ತುಂಬಾ ನೆಗಡಿ ಕೆಮ್ಮು ಇದ್ದರೆ ಕಡ್ಲೆ ಹಿಟ್ಟಿನ ಶೀರ ಸೇವನೆ ಮಾಡಿದರೆ ಕಡಿಮೆಯಾಗುತ್ತದೆ ಅದರಲ್ಲಿಯೂ ಕಡಲೆ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ತಿಂದರೆ ಆರೋಗ್ಯದ ಜೊತೆ ಬಾಯಿಗೆ ರುಚಿಕರವಾಗುತ್ತದೆ.
ಪಂಜಾಬಿಯನ್ನರ ಸಾಂಪ್ರದಾಯಿಕ ಸಿಹಿ ತಿನ್ನಿಸು ಕಡ್ಲೆಹಿಟ್ಟಿನ ಶೀರ ಇದರಲ್ಲಿ ಕೆಲವು ಔಷಧೀಯ ಗುಣಗಳಿದ್ದು ಇವು ನೆಗಡಿ ಮತ್ತು ಕೆಮ್ಮು ನಿವಾರಣೆಗೆ ಬೆಸ್ಟ್ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸಿಹಿ ತಿನಿಸಿಗೆ ಬಳಸುವ ಕಡಲೇಹಿಟ್ಟು ತುಪ್ಪ ಅರಿಶಿಣ ಕಾಳುಮೆಣಸು ಮತ್ತು ಡ್ರೈಫ್ರೂಟ್ಸ್ ಕಾಂಬಿನೇಷನ್ ಶಕ್ತಿಯ ಆಗರವಾಗಿದೆ ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಮತ್ತು ಉರಿ ನಿರೋಧಕ ಅಂಶಗಳು ತಾಪಮಾನ ಬದಲಾವಣೆಯಿಂದ ಉಂಟಾಗುವ ಸೋಂಕನ್ನು ನಿವಾರಿಸಲು ನೆರವಾಗುತ್ತದೆ ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ನೆಗಡಿಯನ್ನು ದೂರವಿಡಲು ಸಾಧ್ಯವಿದೆ.
ಕಡ್ಲೆ ಹಿಟ್ಟು ಆ್ಯಂಟಿಆಕ್ಸಿಡೆಂಟ್ಸ್ ನ ಅಗರವಾಗಿದ್ದು ಇದ್ದು ಕಟ್ಟಿಕೊಂಡಿರುವ ಮೂಗಿನ ದ್ವಾರಗಳನ್ನು ಸಡಿಲಗೊಳಿಸುವ ಜೊತೆಗೆ ಉಸಿರಾಟವನ್ನು ಸರಾಗವಾಗಿಸುತ್ತದೆ ವಿಟಮಿನ್ ಬಿ1 ಯಥೇಚ್ಛವಾಗಿರುವ ಈ ಹಿಟ್ಟು ಕೆಮ್ಮು ಮತ್ತು ನೆಗಡಿಯಿಂದ ಉಂಟಾಗುವ ನಿಶ್ಯಕ್ತಿ ಮತ್ತು ಆಯಾಸವನ್ನು ಹೋಗಲಾಡಿಸಿ ದೇಹಕ್ಕೆ ಶಕ್ತಿ ತುಂಬುತ್ತದೆ.
ಗರ್ಭಿಣಿಯರಿಗೆ ಕಡಲೇಹಿಟ್ಟು ಬೆಸ್ಟ್ ಎನ್ನಬಹುದು ಹೊಟ್ಟೆಯಲ್ಲಿರುವ ಭ್ರೂಣದ ಮೆದುಳು ಮತ್ತು ಬೆನ್ನುಹುರಿಯ ರಚನೆಗೆ ನೆರವಾಗುವ ಫೊಲೆಟ್ ಎಂಬ ವಿಟಮಿನ್ ಕೂಡಾ ಇರುವ ಕಡ್ಲೆ ಹಿಟ್ಟಿನ ಶೀರ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು ಇದು ಮಗುವಿನ ಸರಾವಾಂಗಿಣ ಬೆಳವಣಿಗೆಗೆ ಅತಿ ಅಗತ್ಯ ಈ ತಿನಿಸಿಗೆ ತುಪ್ಪ ಮತ್ತು ಹಾಲು ಕೂಡ ಹಾಕಿರುವುದರಿಂದ ಗರ್ಭಿಣಿಯರಿಗೆ ಇದು ಪೌಷ್ಟಿಕ ಆಹಾರವಾಗಿ ಪರಿಣಮಿಸುತ್ತದೆ.