ವಾತಾವರಣದಲ್ಲಿ ಬದಲಾವಣೆ ಆದಂತಲ್ಲ ನೆಗಡಿ,ಕೆಮ್ಮು, ಕಫ, ಗಂಟಲೂರಿ ಇದೆಲ್ಲ ಸಾಮಾನ್ಯವಾಗಿ ಕಾಡಲಾರಂಭಿಸುತ್ತದೆ. ಈ ಸಮಸ್ಯೆಗಳು ನಮ್ಮ ದೈನಂದಿನ ಕೆಲಸಗಳಲ್ಲಿ ಗಮನ ಕೊಡದಷ್ಟು ಪೀಡಿಸುತ್ತವೆ.ಮಾತ್ರೆ ಔಷಧಿಗಳು ತೆಗೊಂಡ್ರೆ ಹೆಚ್ಚು ನಿದ್ದೆ ಬರುತ್ತೆ ಅನ್ನೋ ಚಿಂತೆ, ಮನೆಮದ್ದು ಮಾಡೋಣ ಅಂದ್ರೆ ಟೈಮ್ ಸಾಕಾಗಲ್ಲ ಅನ್ನೋ ಚಿಂತೆ. ಹೀಗಿರ್ಬೇಕಾದ್ರೆ ಹೇಗಪ್ಪಾ ಈ ಸಮಸ್ಯೆಗಳಿಂದ ಮುಕ್ತಿ ಪಡೆಯೋದು ಅಂತ ಯೋಚಿಸ್ತಿದ್ರೆ ಇಲ್ಲಿದೆ ಪರಿಹಾರ.
ಫೇಶಿಯಲ್ ಸ್ಟೀಮ್/ಹಬೆ: ಮನೇಲಿ ಸ್ಟೀಮ್ ಇನ್ಹೇಲರ್ ಇದ್ದೀಯ ಹಾಗಿದ್ರೆ ಏನ್ ಯೋಚ್ನೆ ಮಾಡ್ತಿದೀರಾ? ಅದಕ್ಕೆ ನೀರಿನ ಜೊತೆ ನೀಲಗಿರಿ ಅಥವಾ ತುಳಸಿ ಎಲೆಗಳನ್ನು ಬೆರೆಸಿ ೫-೭ ನಿಮಿಷಗಳ ಕಾಲ ಹಬೆ ತೆಗೆಂದುಕೊಂಡಲ್ಲಿ ತಲೆನೋವು, ಮೂಗು ಕಟ್ಟುವಿಕೆಯಿಂದ ತತ್ತಕ್ಷಣ ಪರಿಹಾರ ದೊರಕುತ್ತದೆ. ಸ್ಟೀಮ್ ಇನ್ಹೇಲರ್ ಇಲ್ಲದಿದ್ದಲ್ಲಿ ಓಲೆ ಮೇಲೆ ನೀರನ್ನು ಇಟ್ಟು ಹಬೆ ಬರೋವರೆಗೆ ಕಾಯಿಸಿ ಅದರಿಂದಲೂ ಹಬೆಯನ್ನು ತೆಗೆದುಕೊಳ್ಳಬಹುದು.
ಬಿಸಿ ಪಾದ ಮತ್ತುಅಂಗೈ ಸ್ನಾನ: ಎರಡು ಕೈ-ಕಾಲುಗಳನ್ನು ಬಿಸಿ ನೀರಿನಲ್ಲಿ ೧೫ ನಿಮಿಷಗಳ ಕಾಲ ಅದ್ದಿಟ್ಟಲ್ಲಿ ನೆಗಡಿ ಇಂದ ಉಂಟಾದ ತಲೆಬಾರ, ತಲೆ ನೋವು, ಎದೆ ಬಿಗಿತ ಕಡಿಮೆಯಾಗುತ್ತದೆ. ಬಿಸಿ ನೀರಿನಲ್ಲಿ ಅದ್ದಿಡುವುದರಿಂದ ಕೈ ಮತ್ತು ಕಾಲುಗಳ ರಕ್ತಸಂಚಾರ ಅಧಿಕವಾಗಿ ತಲೆಯ ಒತ್ತಡ ಕಡಿಮೆಯಾಗುವುದಲ್ಲದೆ ಶ್ವಾಸಕೋಶಗಳ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ.
ಬಿಸಿ ಎದೆ ಪಟ್ಟಿ; ಒಂದು ಟವೆಲ್ ಅನ್ನು ಬಿಸಿ ನೀರಿನಲ್ಲಿ ಅದ್ಧಿ ಎದೆಯ ಸುತ್ತ ಕಟ್ಟುವುದರಿಂದ ಕಫ ನೀರಾಗಿ ಹೊರ ಬರುತ್ತದೆ. ಕಫದಿಂದ ಉಂಟಾದ ಎದೆ ಭಾರ ಕೆಮ್ಮು ಸಹ ಕಡಿಮೆಯಾಗುತ್ತದೆ. ನಿರಂತರ ಬಿಸಿ ಶಾಖ ನೀಡಬೇಕೆಂದಿದ್ದರೆ ಬಿಸಿ ನೀರಿನ ಬ್ಯಾಗ್ ಅನ್ನು ಮೇಲಿನ ಬೆನ್ನಿನ ಮೇಲೆ ಸಹ ಇಡಲು ಬಹುದು.
ಬಿಸಿ ನೀರು ಸೇವನೆ: ದಿನಕ್ಕೆ ಕನಿಷ್ಠ ೩ ಲೀಟರ್ ಬಿಸಿ ನೀರು ಕುಡಿದ್ದಲ್ಲಿ ಕೆಮ್ಮು ಕಫ ನಿಯಂತ್ರಣಕ್ಕೆ ಬರುತ್ತದೆ. ಬಿಸಿ ನೀರು ಕುಡಿಯುವಾಗ ಗಂಟಲಿನ ಸ್ನಾಯುಗಳು ರಿಲಾಕ್ಸ್ ಆಗಿ ಅಲ್ಲಿರುವ ಉರಿ,ನೋವುಗಳು ಶಮನವಾಗುತ್ತವೆ. ಈ ಮೇಲಿನ ಕ್ರಮಗಳನ್ನು ದಿನದಲ್ಲಿ ೩ ಸಾರಿ ಪಾಲಿಸಿದ್ದಲ್ಲಿ ನಿಮ್ಮ ಸಮಸ್ಯೆಗಳಿಂದ ಬೇಗನೆ ಗುಣ ಹೊಂದಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.