WhatsApp Group Join Now

ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಂದ ನೀರುದೋಗಿಗಳಿಗೆ ಹಾಗು ಯುವಕ ಯುವತಿಯರಿಗೆ ಹಲವಾರು ಯೋಜನೆಗಳು ಇವೆ ಆದರೆ ಇವತ್ತಿನ ಯುವ ಜನಕ್ಕೆ ಅದರ ಬಗ್ಗೆ ಮಾಹಿತಿಗಳ ಬಗ್ಗೆ ತಿಳುವಳಿಕೆ ಕಡಿಮೆ ಇರುತ್ತದೆ ಹಾಗಾಗಿ ಅಂತಹ ಕೆಲವೊಂದು ಯೋಜನೆಗಳ ಪೈಕಿ ಈ ಉದ್ಯಮ ಶೀಲತಾ ಯೋಜನೆ ಸಹ ಒಂದಾಗಿದೆ ಈ ಯೋಜನೆಯಲ್ಲಿ ಯಾರೆಲ್ಲ ಸಾಲ ತೆಗೆದುಕೊಳ್ಳಬಹುದು ಮತ್ತು ಯಾವ ಯಾವ ರೀತಿಯಾದ ಸಾಲ ಸಿಗುತ್ತದೆ ಮತ್ತು ಯಾವ ಯಾವ ಉದ್ಯಮಕ್ಕೆ ಸಾಲ ಸಿಗುತ್ತದೆ ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿರುದ್ಯೋಗ ಯುವಕ ಯುವತಿಯರು ಈ ಉದ್ಯಮಶೀಲತಾ ಚಟುವಟಿಕೆಗಳಾದ ಸಣ್ಣ ಕೈಗಾರಿಕೆ, ಟಾಟಾ ಇಂಡಿಕಾ, ಆಟೋರಿಕ್ಷಾ, ಟ್ಯ್ರಾಕ್ಟರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಚಮ‍್ಗಾರಿಕೆ, ವಕೀಲ ಕಛೇರಿ, ಬ್ಯೂಟಿ ಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್, ಡಿ.ಟಿ.ಪಿ. ಸೆಂಟರ್ ಇತ್ಯಾದಿ ಉದ್ದೇಶಗಳಿಗೆ ರೂ.1.00 ಲಕ್ಷಕ್ಕೂ ಮೇಲ್ಪಟ್ಟ ಘಟಕಗಳಿಗೆ ನೀವು ಸಾಲವನ್ನು ಪಡೆಯಬಹುದು ಇನ್ನು ಈ ಸಾಲ ಪರಿಶಿಷ್ಟ ಪಂಗಡಕ್ಕೆ ಸಿಗಲಿದೆ ಈ ಸಾಲವನ್ನು ನೀವು ಒಂದು ಲಕ್ಷಕ್ಕೂ ಹೆಚ್ಚು ಬೇಕಾದಲ್ಲಿ ಈ ಯೋಜನೆಯಡಿಯಲ್ಲಿ ನೇರವಾಗಿ ಬ್ಯಾಂಕುಗಳಿಂದ ಮಂಜೂರು ಮಾಡಿಸಿಕೊಳ್ಳಬೇಕು ಆಗ ನಿಮಗೆ ನೇರವಾಗಿ ಈ ಪರಿಶಿಷ್ಟ ಪಂಗಡದ ನಿಗಮದಿಂದಲೇ ಸಹಾಯ ಧನ ಮಂಜೂರು ಆಗಲಿದೆ.

ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನೀವು ಯೋಜನೆಯಲ್ಲಿ ಸರ್ಕಾರದಿಂದ ಯಾವರೀತಿಯಾದ ಸಬ್ಸಿಡಿ ಹಣ ಸಿಗುತ್ತೆ ಅನ್ನೋದು ಇಲ್ಲಿದೆ ಇದರಲ್ಲಿ ಸರ್ಕಾರದಿಂದ 70% ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಯಾವ ರೀತಿ ಅಂದರೆ 5 ಲಕ್ಷದವರೆಗೆ ಸಾಲ ಪಡೆದುಕೊಂಡರೆ ಅದರಲ್ಲಿ 70% ಸರ್ಕಾರದಿಂದ ಸಹಾಯಧನ ಸಿಗುತ್ತದೆ ಇನ್ನು ಈ ಯೋಜನೆಯಲ್ಲಿ ಗರಿಷ್ಟ ಅಂದರೆ ೨೦ ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

ಇನ್ನು ಯೋಜನೆಯ ಫಲಾನುಭವಿಗಳಾಗಲು ೧೮ ರಿಂದ ೫೫ ವರ್ಷದ ಒಳಗಿರಬೇಕು ನಿಮ್ಮ ವಯಸ್ಸು ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವ ದಾಖಲೆಗಳು ಅಂದರೆ ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ ಹಾಗು ಜಾತಿ ಆದಾಯ ಪ್ರಮಾಣ ಪತ್ರ ಮತ್ತು ನಿಮ್ಮ ಯೋಜನಾ ವರದಿ ಯಾವುದಕ್ಕೆ ಸಾಲ ಪಡೆಯುತ್ತಿದ್ದಿರಾ ಅನ್ನೋವುದರ ಸಂಪೂರ್ಣ ಮಾಹಿತಿ ಹಾಗು ಬ್ಯಾಂಕ್ ಪಾಸ್ ಬುಕ್ ಹಾಗು ನಿಮ ಮೂರೂ ಫೋಟೋ ಬೇಕಾಗುತ್ತವೆ ಇನ್ನು ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬೇಕು ನೀವು ಯಾವ ಇಲಾಖೆಗೆ ಸಂಬಂಧಿಸಿದಂತೆ ಸಾಲ ತೆಗೆದುಕೊಳ್ಳುತ್ತೀರಿ ಅಲ್ಲಿ ಮಾಹಿತಿಯನ್ನು ಪಡೆಯಬೇಕು ಮತ್ತು ನಿಮ್ಮ ಹತ್ತಿರ ಆ ಇಲಾಖೆಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳಿ.

WhatsApp Group Join Now

Leave a Reply

Your email address will not be published. Required fields are marked *