ಇಂದಿನ ಕಾಲದ ಕೆಲಸದ ಒತ್ತಡ ಜೀವನ ಶೈಲಿವಂಶ ಪಾರಂಪರಿ ಹೀಗೆ ಹಲವು ಕಾರಣಗಳಿಂದಾಗಿ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಎಂಬ ಭೂತ ನಮ್ಮನ್ನ ಕಾಡುತ್ತದೆ ಅಲ್ಲದೆ ಸೌಂದರ್ಯಕಿ ಕಪ್ಪು ಚುಕ್ಕಿಯಾಗಿ ಬಾಧಿಸುತ್ತದೆ ಅದರಲ್ಲೂ ಮಹಿಳೆಯರಿಗೆ ಕಣ್ಣಿನ ಸುತ್ತ ಕಪ್ಪು ಮೂಡಿದರೆ ಏನು ಒಂದು ರೀತಿಯ ಹಿಂಜರಿಕೆ ಇದಕ್ಕಾಗಿ ಅದೆಷ್ಟೋ ಮಂದಿ ಸಿಕ್ಕ ಸಿಕ್ಕ ಕ್ರೀಮ್ಗಳನ್ನೆಲ್ಲ ಬಳಸಿದ್ದು ಇದೆ ಬಟ್ ನೋ ಯೂಸ್ ಆದರೆ ನಿನಗೆ ಗೊತ್ತಾ ನಿಮ್ಮ ಅಡುಗೆ ಮನೆಯಲ್ಲಿ ಯಾವಾಗಲೂ ಇರುವ ವಸ್ತುವೊಂದು ನಿಮ್ಮ ಡಾರ್ಕ್ ಸರ್ಕಲ್ ಗೆ ಮುಕ್ತಿ ನೀಡುತ್ತದೆಯಂತೆ.

ಹೌದು ಕಾಫಿ ಪುಡಿ ಇಂದ ಡಾರ್ಕ್ ಸರ್ಕಲ್ ನಿವಾರಣೆ ಮಾಡಬಹುದಾಗಿದೆ ಕಾಫಿ ಪುಡಿಯಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹೀಗಾಗಿ ಇದು ಚರ್ಮವನ್ನು ಮೃದುವಾಗಿ ಇರಿಸುತ್ತದೆ. ಅಷ್ಟೇ ಅಲ್ಲದೆ ಇದರ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ರಕ್ತ ಚಲನೆ ಹೆಚ್ಚಾಗಿ ಕಣ್ಣಿನ ಕೆಳಗಿರುವ ಫಫಿನೆಸ್ ಕಡಿಮೆಯಾಗುತ್ತದೆ. ಕಾಫಿ ಪುಡಿಗೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸಿ ಈ ಮಿಶ್ರಣವನ್ನು ಕಣ್ಣಿನ ಕೆಳಭಾಗಕ್ಕೆ ಲೇಪಿಸಿ. ಹತ್ತು ನಿಮಿಷಗಳ ನಂತರ ಕಾಟನ್ ಅಥವಾ ಟಿಶ್ಯೂ ನ ಸಹಾಯದಿಂದ ಈ ಮಿಶ್ರಣವನ್ನು ತೆಗೆಯಿರಿ.

ಸ್ವಲ್ಪ ಸಮಯದ ನಂತರ ಮುಖ ತೊಳೆದು ಕೂಡಲೇ ಯಾವುದಾದರೂ ಮಾಶ್ಚರ್ ರೈಸರ್ ಕ್ರಿಮ್ ಬಳಸಿ ವರಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.ಇನ್ನ ಬೇರೆ ದಾರಿ ಎಂದರೆ ಅರ್ಧ ಚಮಚ ಕೊಬ್ಬರಿ ಎಣ್ಣೆ ಜೊತೆಗೆ ಚಿಟಕಿ ಅರಿಶಿಣ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಂತರ ಇದನ್ನು ಕಣ್ಣಿನ ಸುತ್ತ ಆಗಿರುವ ಕಪ್ಪು ಅಥವಾ ಸುಕ್ಕ ಕಲೆಗಳ ಮೇಲೆ ನಿಧಾನವಾಗಿ ಅನ್ವಯಿಸಿ. 15ನಿಮಿಷಗಳ ಕಾಲ ಇದನ್ನು ತ್ವಚೆಯೆ ಮೇಲೆ ಬಿಡಿ.ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.ಬೇಗನೆ ಫಲಿತಾಂಶವನ್ನು ಕಾಣಲು ವಾರದಲ್ಲಿ ಮೂರು ಬಾರಿ ಇದನ್ನು ಮಾಡಿ.

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ಜಲೀಕರಣ ಕಡಿಮೆಯಾಗದಂತೆ ಎಚ್ಚರ ವಹಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ. ಹಲೋ ಪ್ರತಿ ನಿತ್ಯ ನಿಯಮಿತವಾಗಿ ನೀರು ಕುಡಿಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.ಹೀಗಾಗಿ ಪ್ರತಿನಿತ್ಯ ಒಂದು ಲೀಟರ್ ಗೂ ಅಧಿಕ ನೀರು ಕುಡಿಯುವುದು ಸೂಕ್ತ.

ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗೆಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *