ನಾವು ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುತ್ತೇವೆ. ಆದರೆ ಕೆಲವೊಂದು ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯಕವಾಗುತ್ತದೆ. ಅದೇ ರೀತಿ ಕರ್ಬುಜ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳು ಸಿಗುತ್ತವೆ. ಅದೇನು ಲಾಭ ನೋಡೋಣ ಬನ್ನಿ.
ಪ್ರತಿದಿನ ಬೆಳಗ್ಗೆ ತಿಂಡಿ ಜತೆ ಕರಬೂಜ ಹಣ್ಣನ್ನು ಸೇವಿಸುದರಿಂದ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಕರಬೂಜ ಹಣ್ಣನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಕರಬೂಜ ಬೀಜವನ್ನು ಒಣಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಪ್ರತಿದಿನ ಸೇವಿಸಿದರೆ ಹೊಟ್ಟೆ ಹುಳಗಳು ನಿವಾರಣೆಯಾಗುತ್ತದೆ. ಕರಬೂಜ ಹಣ್ಣನ್ನು ನೀರಲ್ಲಿ ಕುದಿಸಿ ಕಷಾಯ ತಯಾರಿಸಿ ಆ ಕಷಾಯವನ್ನು ದಿನಕ್ಕೆ 2-3 ಬಾರಿ ಸೇವಿಸಿದರೆ ಮೂತ್ರ ಮಾಡುವಾಗ ಉರಿ ಇದ್ದರೆ ಶಮನವಾಗುತ್ತದೆ.
ಕರಬೂಜ ಹಣ್ಣಿನ ಜೊತೆ ಕಲ್ಲುಸಕ್ಕರೆ ಸೇರಿಸಿ ಸೇವಿಸಿವುದರಿಂದ ಹೊಟ್ಟೆ ಹುಣ್ಣು ಅಥವಾ ಹೊಟ್ಟೆ ಅಲ್ಸರ್ ನಿವಾರಣೆಯಾಗುತ್ತದೆ. ಹಾಗು ಕರಬೂಜ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಜೀವ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮುಖದ ಚರ್ಮ ಒಣಗಿದ್ದರೆ, ಕರಬೂಜ ಹಣ್ಣಿಗೆ ಹಾಲಿನ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಪ್ಯಾಕ್ ಹಾಕಿದರೆ ಚರ್ಮ ಮೃದುವಾಗುತ್ತದೆ. ಕರಬೂಜ ಸೇವನೆಯಿಂದ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ.