ಎಳ್ಳಿನಲ್ಲಿ ಎರಡು ರೀತಿಯ ಎಳ್ಳುಗಳು ಇರುವುದು ನಿಮಗೆ ಗೊತ್ತೇ ಇರಬಹುದು ಒಂದು ಕಪ್ಪು ಎಳ್ಳು ಇನ್ನೊಂದು ಬಿಳಿ ಎಳ್ಳು ಎಳ್ಳನ್ನು ನಾನಾ ರೀತಿಯಲ್ಲಿ ಬಳಸಲಾಗುತ್ತದೆ ಎಳ್ಳನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದಂತೆ ಅದರಲ್ಲೂ ಕಪ್ಪು ಎಳ್ಳಿನ ಸೇವನೆಯೂ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಇದು ರಕ್ತದ ಒತ್ತಡವನ್ನು ಸುಧಾರಿಸಲು ಮತ್ತು ಪಾರ್ಶ್ವ ವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದಂತೆ ಆದರೆ ಕಪ್ಪು ಎಳ್ಳಿನ ಆರೋಗ್ಯದ ಪ್ರಯೋಜನಗಳ ಬಗ್ಗೆ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.

ಕಪ್ಪು ಎಳ್ಳು ಕ್ಯಾಲ್ಸಿಯಂ ಫೈಬರ್ ಮ್ಯಾಗ್ನಿಷಿಯಂ ರಂಜಕ ತಾಮ್ರ ಮ್ಯಾಗ್ನಿಸ್ ಕಬ್ಬಿಣದಂತ ಪೋಷಕಾಂಶಗಳಿಂದ ತುಂಬಿರುತ್ತದೆ. ಹೃದಯದ ಆರೋಗ್ಯದ ರಕ್ಷಣೆಯಲ್ಲಿ ಎಳ್ಳು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಎಳ್ಳು ಪಡೆದಿದೆ. ಲಿಪಿಡ್ ಅಂಶವನ್ನು ಸಹ ಅತ್ತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಎಳ್ಳು ಕೆಲಸ ಮಾಡುತ್ತದೆ.

ಕಪ್ಪು ಎಳ್ಳು ಅಗತ್ಯವಾದ ಸೂಕ್ಷ್ಮ ಖನಿಜಗಳನ್ನು ಹೊಂದಿರುತ್ತದೆ ಇದು ಜೀವಕೋಶ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ನಿಮ್ಮ ದೇಹದಾದ್ಯಂತ ಆಮ್ಲಜನಕದ ಉತ್ತಮ ಪರಿಚಯವನ್ನು ಸಹಾಯ ಮಾಡುತ್ತದೆ. ಎಳ್ಳಿನಲ್ಲಿ ಮೊದಲೇ ಹೇಳಿದಂತೆ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಕಾರಣ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತದೆ.

ಸಂಶೋಧನೆಯ ಒಂದು ಭಾಗ ಹೇಳುವಂತೆ ಹಾರ್ಮೋನುಗಳ ಪ್ರಭಾವದಿಂದ ಉಂಟಾಗುವ ಕ್ಯಾನ್ಸರ್ ಸಮಸ್ಯೆಯನ್ನು ಎಳ್ಳು ಸುಲಭವಾಗಿ ನಿವಾರಣೆ ಮಾಡುತ್ತದೆ. ಇನ್ನು ಕಪ್ಪು ಎಳ್ಳಿನಲ್ಲಿ ಅರ್ಧಕ್ಕಿಂತ ಹೆಚ್ಚು ಎಣ್ಣೆಯಿಂದ ಕೂಡಿದೆ ಇದು ಮೋನೋ ಸ್ಯಾಚುರೇಟೆಡ್ ಮತ್ತು ಬಹು ಪರ್ಯಪ್ತ ಕೊಬ್ಬಿನ ಆರೋಗ್ಯಕರ ಮೂಲವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಅಧಿಕ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರವನ್ನು ಅಪರ್ಯಾಪ್ತ ಕೊಬ್ಬಿನೊಂದಿಗೆ ಬದಲಾಯಿಸುವುದರಿಂದ ನಿಮ್ಮ ಹೃದಯ ಸಂಬಂಧಿ ಕಾಯಿಲೆಗಳು ಪಾಶ್ವ ವಾಯು ಮತ್ತು ಹೃದಯದ ಅಪಘಾತದ ಕಾಯಿಲೆಗಳಿಂದ ಕಡಿಮೆ ಮಾಡಬಹುದು.

ಎಳ್ಳಿನ ಎಣ್ಣೆಯನ್ನು ಹೆಚ್ಚಾಗಿ ಕೂದಲು ಮತ್ತು ಚರ್ಮದ ಉತ್ಪನ್ನಗಳಾದ ಸೋಪು ಶಾಂಪೂ ಮತ್ತು ಮಾಯಿಶ್ಚರೈಸರ್ ಗಳಲ್ಲಿ ಸೇರಿಸಲಾಗುತ್ತದೆ. ಆದ್ದರಿಂದ ಕಪ್ಪು ಎಳ್ಳನ್ನು ತಿನ್ನುವುದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.ಚರ್ಮದ ಸೋಂಕನ್ನು ಉಂಟು ಮಾಡುವ ಕೀಟಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ನಮ್ಮ ದೇಹದಲ್ಲಿ ಎಳ್ಳಿನ ಅಂಶಗಳು ಅಡಗಿದ್ದರೆ ಹೊರಗಿನ ವಾತಾವರಣದ ನಕಾರಾತ್ಮಕ ಪ್ರಭಾವಗಳಿಂದ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ನಮ್ಮ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು. ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡುವಲ್ಲಿ ಸಹ ಎಳ್ಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *