ಸುಗಂಧಯುಕ್ತ ಅಡಿಕೆಪುಡಿ ಮೆಲ್ಲುವುದರಿಂದ ಬಾಯಿಯಿಂದ ಹೊರ ಹೊಮ್ಮುವ ದುರ್ಗಂಧ ನಾಶವಾಗುವುದು, ಉಸಿರು ಸುವಾಸನೆಯಿಂದ ಕೂಡಿರುವುದು, ರುಚಿಗ್ರಹಣ ಶಕ್ತಿ ಜಾಗೃತ ವಾಗುವುದು ಹಾಗು ಹಲ್ಲಿನ ವಸಡು ಗಟ್ಟಿಯಾಗುವುದು.
ಪ್ರತಿದಿನವೂ ಸ್ವಲ್ಪ ಅಡಿಕೆಪುಡಿಯನ್ನು ಉಪಯೋಗಿಸುತ್ತಿದ್ದಾರೆ ಆಮಶಂಕೆ, ಅತಿಸಾರ, ಶಾಂತವಾಗುವ ಸಂಭವ ಉಂಟು, ಅಡಿಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿಲ್ಲುವುದು, ಗಂಟಲು ಹುಣ್ಣು ಕಡಿಮೆಯಾಗುವುದು. ಅಡಿಕೆಯನ್ನು ಅತಿಯಾಗಿ ಬಳಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆ ರೋಗ ಕಡಿಮೆ ಯಾಗುವುದು.
ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ದಿಗೊಳಿಸುತ್ತದೆ. ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ, ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.
ಆಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ಕಫರೋಗಗಳಲ್ಲಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಕಟ್ಟಿರುವ ಕಫ ಸಡಿಲಗೊಳ್ಳುತ್ತದೆ, ಕೆಮ್ಮು ನಿವಾರಣೆಯಾಗುತ್ತದೆ. ಅಡಿಕೆಯಲ್ಲಿನ ಅರೆಕೋಲಿನ್ ಎಂಬ ಅಂಶವು ಅತಿಯಾದ ರಕ್ತದೊತ್ತಡ ಹಾಗೂ ಗೊರಕೆಯನ್ನು ನಿಯಂತ್ರಿಸುತ್ತದೆ.