ಇತ್ತೀಚಿನ ಆಹಾರ ಕೆಟ್ಚ ವಾತಾವರಣದಿಂದ ದೇಹಕ್ಕೆ ಅನೇಕ ತೊಂದರೆಗಳು ಕಂಡು ಬರುತ್ತದೆ ಅದರಲ್ಲಿಯೂ ಕರುಳಿನ ಕ್ಯಾನ್ಸರ್ ತುಂಬಾ ಕೆಟ್ಟ ರೋಗ ಎಂದರೆ ತಪ್ಪಾಗಲಾರದು. ಈ ಕ್ಯಾನ್ಸರ್ ಬಂದರೆ ಚಿಕಿತ್ಸೆಗಳಿಗಿಂತಲೂ ಒಳ್ಳೆಯ ಆಹಾರದ ಪದ್ಧತಿ ಅನುಸರಿಸುವುದು ಉತ್ತಮವಾಗಿದೆ.
ಧಾನ್ಯಗಳು ಹಣ್ಣು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು ಮಾಂಸದ ಪದಾರ್ಥಗಳನ್ನು ಕಡಿಮೆ ಮಾಡಬೇಕು ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೊಳ್ಳಬಾರದು ಸದಾ ದೈಹಿಕ ಚಟುವಟಿಕೆಗಳಿಂದಾಗಿ ಕ್ಯಾನ್ಸರ್ ನಿಂದ ದೂರ ಉಳಿಯಬಹುದು ನಾರಿನಂಶವಿರುವ ಆಹಾರ ಪದಾರ್ಥ ಸೇವನೆ ಈ ಕ್ಯಾನ್ಸರ್ ಬರದಂತೆ ತಡೆಯುವ ಅತ್ಯುತ್ತಮ ವಿಧಾನವಾಗಿದೆ.
ಮನುಷ್ಯನ ಕೆಟ್ಟ ಜೀವನ ಶೈಲಿಗಳಿಂದಾಗಿ ಆರೋಗ್ಯಕರ ಆಹಾರ ಸೇವನೆ ಮಾಡದೇ ಇರುವುದು ಸ್ಥೂಲಕಾಯ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಇದ್ದರೆ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಹಸಿವಾಗದೇ ಇರುವುದು ಗಣನೀಯ ಪ್ರಮಾಣದಲ್ಲಿ ತೂಕದ ಇಳಿಕೆ ವಾಂತಿಯಾಗುವುದು ಇನ್ನೂ ಅನೇಕ ಕೆಟ್ಟ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಸ್ಕ್ರೀನಿಂಗ್ ಟೆಸ್ಟ್ ಮಾಡಿಸಬೇಕು ಬ್ಲಡ್ ಟೆಸ್ಟ್ ಅನ್ನು ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು 10 ವರ್ಷಕೊಮ್ಮೆ ಕೊಲೊನೊಸ್ಕೋಪಿ ಪರೀಕ್ಷೆಗೆ ಒಳಪಡಬೇಕಾಗುತ್ತದೆ.