ಕಲ್ಲಂಗಡಿಯ ಬೀಜಗಳಲ್ಲಿ ಹೆಚ್ಚು ಹಲವು ಪೋಷಕಾಂಶಗಳಿವೆ ಹಾಗೂ ಇದನ್ನು ತಿನ್ನುವುದರಿಂದ ಬೀಜಗಳಲ್ಲಿ ಇರುವಂತ ಅಮೈನೊ ಆಮ್ಲ ದೇಹಕ್ಕೆ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಜೀರ್ಣಾಂಗ ಕ್ರಿಯೆಗೆ ಹಾಗೂ ಪುರುಷರ ಪಲವತ್ತತೆ ಹೆಚ್ಚಿಸುವಲ್ಲಿ, ಹೃದಯದ ಆರೋಗ್ಯಕ್ಕೆ ಈ ಬೀಜಗಳು ಹೆಚ್ಚು ಸಹಕಾರಿಯಾಗಿದೆ.
ಅಲ್ಲದೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಕಲ್ಲಂಗಡಿ ಬೀಜಗಳು ಹೆಚ್ಚು ಪೂರಕವಾಗಿವೆ, ಕಲ್ಲಂಗಡಿ ಬೀಜಗಳು ಪ್ರೊಟೀನ್ ಕೊರತೆ ನಿವಾರಿಸಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ. ಮಧುಮೇಹಿಗಳು ಅಂದರೆ ಸಕ್ಕರೆ ಕಾಯಿಲೆ ಇರೋರು ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಟೀ ರೀತಿ ಪ್ರತಿದಿನ ಸೇವಿಸಿದರೆ ಒಳಿತು. ಈ ಹಣ್ಣಿನ ಬೀಜಗಳಲ್ಲಿ ಮೆಗ್ನಿಶಿಯಂ ಅಂಶ ಇರೋದ್ರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮತ್ತೊಂದು ವಿಶೇಷತೆ ಅಂದ್ರೆ ಕಲ್ಲಂಗಡಿ ಬೀಜಗಳಲ್ಲಿರುವ ಕಬ್ಬಿಣ ಹಾಗೂ ವಿಟಮಿನ್ ಬಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಜಠರದಲ್ಲಿ ಆಮ್ಲಗಳು ಉತ್ಪತ್ತಿ ತಡೆಯಲು ಕಲ್ಲಂಗಡಿ ಬೀಜ ಸಹಾಯಕ. ಅಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ನಾಳಗಳ ಕಾಯಿಲೆಗಳನ್ನ ತಡೆಗಟ್ಟುತ್ತದೆ.