ಶಿವನ ಭಕ್ತರುಪಟಿಸುವ ಪಂಚಾಕ್ಷರಿ ಮಂತ್ರವು ಓಂ ನಮಃ ಶಿವಾಯ ಈ ಮಂತ್ರವನ್ನು ಪ್ರತಿದಿನ 108 ಬಾರಿ ಹೇಳಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರಾ ಅನ್ನುವ ನಂಬಿಕೆ ಇದೆ. ಸೃಷ್ಟಿಯ ಲಯವನ್ನು ನಿರ್ಧರಿಸುವ ಈ ದೇವನಿಗೆ ಅನೇಕ ಮಹಾನ್ ಮಂತ್ರಗಳು ಅರ್ಪಿತವಾಗಿವೆ. ಅಂತಹ ಮಂತ್ರಗಳಲ್ಲಿ ಕೆಲವು ಅತ್ಯಂತ ಸರಳ ಹಾಗೂ ಸುಲಭ ಪದಗಳಿಂದ ಕೂಡಿವೆ.
“ಓಂ ನಮಃ ಶಿವಾಯ” ಎನ್ನುವ ಮಂತ್ರವು ಶಿವನಿಗೆ ಶ್ರೇಷ್ಠವಾದ ಮಂತ್ರ. ಈ ಮಂತ್ರವು ಶ್ರೀ ರುದ್ರಂ ಚಮಕಂ ಎನ್ನುವ ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.ಹಾಗಾಗಿ ಇಂದು ನಾವು ಓಂ ನಮಃ ಶಿವಾಯ ಮಂತ್ರದ ಅರ್ಥವೇನು ಇದನ್ನು ಜಪಿಸುವುದರಿಂದ ಆಗುವ ಲಾಭಗಳೇನು ಅನ್ನುವ ಬಗ್ಗೆ ತಿಳಿಯೋಣ .ಓಂ ನಮಃ ಶಿವಾಯ ಎನ್ನುವ ಮಂತ್ರವು ಪ್ರಮುಖವಾಗಿ ಐದು ಅಕ್ಷರಗಳಿಂದ ಕೂಡಿದೆ. ನ, ಮ, ಶಿ, ವಾ, ಯ. ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸೂಚಿಸುತ್ತವೆ.
ಕಾಮಾಕ್ರೋದ ಮತ್ಸರ ಮಾಯೆ ಇವೆಲ್ಲವನ್ನು ತ್ಯಜಿಸಿ ಪ್ರೇಮ ಮತ್ತು ಶಾಂತಿಯಿಂದ ಪರಮಾತ್ಮನ ಸಾನಿಧ್ಯ ಸೇರುವ ಸೇರುವುದು ಓಂ ನಮಃ ಶಿವಾಯ ಮಂತ್ರದ ಅರ್ಥ ಹಲವು ದೇವಾನುದೇವತೆಗಳು ರಾಕ್ಷಸರೆಲ್ಲ ಈ ಮಂತ್ರ ಹೇಳುವ ಮೂಲಕವೇ ಶಿವನನ್ನು ಒಲಿಸಿಕೊಂಡಿದ್ದರು ಮತ್ತು ವರವನ್ನು ಪಡೆದುಕೊಂಡಿದ್ದರು ಈ ಮಂತ್ರವನ್ನು ಹೇಗೆ ಪಠಿಸಬೇಕು ಎನ್ನುವ ಪ್ರಶ್ನೆ ಎಲ್ಲರ ಮನಸಿನಲ್ಲೂ ಕಾಡುತ್ತದೆ.
ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಯೋಗ ಮುದ್ರೆಯಲ್ಲಿ ಕುಳಿತುಕೊಂಡು ಪಠಿಸಬೇಕು. ಈ ಮಂತ್ರ ಪಠಣೆಯ ವೇಳೆ ಮನಸ್ಸು ಏಕಾಗ್ರತೆಯಿಂದ ಕೂಡಿರಬೇಕು. ಮಾಂಸಹರ ಮಧ್ಯಸೇವನೆ ಮಾಡಿದ ದಿನ ಈ ಮಂತ್ರ ಪಠಿಸಬಾರದು ಹೆಣ್ಣು ಮಕ್ಕಳು ಋತುಚಕ್ರವಿರುವ ಸಂದರ್ಭದಲ್ಲಿ ಈ ಮಂತ್ರ ಪಠಣೆ ಮಾಡಬಾರದು ಇನ್ನೊಂದು ವಿಶೇಷ ಮಾಹಿತಿ ಎಂದರೆ ನೀವು ಯಾವುದೇ ಮಂತ್ರವನ್ನು ಹೇಳಬೇಕಾದರೂ ಅದನ್ನು ಗುರುವಿನ ಮೂಲಕ ಪಡೆದರೆ ಅದರ ಶಕ್ತಿ ಹಿನ್ನಡಿಯಾಗುತ್ತದೆ.
ಲಲಿತಾ ಸಂವತ್ಸರ ನಾಮವನ್ನು ಗುರುವಿನ ಮೂಲಕ ಪಡೆಯಲಿದ್ದು ಹೇಳಿದರೆ ಅದರ ಪ್ರಭಾವ ಶಕ್ತಿಯುತವಾಗಿ ಆಗಿರುತ್ತದೆ. ಆದರೆ ನೀವು ಒಮ್ಮೆ ನೀವು ಗುರುವಿಂದ ಮಂತ್ರ ಕಲಿತರೆ ಅದನ್ನು ಕೊನೆಯವರೆಗೂ ಪಠಿಸುತಿದ್ದರೆ ಮಾತ್ರ ಅದರ ಪ್ರಭಾವ ಇರುತ್ತದೆ. ಇನ್ನ ವಿಜ್ಞಾನ ವಿಸ್ಮಯ ಹಲವಾರು ಇತಿಹಾಸವನ್ನು ಸೃಷ್ಟಿಸಿದೆ ಈ ಮಂತ್ರವನ್ನು ಜಪಿಸುವುದರಿಂದ ನಾವು ನಮ್ಮ ಓದು ಹಾಗೂ ಇನ್ನಿತರ ಕಾರ್ಯಗಳಲ್ಲಿ ಅತಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತೇವೆ.
ನಾವುಕಡೆಗೆ ಯಾವುದೇ ಕೆಲಸ ಮಾಡಬೇಕೆಂದರೆ ನಮ್ಮ ಮನಸ್ಸು ಶುದ್ಧ ವಿರಬೇಕು ಶುದ್ಧ ಮನಸ್ಸಿನಿಂದ ಶಿವನ ನಾಮವನ್ನು ಹಾಗೂ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಿದರೆ ವ್ಯಕ್ತಿಯ ಆತ್ಮ ಶುದ್ಧಿಯಾಗುವುದು. ಇದರೊಟ್ಟಿಗೆ ವ್ಯಕ್ತಿ ಧಾರ್ಮಿಕ ಚಿಂತನೆಗಳ ಬಗ್ಗೆ ಅತಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾನೆ. ಹಾಗೆ ಅತಿ ಹೆಚ್ಚು ದೇವಸ್ಥಾನಗಳನ್ನು ಸಹ ಸುತ್ತುತ್ತಾರೆ.