ಓಂ 1995 ರಲ್ಲಿ ನಿರ್ಮಾಣಗೊಂಡ ಐಕಾನಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಈ ಕ್ರೈಂ ಡ್ರಾಮಾದಲ್ಲಿ ಶಿವರಾಜಕುಮಾರ್ ಮತ್ತು ಪ್ರೇಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲವೊಂದು ಗಮನಿಸುವಂತಹ ಅಂಶವೇನೆಂದರೆ ಈ ಚಲನಚಿತ್ರ ಹಲವಾರು ಜನರಿಗೆ ಪ್ರೇರಣೆ ನೀಡಿದೆ. ಅಂದಿನ ಕಾಲಕ್ಕೆ ಈ ಸಿನಿಮಾ ಮಾಡಿದಂತಹ ಹಣವನ್ನು ಯಾವುದೇ ಚಲನಚಿತ್ರ ಕೂಡ ಇದರ ಆಸುಪಾಸು ಕೂಡ ಬಂದಿಲ್ಲ. ಇದು ಜನರನ್ನು ರೌಡಿಸಂ ತೊರೆದು ಸಂತೋಷದ ಜೀವನ ನಡೆಸಲು ಪ್ರೇರೇಪಿಸುತ್ತದೆ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಿನಿಮಾ ಭೂಗತ ಪಾತಕಿಯೊಬ್ಬನ ಜೀವನದ ಸುತ್ತ ಸುತ್ತಿದ್ದು, ಅದು ದೊಡ್ಡ ಯಶಸ್ಸನ್ನು ಗಳಿಸಿತು ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಅನ್ನು ಸೃಷ್ಟಿಸಿತು. 1980ರಲ್ಲಿ ಡಾನ್ ಒಬ್ಬರ ನೈಜ ಘಟನೆಯನ್ನು ಕೇಳಿದ ಉಪೇಂದ್ರ ಅವರು ಓಂ ಕಥೆಯನ್ನು ಬರೆಯಲು ಆರಂಭಿಸಿದರು. ಆದರೆ ಇನ್ನೊಂದು ಆಶ್ಚರ್ಯಕರ ಘಟನೆ ಏನು ಎಂದರೆ ನಿಜಜೀವನದ ದರೋಡೆಕೋರರನ್ನು ಭೂಗತ ಜಗತ್ತನ್ನು ತೊರೆದು ಸ್ವಚ್ಛ ಜೀವನ ನಡೆಸಲು ಚಲನಚಿತ್ರವು ಪ್ರೇರೇಪಿಸಿದ್ದರೂ ಸಹ, ನಿರ್ದೇಶಕ ಉಪೇಂದ್ರ ಅವರು ಚಲನಚಿತ್ರದಲ್ಲಿನ ಸಂದೇಶವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪುವಂತೆ ಮಾಡಲು ನಿಜ ಜೀವನದ ರೌಡಿಗಳನ್ನು ಕರೆ ತಂದಿದ್ದರು.
ಶ್ರೀ ವಜ್ರೇಶ್ವರಿ ಕಂಬೈನ್ಸ್‌ನಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಓಂ ಚಿತ್ರಕ್ಕಾಗಿ ಶಿವರಾಜಕುಮಾರ್ ಮತ್ತು ಉಪೇಂದ್ರ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ತರ್ಲೆ ನನ್ನ ಮಗ ಮತ್ತು ಶ್ ನಂತರ ಇದು ಉಪೇಂದ್ರ ಅವರ ಮೂರನೇ ಚಿತ್ರವಾಗಿದ್ದು, ಇದು ಭಾರೀ ಜನಪ್ರಿಯತೆಯನ್ನು ಗಳಿಸಿತು. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದ ಶಿವರಾಜಕುಮಾರ್ ಆಗ ಹಿಟ್‌ಗಳನ್ನು ನೀಡಿರಲಿಲ್ಲ. ಓಂ ಚಿತ್ರದಲ್ಲಿ ನಟಿಸಿದ ನಂತರ ಅವರ ಸ್ಟಾರ್‌ಡಮ್ ಮುಂದಿನ ಹಂತಕ್ಕೆ ತಲುಪಿತು. ಹಾಗೆ ನೋಡಿದರೆ ಅಂದಿನ ಕಾಲದಲ್ಲಿ ಈ ಕಾಂಬಿನೇಷನ್ ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತಗಳನ್ನು ಸೃಷ್ಟಿಸಿದೆ.
ಈ ಚಿತ್ರ ಮಾಡಿದ ನಂತರ ಚಿತ್ರ ತಂಡಕ್ಕೆ ಬಹಳಷ್ಟು ದೊಡ್ಡ ಶಾಕ್ ಆಗಿತ್ತು ಯಾಕೆ ಎಂದು ನೋಡುವುದಾದರೆ ಈ ಚಿತ್ರ ತಂಡ ಮೊದಲಿಗೆ ಚಿತ್ರ ಮಾಡುವ ಸಂದರ್ಭದಲ್ಲಿ ಅವರು ಇಷ್ಟರ ದೊಡ್ಡರಮಟ್ಟಿಗೆ ಯಶಸ್ಸು ಕಾಣಿಸಿಕೊಳ್ಳುತ್ತದೆ ಎಂಬುದು ಅವರು ಕನಸು ನನಸಲ್ಲೂ ಕೂಡ ಅಂದುಕೊಂಡಿದ್ದೀರಲ್ಲ. ಈಗಲ್ಲಾ ಪಟ್ಟಿಯಲ್ಲಿ ಧೂಳ್ ಎಬ್ಬಿಸಿದಂತಹ ಚಲನಚಿತ್ರಕ್ಕೆ ನಿರ್ದೇಶನ ಮಾಡಲು ಅಂದಿನ ಕಾಲದಲ್ಲಿ ಉಪೇಂದ್ರ ಅವರು ಕೂಡ ಬಹಳ ದೊಡ್ಡದಾದ ಸಂಭಾವನೆಯನ್ನು ಕೂಡ ಪಡೆದುಕೊಂಡಿದ್ದರು
ನಮಗೆ ಗೊತ್ತಿರುವ ಹಾಗೆ ಉಪೇಂದ್ರ ಅವರು ಸಿನಿಮಾಕ್ಕೆ ತಮ್ಮ ಸಂಪೂರ್ಣವಾದಂತಹ ಪರಿಶ್ರಮವನ್ನು ಹಾಕುತ್ತಾರೆ.
ಅದೇ ರೀತಿಯಾಗಿ ಅವರ ಚಲನಚಿತ್ರಗಳು ಬೇರೆಯವರ ಚಿತ್ರಕ್ಕಿಂತ ಕೆಲವು ವಿಬ್ಬಿನವಾಗಿ ಇರುತ್ತವೆ. ಉಪೇಂದ್ರ ಅವರ ಎಷ್ಟು ಸಂಭಾವನೆ ಪಡೆದಿದ್ದರೂ ಎಂಬುದನ್ನು ನಾವು ನೋಡುವುದಾದರೆ ಅವರು ಪಡೆದಂತಹ ಹಣ 45,000. ಹಾಗೆ ನೋಡಿದರೆ ಇದು ಅಂದಿನ ಕಾಲದಲ್ಲಿ ಬಹಳ ದೊಡ್ಡದಾದ ಮೊತ್ತವೆಂದೆ ನಾವು ಪರಿಗಣಿಸಬಹುದು. ಅದೇ ರೀತಿಯಿಂದಾಗಿ ನಾವು ನೋಡುವುದಾದರೆ ಕನ್ನಡ ಚಿತ್ರರಂಗದಲ್ಲಿ ಈ ಓಂ ಚಲನಚಿತ್ರ ತನ್ನ ದೊಡ್ಡದಾದ ದಾಖಲೆಯನ್ನು ಬರೆದಿದೆ