ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತು ದಕ್ಷತೆಯಿಂದ ಕೆಲಸ ಮಾಡುತ್ತಿರುವ ಯಂಗ್ ಡಿ ಸಿ ಪಿ. ಜಿಲ್ಲೆಯ ಲೇಡಿ ಸಿಂಗಮ್ ಅಂತಾನೆ ಕರೆಸಿಕೊಳ್ಳುವ ರೇಣುಕಾ ಸುಕುಮಾರ್ ಈ ಪೊಲೀಸ್ ಇಲಾಖೆಗೆ ಸೇರಿದ್ದೇ ಒಂದು ರೋಚಕ ಕಥೆ.
ರೇಣುಕಾ ಸುಕುಮಾರ್ ಲೇಡಿ ಸಿಂಗಮ್ ಎಂದು ಕರೆಸಿಕೊಳ್ಳುವ ಇವರು ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ, ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ತನ್ನ ಸ್ನಾತಕೋತ್ತರ ಶಿಕ್ಷಣದ ವರೆಗೆಗೂ ಎಲ್ಲವು ಬೆಂಗಳೂರಿನಲ್ಲೇ ಓದಿದ್ದು. ತಂದೆ ಖಾಸಗಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿದ್ದವರು ಇವರ ಮೂರೂ ಜನ ಮಕ್ಕಳಲ್ಲಿ ರೇಣುಕಾ ಹಿರಿಯ ಮಗಳು. ಮಗಳನ್ನ ಹೇಗಾದರೂ ಮಾಡಿ ಬ್ಯಾಂಕ್ ಉದ್ಯೋಗಿಯನ್ನಾದರೂ ಮಾಡ ಬೇಕು ಎಂಬುದು ತಂದೆಯ ಕನಸಾಗಿತ್ತು, ಆದರೆ ರೇಣುಕಾ ಸುಕುಮಾರ್ ಅವರದ್ದು ಮಾತ್ರ ಬೇರೆಯೇ ಕನಸಾಗಿತ್ತು, ಪೊಲೀಸ್ ಇಲಾಖೆಗೆ ಸೇರಿ ಜನ ಸೇವೆ ಮಾಡುವ ಅಸೆ ಅವರದ್ದಾಗಿತ್ತು.
ಇದೆಲ್ಲದರೊಂದಿಗೆ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿ ಇರಲಿಲ್ಲ. ಆದರೆ ರೇಣುಕಾ ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಷ್ಟ ಪಟ್ಟು ಓದಿ 2005 ರ ಕೆ ಪಿ ಎಸ್ ಈ ಪರೀಕ್ಷೆ ಬರೆದು ಡಿ ವೈ ಎಸ್ ಪಿ ಆಗಿ ಆಯ್ಕೆಯಾದರು, ಆಯ್ಕೆಯಾದ ಕೇವಲ ಒಂದೇ ವರ್ಷದಲ್ಲಿ ಐ ಪಿ ಎಸ್ ಆಗಿ ಪದೋನ್ನತಿಯನ್ನ ಪಡೆದರು. ಕಳೆದ 10 ತಿಂಗಳಿನಿಂದ ಹುಬ್ಬಳ್ಳಿ ಧಾರವಾಡ ಡಿ ಸಿ ಪಿ ಆಗಿ ಕಾನೂನು ಸುವ್ಯವಸ್ಥೆಯನ್ನ ಕಾಪಾಡುವ ಹೊಣೆ ಹೊತ್ತು ಹಗಲಿರುಳು ಶ್ರಮಿಸುತ್ತಿದ್ದಾರೆ.
ರೇಣುಕಾ ಅವರಿಗೆ ಅವರ ತಂದೆಯೇ ರೋಲ್ ಮಾಡಲ್ ಅಂತೇ. ತನ್ನ ತಂದೆ ನಮ್ಮನ್ನ ನೋಡಿ ಹೆಮ್ಮೆ ಪಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡು ನನ್ನ ಪ್ರತಿ ಹಂತದ ಶಿಕ್ಷಣವನ್ನ ಮುಗಿಸಿದೆ. ನನ್ನ ತಂದೆಗೆ ಹೆಮ್ಮೆಯಾಗುವಂತೆ ಬದುಕುವುದು ನಮ್ಮ ಕನಸಾಗಿತ್ತು. ಈಗ ಅದನ್ನೇ ನನ್ನ ತಲೆಯಲ್ಲಿ ಇಟ್ಟುಕೊಂಡು ನನ್ನ ಕೈಲಾದ ಸೇವೆಯನ್ನ ನಾನು ಜನರಿಗೆ ಮಾಡುತಿದ್ದೀನಿ ಎನ್ನುತ್ತಾರೆ ರೇಣುಕಾ.
ಇವರು ಈ ಇಲಾಖೆಗೆ ಸೇರಿದ ಮೇಲೆ 2007 ರಲ್ಲಿ ಮದುವೆಯಾದರು. ಇವರ ಪತಿ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾರೆ. ಬೆಳಗ್ಗೆ ಮಕ್ಕಳನ್ನ ತಯಾರಿ ಮಾಡಿ ಶಾಲೆಗೆ ಕಳುಹಿಸಿ ನಾನು ಹೊರಗೆ ಬಂದರೆ ಮತ್ತೆ ನಾನು ಮನೆ ಸೇರುವುದು ರಾತ್ರಿನೇ, ಒಮ್ಮೊಮ್ಮೆಯಂತು ರಾತ್ರಿ ಹಗಲು ವ್ಯತ್ಯಾಸವೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ರೇಣುಕಾ ಸುಕುಮಾರ್ ಗೆ ಅವರ ಕುಟುಂಬದವರು ಜೊತೆಯಾಗಿ ನಿಂತು ಮಕ್ಕಳನ್ನ ನೋಡಿಕೊಳ್ಳುತ್ತಾರೆ. ನಾನು ತುಂಬಾ ಲಕ್ಕಿ. ನನ್ನ ಪತಿ ಹಾಗೂ ನಮ್ಮ ಅತ್ತೆ ಮಾವನವರ ಸಂಪೂರ್ಣ ಸಹಕಾರ ಇರುವುದರಿಂದಲೇ ನಾವು ದಕ್ಷತೆಯಿಂದ ಕೆಲಸ ಮಾಡಲು ಸಾದ್ಯವಾಗುತ್ತಿರುವುದು ಎನ್ನುತ್ತಾರೆ ರೇಣುಕಾ.