರೆ ಸುತ್ತಮುತ್ತಲಿನ ಹಳ್ಳಿಯವರೆಲ್ಲರೂ ಬಂದು ಖರೀದಿಸುತ್ತಾರೆ. ಕೆಲವು ಶಾಪ್ ಗಳಲ್ಲಿ ಟಾರ್ಪಾಲ್ ಅನ್ನು ದೊಡ್ಡ ಪ್ರಮಾಣದಲ್ಲಿ ಇಟ್ಟುಕೊಂಡು ಸೇಲ್ ಮಾಡುತ್ತಿರುತ್ತಾರೆ, ಆ ಶಾಪ್ ಗೆ ನೀವು ಭೇಟಿ ಕೊಟ್ಟಾಗ ನಿಮಗೆ ನಂಬಿಕೆ ಬರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.