ನಮಸ್ಕಾರ ವೀಕ್ಷಕರೇ, ವೀಕ್ಷಕರೇ ನೀವೇನಾದರೂ ನೀರನ್ನು ಕಡಿಮೆ ಕುಡಿಯುತ್ತಾ ಇದ್ದರೆ ಈ ಮಾಹಿತಿಯನ್ನು ಓದಿದ ಮೇಲೆ ಬಹುಶಹ ನಿಮಗೆ ನೀರಿನ ಮಹತ್ವ ಗೊತ್ತಾಗುತ್ತದೆ ಮತ್ತು ನೀರನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಾದಂತಹ ಪರಿಣಾಮಗಳು ಆಗುತ್ತವೆ ಮತ್ತು ಎಷ್ಟೆಲ್ಲಾ ರೋಗಗಳನ್ನು ಗುಣಪಡಿಸಿಕೊಳ್ಳುತ್ತದೆ ಮತ್ತು ಎಷ್ಟೆಲ್ಲಾ ಕಾಯಿಲೆಗಳನ್ನು ತಡೆಗಟ್ಟುವುದು ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ತಪ್ಪದೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಏಕಾಗ್ರತೆಯ ಕೊರತೆಯನ್ನು ಅನುಭವಿಸುತ್ತಾ ಇದ್ದಾರೆ ಮತ್ತು ದೇಹದಲ್ಲಿ ಶಕ್ತಿಯು ಕೂಡ ಕಡಿಮೆ ಆಗುತ್ತಾ ಇದೆ. ವೀಕ್ಷಕರ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಹದಲ್ಲಿ ಶೇಕಡ 75% ರಷ್ಟು ಇದ್ದರೆ ನಮ್ಮ ಮೆದುಳಿನಲ್ಲಿ ಶೇಕಡ 85ರಷ್ಟು ನೀರಿನಿಂದ ಕೂಡಿರುತ್ತದೆ.

ಇದರ ಅರ್ಥ ನಮ್ಮ ದೇಹದಲ್ಲಿ ಸರಿಯಾಗಿ ನೀರು ಸಿಗದೇ ಇದ್ದಲ್ಲಿ ದೇಹ ಬೇಗನೆ ಡಿ ಹೈಡ್ರೇಟ್ ಆಗುತ್ತದೆ ಅಂದರೆ ನೈಜಲೀಕರಣವಾಗುತ್ತದೆ ಇದರಿಂದ ನಮಗೆ ಏಕಾಗ್ರತೆ ಮಟ್ಟ ಕುಸಿಯುತ್ತದೆ ಮತ್ತು ನಮ್ಮ ದೇಹದಲ್ಲಿ ಶಕ್ತಿ ಕೂಡ ಕುಸಿಯುತ್ತದೆ. ಈ ಸಮಸ್ಯೆಯಿಂದ ನೀವು ಮುಕ್ತಿಯನ್ನು ಹೊಂದಬೇಕು ಎಂದರೆ ನೀವು ಹೆಚ್ಚು ನೀರನ್ನು ಕುಡಿಯುವುದರಿಂದ ನಿಮ್ಮ ಏಕಾಗ್ರತೆಯೂ ಕೂಡ ಹೆಚ್ಚಾಗುತ್ತದೆ ಜೊತೆಗೆ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯವೂ ಕೂಡ ಸಿಗುತ್ತದೆ. ನೀವೇನಾದರೂ ಕಡಿಮೆ ನೀರನ್ನು ಕುಡಿಯುತ್ತ ಇದ್ದರೆ ನಿಯಮಿತವಾಗಿ ನೀರನ್ನು ಕುಡಿಯುವುದು ಒಳ್ಳೆಯದು ಇನ್ನು ವೀಕ್ಷಕರೇ ಸಾಕಷ್ಟು ಜನರಿಗೆ ಇತ್ತೀಚಿನ ದಿನಗಳಲ್ಲಿ ತಲೆನೋವು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಾ ಇದೆ. ಯಾಕೆಂದರೆ ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಆಗ ನಮ್ಮ ದೇಹವು ಡಿ ಹೈಡ್ರೇಟ್ ಆಗುತ್ತದೆ. ಇದರಿಂದ ತಲೆನೋವು ಮತ್ತು ತಲೆ ಸುತ್ತುವಿಕೆ ಬರುವ ಹೆಚ್ಚಿರುತ್ತದೆ. ದಿನಾ ನೀವು ನಿಯಮಿತ ಪ್ರಮಾಣವಾಗಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹವು ಹೈಡ್ರೇಟ್ ಆಗಿರುತ್ತದೆ ಒಂದು ವೇಳೆ ತಲೆನೋವು ವಾಕರಿಕೆ ಕಂಡು ಬಂದರೆ ನೀವು ಪೇನ್ ಕಿಲ್ಲರ್ ಮಾತ್ರೆಯನ್ನು ತೆಗೆದುಕೊಳ್ಳುವ ಮೊದಲು ಒಂದು ಲೋಟ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು.

Leave a Reply

Your email address will not be published. Required fields are marked *