ನಮಸ್ತೆ ಪ್ರಿಯ ಓದುಗರೇ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತಿದೆ. ದೇವರಿಗೆ ಎಲೇನೀರಿನಂತ ನೈವೇದ್ಯ ಇನ್ನೊಂದಿಲ್ಲ. ಅದು ತುಂಬಾ ಶ್ರೇಷ್ಠ ಮತ್ತು ಪವಿತ್ರವಾದದ್ದು. ಎಳನೀರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ಲಾಭಗಳಿದ್ದು ಅವುಗಳನ್ನು ಒಂದೊಂದಾಗಿ ಇಂದಿನ ಲೇಖನದಲ್ಲಿ ತಿಳಿಯೋಣ. 1. ತೆಂಗಿನಕಾಯಿ ಹೆಚ್ಚು ಪುಷ್ಟಿ ದಾಯಕವಾದ ಆಹಾರ. ಅಂಗೈ, ಅಂಗಾಲು ಉರಿಯುತ್ತಿದ್ದರೆ ಎಳೆನೀರು ಮತ್ತು ಸುಣ್ಣದ ತಿಳಿಯನ್ನು ಸಮವಾಗಿ ಸೇರಿಸಿ ಅದಕ್ಕೆ ಒಂದು ಚಿಟಿಕೆ ಅರಿಶಿನ ಪುಡಿ ಹಾಕಿ ಅಂಗೈ, ಅಂಗಾಲುಗಳಿಗೇ ಹಚ್ಚಿಕೊಂಡರೆ ಉರಿ ಕಡಿಮೆಯಾಗುತ್ತದೆ.
2. ತೆಂಗಿನಕಾಯಿ ತುರಿಯನ್ನು ಒಂದು ಬಟ್ಟಲು ಎಳನೀರಿನೊಂದಿಗೆ ನುಣ್ಣಗೆ ರುಬ್ಬಿ ಅದಕ್ಕೆ ಏಲಕ್ಕಿ ಮತ್ತು ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ ಒಂದು ಬಾರಿ ತೆಗೆದುಕೊಂಡರೆ ಹೊಟ್ಟೆ ಹುಣ್ಣು, ಬಿಕ್ಕಳಿಕೆ, ಎದೆ ನೋವು, ಅನಿದ್ರವಸ್ಥೆ ಇವುಗಳು ಗುಣವಾಗುತ್ತವೆ. 3. ಸಾಂಕ್ರಾಮಿಕ ರೋಗಗಳಿಂದ ನರಳುವವರಿಗೆ ಎಳನೀರನ್ನು ಕೊಡುವುದರಿಂದ ಔಷಧಿ ಬೇಗ ಮೈ ಹಿಡಿದು ರೋಗಿಯು ಬೇಗ ಗುಣ ಹೊಂದುತ್ತಾನೆ. 4. ತೆಂಗಿನಕಾಯಿ ಮತ್ತು ಬೆಲ್ಲವನ್ನು ತಿಂದರೆ ದೇಹಕ್ಕೆ ಒಳ್ಳೆಯದು. ಕೊಬ್ಬರಿ ಮತ್ತು ಬೆಲ್ಲವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ವಸಡು ಗಟ್ಟಿಯಾಗುವುದು ಮತ್ತು ಹಲ್ಲುನೋವು ಬರುವುದಿಲ್ಲ. 5. ಹಾಲಿನೊಂದಿಗೆ ಸ್ವಲ್ಪ ಎಳನೀರು ಬೆರೆಸಿ ಕೊಡುವುದರಿಂದ ಚಿಕ್ಕ ಮಕ್ಕಳು ಹಾಲನ್ನು ವಾಂತಿ ಮಾಡಿಕೊಳ್ಳುವುದಿಲ್ಲ.
6. ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಎಳನೀರಿನಲ್ಲಿ ಕಿವುಚಿ ಮಕ್ಕಳಿಗೆ ಕುಡಿಸಿದರೆ ಒಳ್ಳೆಯದು. ಇದು ಹಾಲಿಗೆ ಸಮವಾದುದು. 7. ಒಣ ಕೊಬ್ಬರಿ ಮತ್ತು ಕಲ್ಲುಸಕ್ಕರೆ ತಿನ್ನುವುದರಿಂದ ಬಾಯಿ ಹುಣ್ಣು ವಾಸಿಯಾಗುತ್ತದೆ. 8. ಗಸಗಸೆಯನ್ನು ನೀರಿನಲ್ಲಿ ನೆನೆಹಾಕಿ ಚೆನ್ನಾಗಿ ರುಬ್ಬಿ, ತೆಂಗಿನತುರಿ ಹಾಲು ತೆಗೆದು ಇದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಪ್ರತಿ ರಾತ್ರಿ ಕುಡಿದರೆ ಕೆಮ್ಮು, ಎದೆನೋವು, ಆಮಶಂಕೆ,ಅತಿಸಾರ ಈ ರೋಗಗಳು ವಾಸಿಯಾಗುತ್ತದೆ.
9. ಎಳನೀರಿನ ಒಳಗಿರುವ ಎಳೆಯ ಕಾಯಿಯನ್ನು ಕಳಿತ ಬಾಳೆಯ ಹಣ್ಣಿನ ಜೊತೆ ಮಸೆದು ಹಾಲು ಸೇರಿಸಿ ಮಕ್ಕಳಿಗೆ ಮತ್ತು ಅಜೀರ್ಣವಾಗಿರುವವರಿಗೆ ಕೊಟ್ಟರೆ ಸುಲಭವಾಗಿ ಜೀರ್ಣವಾಗುತ್ತದೆ. 10. ಒಂದು ಬಟ್ಟಲು ಎಳನೀರಿಗೆ ಒಂದು ಚಮಚ ಜೇುತುಪ್ಪ ಸೇರಿಸಿ ಪ್ರತಿದಿನ ಕುಡಿಯುವುದರಿಂದ ನರಗಳ ದುರ್ಬಲತೆ ಕಡಿಮೆಯಾಗುವುದು ಮತ್ತು ಪುಂಸತ್ವ ಹೆಚ್ಚಾಗುತ್ತದೆ. 11. ವಯಸ್ಸಾದವರಿಗೇ ತೆಂಗಿನ ಹಾಲನ್ನು ಎಳನೀರಿ ನೊಂದಿಗೆ ಸೇರಿಸಿ ಕೊಟ್ಟರೆ ಆರೋಗ್ಯ ವೃದ್ಧಿಯಾಗುತ್ತದೆ. ಇದು ಬಹಳ ಒಳ್ಳೆಯ ದ್ರವರೂಪದ ಆಹಾರ. ಇದನ್ನು ರಿಕೆಟ್ಸ್ ರೋಗ ಬಂದಿರುವ ಮಕ್ಕಳಿಗೂ ಸಹ ಕೊಡಬಹುದು.
12. ಕೊಬ್ಬರಿ ಎಣ್ಣೆ ಉಗುರಿಸುತ್ತನ್ನ ವಾಸಿ ಮಾಡುವುದು. ಈ ಎಣ್ಣೆಗೆ ಕೆಲವು ತೊಟ್ಟು ನಿಂಬೆರಸ ಹಿಂಡಿ ಅಷ್ಟೇ ಪ್ರಮಾಣ ಸುಣ್ಣದ ತಿಳಿಯೊಂದಿಗೆ ಬೆರೆಸಿ, ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಕೂದಲಿನ ಕಾಂತಿ ಹೆಚ್ಚಿ ಕೂದಲು ಉದುರುವುದು ನಿಲ್ಲುತ್ತದೆ. ಕೂದಲಿನ ಕಾಂತಿ ಹೆಚ್ಚಿ ಕೂದಲು ಉದ್ದವಾಗಿ ಬೆಳೆಯುವುದು. ಇದನ್ನು ಅಂಗಾಂಗಗಳಿಗೆ ಹಚ್ಚಿದರೆ ಚರ್ಮ ನಯವಾಗಿ, ಕಾಂತಿಯುತವಾಗಿ, ಮೃದುವಾಗುವುದು ಮತ್ತು ಚರ್ಮ ಸುಕ್ಕುಗಟ್ಟುವುದಿಲ್ಲ. 13. ಅಡಿಗೆಗೆ ಬೇರೆ ಎಣ್ಣೆಗಿಂತ ಕೊಬ್ಬರಿ ಎಣ್ಣೆ ಒಳ್ಳೆಯದು. ಬಲಿತ ತೆಂಗಿನಕಾಯಿ ತುರಿದು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿ ದ ನಂತರ ಈ ಹಾಲನ್ನು ಒಂದು ಪಾತ್ರೆಗೆ ಹಿಂಡಿ ಶೋಧಿಸಿ ಇದನ್ನು ಕಡಿಮೆ ಉರಿಯ ಮೇಲಿಟ್ಟು ನಿಧಾನವಾಗಿ ಕಾಯಿಸಿದರೆ ನೀರಿನ ಅಂಶ ಹೋಗಿ ಶುದ್ಧವಾದ ಎಣ್ಣೆ ಪಾತ್ರೆಯಲ್ಲಿ ಉಳಿಯುತ್ತದೆ. ಈ ಎಣ್ಣೆಯನ್ನು ಬಾಯಿಹುಣ್ಣು ಆದಾಗ ಆಗಾಗ ಹಚ್ಚುತ್ತಿದ್ದರೆ ವಾಸಿಯಾಗುತ್ತದೆ.
14. ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಚೆನ್ನಾಗಿ ಬೆನ್ನಿಗೆ ಹಚ್ಚಿ ಬಿಸಿ ನೀರು ಹಾಕಿದರೆ ಗರ್ಭಿಣಿಯರಿಗೆ ಬರುವ ಬೆನ್ನುನೋವು ಕಡಿೆಯಾಗುತ್ತದೆ. 15. ಶೀತದಿಂದ ಕಿವಿನೋವು ಬಂದಾಗ ಒಂದು ಎಸಳು ಬೆಳ್ಳುಳ್ಳಿ ಮತ್ತು ಒಂದು ಲವಂಗವನ್ನು ಒಂದು ಚಮಚ ಕೊಬ್ಬರಿ ಎಣ್ಣೆಯಲ್ಲಿ ಕರಿದು, ಆ ಎಣ್ಣೆಯನ್ನು ಮೂರು ನಾಲ್ಕು ತೊಟ್ಟು ಕಿವಿಗೆ ಹಾಕಿದರೆ ನೋವು ಕಡಿಮೆಯಾಗುತ್ತದೆ. 16. ಕೊಬ್ಬರಿ ಎಣ್ಣೆಯ ಜೊತೆ ಹಸುವಿನ ಬೆಣ್ಣೆ ಸೇರಿಸಿ ಮಗುವಿಗೆ ಹಚ್ಚಿ ಮಾಲೀಸು ಮಾಡಿ ನಂತರ ಏಳೆ ಬಿಸಿಲಿನ ಸ್ನಾನ ಮಾಡಿದರೆ ಶಕ್ತಿಯುತವಾಗಿ ಮತ್ತು ಆರೋಗ್ಯವಾಗಿ ಬೆಳೆಯುತ್ತದೆ.
17. ಹಸಿ ಕೊಬ್ಬರಿ ಯಿಂದ ಹಾಲು ತೆಗೆದು ಅದಕ್ಕೆ ಗ್ಲಿಸರಿನ್ ಸೇರಿಸಿ ಅಂಗೈ, ಅಂಗಾಲು, ಮುಖಕ್ಕೆ ಹಚ್ಚಿಕೊಂಡರೆ ಚರ್ಮ ಮೃದುವಾಗುತ್ತದೆ. 18. ಒಂದು ಬಟ್ಟಲು ಎಳನೀರಿಗೆ ಮೂರು ನಾಲ್ಕು ಚಿಟಿಕೆ ಏಲಕ್ಕಿ ಪುಡಿ ಮತ್ತು ಎರೆಡು ಚಮಚ ಜೇನುತಪ್ಪ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ. 19. ಪ್ರತಿ ದಿನ ಎಳನೀರಿನೊಂದಿಗೆ ಮುಖ ತೊಳೆದುಕೊಂಡರೆ ಮೊಡವೆಗಳು ಕಡಿಮಯಾಗುತ್ತವೆ. ಕಪ್ಪು ಕಲೆಗಳು ಹೊರತು ಹೋಗುತ್ತದೆ ಮತ್ತು ಮುಖದ ಚರ್ಮ ಕಾಂತಿಯುತವಾಗುತ್ತದೆ. 20. ಎಳನೀರು ತಂಪಾದ ಪಾನೀಯ. ಪಿತ್ತಕೋಶ ಮತ್ತು ಹೃದಯ ಹಾಗೂ ಮೂತ್ರಪಿಂಡ ರೋಗಿಗಳಿಗೆ ಎಳನೀರು ಒಳ್ಳೆಯದು.
ಎಳನೀರಿಗೆ ನಿಂಬೆಹಣ್ಣಿನ ರಸ ಹಿಂಡಿ ಕುಡಿಯುವುದರಿಂದ ದೇಹದಲ್ಲಿ ಲವಣಯುಕ್ತ ಪೋಷಕಾಂಶಗಳ ಮತ್ತು ಜಲಂಶದ ಕೊರತೆಯನ್ನು ನೀಗಿಸುತ್ತದೆ. 21. ಎಳನೀರಿಗೆ ಬೆಲ್ಲ ಮತ್ತು ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿಯನ್ನು ಸೇರಿಸಿ ದಿನಕ್ಕೆ ಎರೆಡು ಬಾರಿ ಕುಡಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ. 22. ಅಮೃತ ಪ್ರಾಯವದ ಎಳನೀರನ್ನು ಕುಡಿದರೆ ದಾಹ, ಬಳಲಿಕೆ, ಆಲಸ್ಯ, ಕಳೆದು ದೇಹ ಚಟುವಟಿಕೆಯಿಂದ ಇರುತ್ತದೆ. ಉಬ್ಬಸ, ಕೆಮ್ಮು,ಅಜೀರ್ಣ ಈ ರೋಗಗಳಲ್ಲಿ ಎಳನೀರು ಕುಡಿಯುವುದು ಒಳ್ಳೆಯದಲ್ಲ. ಶುಭದಿನ.