ನಮಸ್ತೇ ಪ್ರಿಯ ಓದುಗರೇ, ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸು ಒಂದು ದಿವ್ಯೌಷಧ ಎಂಬುದು ಅನೇಕರಿಗೆ ಗೊತ್ತಿರದ ವಿಷಯ. ಮತ್ತು ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಿಗೆ ಪ್ರಾಮುಖ್ಯತೆ ಹೆಚ್ಚು. ಜಗತ್ತಿನಾದ್ಯಂತ ಹೆಸರು ಪಡೆದ ಖಾದ್ಯಗಳನ್ನು ನಮ್ಮ ಭಾರತೀಯರು ತಯಾರಿಸುತ್ತಾರೆ. ಸಾಂಬಾರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದುದ್ದು. ಪ್ರತಿನಿತ್ಯ ಅಡುಗೆಯಲ್ಲಿ ಖಾರಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದಾಗಿದೆ. ನಮ್ಮ ಹಿರಿಯರು ಪುರಾತನ ಕಾಲದಿಂದಲೂ ಕರಿಮೆಣಸು ಅನ್ನು ಸಾಂಬಾರ ಪದಾರ್ಥಗಳಾಗಿ ಉಪಯೋಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಔಷಧ ರೂಪದಲ್ಲಿ ಬಳಕೆ ಮಾಡುತ್ತಾರೆ. ಇದು ಮೊದಲಿನ ಕಾಲದಿಂದಲೂ ರೂಢಿಯಲ್ಲಿದೆ.ಆಯುರ್ವೇದದಲ್ಲಿ ಕರಿಮೆಣಸು ಔಷಧವಾಗಿ ಬಳಕೆ ಮಾಡುತ್ತಾರೆ ಅಂತ ತಿಳಿದು ಬಂದಿದೆ.
ಸಿರಿಯಾಕ್ ಬುಕ್ ಆಫ್ ಮೆಡಿಕಲ್ ಎಂಬ ಐದನೇ ಶತಮಾನದ ಪುಸ್ತಕವು ಕರಿಮೆಣಸು ಅತಿಸಾರ ಕಿವಿನೋವು, ಮಲಬದ್ಧತೆ, ಅಜೀರ್ಣ ಗಂಟಲು ಬೇನೆ ನಿದ್ರಾ ಹೀನತೆ, ಕೀಳು ನೋವು, ಶ್ವಾಸಕೋಶದ ಕಾಯಿಲೆಗಳು ಹುಳುಕು ಹಲ್ಲುಗಳು, ಇನ್ನಿತರ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ ಅಂತ ತಿಳಿಸಿದ್ದಾರೆ.
ಇನ್ನೂ ಇದರಲ್ಲಿ ಸೋಡಿಯಂ ಪೊಟ್ಯಾಶಿಯಂ, ವಿಟಾಮಿನ್ ಎ, ವಿಟಮಿನ್ ಕೆ, ಕ್ಯಾಲ್ಶಿಯಂ ಇನ್ನಿತರ ಖನಿಜ ಲವಣಗಳನ್ನು ಒಳಗೊಂಡಿದೆ. ಕರಿಮೆಣಸು ಜೀರ್ಣಕಾರಿ ಉತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತದೆ. ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಕರಿ ಮೆಣಸಿನಕಾಯಿಗಳನ್ನು ಸೇರಿಸಿಕೊಳ್ಳಬೇಕು. ಮತ್ತು, ಜೇನು ತುಪ್ಪದ ಜೊತೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಳ್ಳಲು ಇಷ್ಟ ಪಡುತ್ತಿದರೆ ನಿಮ್ಮ ಡಯೆಟ್ ನಲ್ಲಿ ಇದನ್ನು ಸೇರಿಸಿಕೊಳ್ಳಿ.
ಏಕೆಂದರೆ ದೇಹದಲ್ಲಿ ಇರುವ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕುತ್ತದೆ. ಹಾಗೂ ಮೂತ್ರ ಮತ್ತು ಬೆವರು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ತೂಕವು ಕಡಿಮೆ ಆಗುತ್ತದೆ ಆಹಾರ ಪದಾರ್ಥಗಳ ಮೇಲೆ ಕರಿ ಮೆಣಸು ಪುಡಿ ಬಳಕೆ ಮಾಡುವುದರಿಂದ ತೂಕ ಕಡಿಮೆ ಆಗುತ್ತದೆ. ಇನ್ನು ನಿಮಗೆ ಶೀತ ನೆಗಡಿ ಕೆಮ್ಮು ಗಂಟಲು ಹಿಡಿದುಕೊಂಡಿದ್ದರೇ ಟೀ ಮಾಡುವಾಗ ಕರಿ ಮೆಣಸು ಮತ್ತು ತುಳಸಿ ಎಲೆಗಳನ್ನು ಹಾಕಿ ಕುದಿಸಿ ಟೀ ಮಾಡಿ ಕುಡಿಯಿರಿ. ಇದರಿಂದ ಶೀತ ನೆಗಡಿ ಕೆಮ್ಮು ಕಡಿಮೆ ಆಗುತ್ತದೆ.
ಜೀರ್ಣ ಕ್ರಿಯೆ ಯಾರಿಗೆ ಸರಿಯಾಗಿ ಆಗುವುದಿಲ್ಲ ಅಂಥವರು ನಿತ್ಯವೂ ಕರೀಮೆಣಸು ತಿನ್ನಿರಿ. ಇದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಇನ್ನು ಯಾರಿಗೆ ಹಸಿವು ಆಗುವುದಿಲ್ಲ ಹೊಟ್ಟೆ ಕಟ್ಟಿದ ಹಾಗೆ ಆಗುತ್ತದೆ ಅಂಥವರಿಗೆ ಕರಿಮೆಣಸು ಹೊಟ್ಟೆಯ ಹಸಿವನ್ನು ಹೆಚ್ಚಿಸುತ್ತದೆ. ಕರಿಮೆಣಸು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಯಾವುದೇ ಕಾಯಿಲೆಗಳು ಹತ್ತಿರ ಬರದಂತೆ ತಡೆಯುತ್ತದೆ. ಇನ್ನೂ ಅಜೀರ್ಣತೆ ಇಂದ ಹೊಟ್ಟೆಗೆ ನೋವು ಬರುತ್ತಿದ್ದರೆ ಮಜ್ಜಿಗೆಯಲ್ಲಿ ಕರಿಮೆಣಸು ಹಾಕಿ ಕುಡಿಯಿರಿ ಇದರಿಂದ ಅಜೀರ್ಣತೆ ನಿವಾರಣೆ ಆಗುತ್ತದೆ. ಜೇನುತುಪ್ಪವನ್ನು ಕರಿಮೆಣಸಿನಲ್ಲಿ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ. ನೋಡಿದ್ರಲಾ ಸಾಂಬಾರ್ ಪದಾರ್ಥಗಳ ರಾಜನಾದ ಕರಿ ಮೆಣಸಿನ ಆರೋಗ್ಯಕರ ಲಾಭಗಳನ್ನು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.