ಸಾಮಾನ್ಯವಾಗಿ ಎಳನೀರನ್ನು ಕುಡಿಯೋದರಿಂದ ಸಾಕಷ್ಟು ಲಾಭಗಳಿವೆ. ಅದೆಷ್ಟೋ ರೋಗಗಳಿಗೆ ಈ ಎಳನೀರು ರಾಮಭಾಣ. ಮನುಷ್ಯನ ದೇಹಕ್ಕೆ ಬೇಕಾಗುವ ಅಂಶಗಳು ಸದ್ಯ ಎಳನೀರಿನಲ್ಲಿವೆ. ಅಷ್ಟೆ ಅಲ್ಲ ಈ ಎಳನೀರು ತ್ವಚೆಗೂ ಕೂಡ ಮುಖ್ಯವಾಗಿದೆ. ಹಾಗಾದ್ರೆ ಯಾವ ರೋಗಕ್ಕೆ ಎಳನೀರು ಮದ್ದು, ಎಳನೀರಿನಿಂದ ತ್ವಚೆ ಮೇಲಾಗುವ ಪರಿಣಾಮ ಏನು ಅಂತೀರಾ ಮುಂದೆ ನೋಡಿ..

ಎಳನೀರಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಸಾಕಷ್ಟು ಅಂಶಗಳಿವೆ. ಎಳನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ತಗ್ಗಿಸಬಹುದು. ಇನ್ನು ಈ ಎಳನೀರಿಗೆ ನಿಂಬೆ ಹಣ್ಣು ಹಾಕಿ ಕುಡಿಯೋದರಿಂದ ಅತೀ ವೇಗವಾಗಿ ದೇಹ ಉಷ್ಣತೆ ಕಡಿಮೆಯಾಗಲಿದೆ.

ಇನ್ನು ಪ್ರತಿ ನಿತ್ಯ ಎಳನೀರನ್ನು ಸೇವಿಸುವುದರಿಂದ ಮೂತ್ರಕಲ್ಲು ಅಂದರೆ ಕಿಡ್ನಿ ಸ್ಟೋನ್ ಕಡಿಮೆಯಾಗುತ್ತದೆ. ಇನ್ನು ಈ ಎಳೆ ನೀರ ಜೊತೆಗೆ ಕಲ್ಲು ಸಕ್ಕರೆ ಹಾಕಿ ಕುಡಿದರೆ ಖುತು ಸ್ರಾವದ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವು ಕಡಿಮೆಯಾಗುತ್ತದೆ,

ಇನ್ನು ಮಕ್ಕಳಿಗೆ ಭೇದಿಯಾಗುತ್ತಿದ್ದರೆ ಈ ಎಳನೀರಿಗೆ ನಿಂಬೆರಸ ಹಾಗೂ ಜೇನು ತುಪ್ಪ ಸೇರಿಸಿ ಕುಡಿಸಿದರೆ ಭೇದಿ ನಿಲ್ಲುತ್ತದೆ. ಎಳನೀರನ್ನು ಮಿತವಾಗಿ ಉಪಯೋಗಿಸೋದ್ರಿಂದ ಮೂತ್ ಮಾರ್ಗದಲ್ಲಿ ಉರಿ ನೋವು ಇದ್ದರೆ ಕಡಿಮೆಯಾಗುತ್ತದೆ.

ಇನ್ನು ಎಳನೀರು ದೇಹಕ್ಕೆ ಎಷ್ಟು ಪ್ರಯೋಜನವೋ ಅಷ್ಟೇ ತ್ವಚೆ ಕಾಂತಿಗೂ ಪ್ರಯೋಜನವಾಗುತ್ತದೆ. ಮುಖದಲ್ಲಿ ತೇವಾಂಶ ಕಡಿಮೆಯಾದರೆ ಈ ಎಳನೀರನ್ನು ಹತ್ತಿಯುಂಡೆಯಲ್ಲಿ ಹದ್ದಿ ಮುಖಕ್ಕೆ ಹಚ್ಚುವುದರಿಂದ ತೇವಾಂಶ ಬರುತ್ತದೆ. ಇನ್ನು ಎಳನೀರು ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಇನ್ನು ಕೂದಲಿಗೂ ಕೂಡ ಎಳನೀರು ಒಳ್ಳೆ ಮನೆ ಔಷಧವಾಗಿದೆ. ಎಳನೀರಿನಿಂದ ಕೂದಲನ್ನು ಮಸಾಜ್ ಮಾಡುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತವೆ. ಹೀಗೆ ಸಾಕಷ್ಟು ಉಪಯೋಗಗಳು ಎಳನೀರಿನಲ್ಲಿವೆ.

Leave a Reply

Your email address will not be published. Required fields are marked *