ಅಯ್ಯೋ ನನಗೆ ಕಣ್ಣಿನ ಸುತ್ತಾ ಕಪ್ಪು ಕಲೆಗಳು ಅಂದರೆ ಬ್ಲಾಕ್ ಸರ್ಕಲ್ ಅಥವಾ ಡಾರ್ಕ್ ಸರ್ಕಲ್ ಹೆಚ್ಚಾಗಿದೆ ಏನು ಮಾಡೋದು ಅಂತಾ ಗೊತ್ತಾಗುತ್ತಿಲ್ಲ ಅಂತಾ ಚಿಂತೆ ಪಡುತ್ತಿದ್ದೀರಾ ಹಾಗಾದರೆ ನಿಮಗೆ ಬ್ಲಾಕ್ ಸರ್ಕಲ್ ಹೋಗಲಾಡಿಸಲು ಇಲ್ಲೊಂದಿಷ್ಟು ಮನೆ ಮದ್ದುಗಳಿವೆ ನೋಡಿ..
ಬ್ಲಾಕ್ ಸರ್ಕಲ್ ಅನ್ನೋದು ಅನೇಕ ಮಂದಿಗೆ ಕಾಡುವ ಚಿಂತೆ. ಮುಖ ಎಷ್ಟೇ ಅಂದವಾಗಿದ್ದರೂ ಕೂಡ ಈ ಬ್ಲಾಕ್ ಸರ್ಕಲ್ ಅನ್ನೋದು ಅಂದವನ್ನು ಕೆಡಿಸಿಬಿಡುತ್ತೆ. ಇದೀಗ ಇಂಥಹ ಬ್ಲಾಕ್ ಸರ್ಕಲ್ಗೆ ಮನೆಯಲ್ಲಿಯೇ ಮದ್ದು ಮಾಡಬಹುದು. ಕೆಲವೊಂದಿಷ್ಟು ಟಿಪ್ಸ್ ಯುಸ್ ಮಾಡೋದರಿಂದ ಬ್ಲಾಕ್ ಸರ್ಕಲ್ನ್ನು ಕಡಿಮೆ ಮಾಡಬಹುದು.
ಸಾಮಾನ್ಯವಾಗಿ ಬ್ಲಾಕ್ ಸರ್ಕಲ್ ಅನ್ನೋದು ನಿದ್ದೆ ಕಡಿಮೆಯಾದಾಗ ಅಥವಾ ಹೆಚ್ಚಿನ ಟೆಂಕ್ಷನ್ಗೆ ಬರುತ್ತದೆ. ಸರಿಯಾದ ಸಮಯಕ್ಕೆ ಅಂದರೆ ಸುಮಾರು ರಾತ್ರಿ ಹೊತ್ತು ೭ ತಾಸು ನಿದ್ದೆ ಮಾಡೋದರಿಂದಲೂ ಟೆಂಕ್ಷನ್ ಕಡಿಮೆ ಮಾಡೋದರಿಂದಲೂ ಈ ಬ್ಲಾಕ್ ಸರ್ಕಲ್ ಕಡಿಮೆ ಮಾಡಬಹುದು.
ಸಾಮಾನ್ಯವಾಗಿ ಬ್ಲಾಕ್ ಸರ್ಕಲ್ಗಳು ಹೆಚ್ಚಾಗಲು ಪೌಷ್ಟಿಕಾಂಶ ಕೊರತೆ ಕೂಡ ಇರುತ್ತದೆ. ಅಂದರೆ ಪೌಷ್ಟಿಕಾಂಶ ಆಹಾರ, ತಾಜಾ ಹಣ್ಣು, ನೆನೆ ಹಾಕಿದ ಸಿರಿಧಾನ್ಯಗಳನ್ನು ತಿನ್ನುವುದರಿಂದ ಪೌಷ್ಟಿಕಾಂಶ ಹೆಚ್ಚಾಗುವುದರ ಜೊತೆಗೆ ಬ್ಲಾಕ್ ಸರ್ಕಲ್ ಕಡಿಮೆ ಮಾಡಬಹುದು.
ಸೌತೇ ಕಾಯಿ ರಸವನ್ನು ಕಣ್ಣಿನ ಸುತ್ತಾ ಹಚ್ಚುವುದರಿಂದ ಈ ಡಾರ್ಕ್ ಸರ್ಕಲ್ ಕಡಿಮೆ ಮಾಡಬಹುದು. ಇನ್ನು ಆಲೋಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಕಣ್ಣಿನ ಸುತ್ತಾ ೧೫ ನಿಮಿಷ ಇಡುವುದರಿಂದಲೂ ಈ ಡಾರ್ಕ್ ಸರ್ಕಲ್ ಕಡಿಮೆ ಮಾಡಬಹುದು.
ಕಿತ್ತಾಳೆ ರಸವನ್ನು ಗ್ಲಿಸರಿನ್ನಲ್ಲಿ ಬರೆಸಿ ಹಚ್ಚಿ ನಂತರ ೧೫ ರಿಂದ ೨೦ ನಿಮಿಷದ ಬಳಿಕ ತೊಳೆಯುವುದರಿಂದ ಬ್ಲಾಕ್ ಸರ್ಕಲ್ಅನ್ನು ಕಡಿಮೆ ಮಾಡಬಹುದು. ಇಷ್ಟೆಅಲ್ಲ ಮನೆ ಮದ್ದು ಡಾರ್ಕ್ ಸರ್ಕಲ್ಗೆ ಉಪಯುಕ್ತ.