ಕನಸುಗಳು ಎನ್ನುವುದು ಯಾರಿಗೆ ಬೀಳಲ್ಲ ಹೇಳಿ ಎಲ್ಲರಿಗೂ ಕೂಡ ಕನಸುಗಳು ಬಿದ್ದೆ ಬೀಳುತ್ತದೆ. ಆದರೆ ಎಲ್ಲರಿಗೂ ಕೂಡ ವಿಶೇಷವಾಗಿ ಡಿಫ್ರೆಂಟ್ ಡಿಫ್ರೆಂಟ್ ಆಗಿರುವಂತಹ ಕನಸುಗಳು ಬೀಳುತ್ತವೆ ಅಂತ ಹೇಳಬಹುದು. ಕೆಲವೊಬ್ಬರಿಗೆ ಕನಸುಗಳಲ್ಲಿ ಹಾವು ಕಂಡರೆ ಇನ್ನು ಕೆಲವೊಬ್ಬರಿಗೆ ಕನಸಿನಲ್ಲಿ ನಾಯಿ ಕನಸಿನಲ್ಲಿ ದೇವರು ಕಾಣುವಂತಹದ್ದು ಎಂಥ ಸಾಕಷ್ಟು ವಿಚಿತ್ರವಾದ ಅಂತಹ ಕನಸುಗಳು ಬೀಳುತ್ತದೆ.
ಇನ್ನು ಇವತ್ತಿನ ಮಾಹಿತಿಗೆ ನಿಮಗೆ ವಿಶೇಷವಾಗಿ ನಿಮ್ಮ ಕನಸಿನಲ್ಲಿ ಬೆಕ್ಕುಗಳು ಅಥವಾ ಬೆಕ್ಕು ಬಂದರೆ ಅಥವಾ ಬೆಕ್ಕು ಯಾವ ರೀತಿಯಾದಂತಹ ಒಂದು ಘಟನೆಗಳು ಅಥವಾ ಯಾವ ರೀತಿ ನಿಮ್ಮ ಕನಸಿನಲ್ಲಿ ಬರುತ್ತಿದೆ ಇದರ ಅರ್ಥಗಳೇನು ಇದರಿಂದ ನಿಮಗೆ ಏನೇನು ಒಳ್ಳೆಯದಾಗುತ್ತದೆ ಏನೇನು ಆಗುತ್ತದೆ ಎಲ್ಲವನ್ನು ಕೂಡ ನಾನು ಇವತ್ತಿನ ಮಾಹಿತಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇವೆ.
ಬೆಕ್ಕು ನಮ್ಮ ಕನಸಿನಲ್ಲಿ ಬರುವುದು ಕೆಲವೊಂದು ಬಾರಿ ಸುಖ ಎಂದರೆ ಕೆಲವೊಂದು ಬಾರಿ ದುಃಖ ಕೊಡುತ್ತದೆ ಅಂತ ಹೇಳಲಾಗುತ್ತದೆ ಹಾಗಿದ್ದರೆ ಯಾವ ರೀತಿ ಬಂದರೆ ಸುಖ ಯಾವ ರೀತಿ ಬಂದರೆ ದುಃಖ ಅಂತ ನಾವು ನಿಮಗೆ ಹೇಳುತ್ತೇನೆ. ಅದನ್ನು ಕರೆಕ್ಟಾಗಿ ಕೇಳಿಸಿಕೊಳ್ಳಿ ಇದರಲ್ಲಿ ಮೊದಲನೆಯದಾಗಿ ಏನಪ್ಪಾ ಎಂದರೆ ನಿಮಗೆ ಎರಡು ಬೆಕ್ಕುಗಳು ಜಗಳ ಆಡುತ್ತಿರುವ ತರಹ ಕನಸಿನಲ್ಲಿ ಬಿದ್ದರೆ ಇದು ನಿಮ್ಮ ಮನೆಯ ಸದಸ್ಯರ ಜೊತೆಗೆ ಅಥವಾ ನಿಮ್ಮ ಮನೆಯ ಅಕ್ಕ-ಪಕ್ಕ ಇರುವಂತಹ ಒಂದು ಜನಗಳ ನಡುವೆ ಜಗಳ ಆಗುವ ಒಂದು ಸಂಕೇತ ಅಂದರೆ ಮುಂದಿನ ನಿಮಗೆ ಅಥವಾ ಯಾವಾಗಲೂ ಅಥವಾ ನಾಳೆ ಇವತ್ತು ಕನಸು ಬಿದ್ದಿದೆ
ಎಂದರೆ ನಾಳೆ ನಿಮಗೆ ಜಗಳ ಆಗುವಂತಹ ಒಂದು ಸಂಕೇತ ಇದು ತೋರಿಸುತ್ತದೆ ಎನ್ನುವ ಒಂದು ಅರ್ಥ ಅಂತ ಹೇಳಲಾಗುತ್ತದೆ. ಹಾಗಾಗಿ ಈ ರೀತಿ ಕನಸು ಬಿದ್ದಾಗ ನೀವು ಹೆಚ್ಚಾಗಿ ಮಾತನಾಡುವುದು ಅಥವಾ ಇನ್ನೊಬ್ಬರ ಹತ್ತಿರ ಏನಾದರೂ ಮಾತು ಮಾತಿಗೆ ಮಾತು ಬೆಳೆಸುವುದು ಆಗಲಿ ಇಂತಹ ಕೆಲಸಗಳನ್ನು ನೀವು ಮಾಡಬಾರದು ಮಾಡಿದರೆ ಜಗಳ ತುಂಬಾ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಅಂತ ಹೇಳಲಾಗುತ್ತದೆ.
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡುವುದು ಒಳ್ಳೆಯ ಸಂಕೇತವಾಗಿದೆ. ಅಂತಹ ಕನಸುಗಳ ಮೂಲಕ ನೀವು ಹಣವನ್ನು ಗಳಿಸಬಹುದು. ನಿಮ್ಮ ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ, ನೀವು ಯಾವುದಾದರೂ ಮಾಧ್ಯಮದ ಮೂಲಕ ಇದ್ದಕ್ಕಿದ್ದಂತೆ ಹಣವನ್ನು ಗಳಿಸಬಹುದು. ಆದ್ದರಿಂದ, ಕನಸಿನಲ್ಲಿ ಕಪ್ಪು ಬೆಕ್ಕನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ನಿಮ್ಮ ಕನಸಿನಲ್ಲಿ ಬೆಕ್ಕು ನಿಮ್ಮ ಮೇಲೆ ದಾಳಿ ಮಾಡುತ್ತಿದೆ ಅಥವಾ ನಿಮ್ಮನ್ನು ಕಚ್ಚಲು ಓಡಿ ಬರುತ್ತಿದೆ ಎಂಬುದನ್ನು ನೀವು ನೋಡಿದರೆ, ನೀವು ದೊಡ್ಡ ನಷ್ಟವನ್ನು ಅನುಭವಿಸುವಿರಿ ಎಂದು ಅರ್ಥಮಾಡಿಕೊಳ್ಳಿ. ಕನಸಿನಲ್ಲಿ ನಿಮ್ಮ ಮೇಲೆ ದಾಳಿ ಮಾಡುವಾಗ ಬೆಕ್ಕು ನಿಮ್ಮನ್ನು ಕಚ್ಚಿದರೆ, ನಿಮ್ಮ ಶತ್ರುಗಳು ನಿಮ್ಮ ಮೇಲೆ ದಾಳಿ ಮಾಡಬಹುದು ಎಂದರ್ಥ.