ಬಹುತೇಕ ಜನರು ಕುರ್ಚಿಮೇಲೆ ಕುಳಿತುಕೊಳ್ಳುವಾಗ ಕಾಲ್ ಮೇಲೆ ಕಾಲ್ ಹಾಕಿ ಕುಳಿತುಕೊಳ್ಳುತ್ತಾರೆ. ಆಫೀಸ್ ಗಳಲ್ಲಿ ಈ ರೀತಿ ಸ್ಟೈಲ್ಗಾಗಿ ಕುಳಿತುಕೊಳ್ಳುವವರೆ ಹೆಚ್ಚು. ಆರೋಗ್ಯದ ದೃಷ್ಠಿಯಿಂದ ನೋಡುವುದಾದರೆ ಇದು ಬಹಳ ಕೆಟ್ಟ ಚಟ. ಇದನ್ನು ಇಲ್ಲಿಗೆ ಸ್ಟಾಪ್ ಮಾಡಿದ್ರೆ ಬಹಳ ಒಳ್ಳೆಯದು.
ವ್ಯಕ್ತಿಯೂ ರೂಢಿಸಿಕೊಂಡು ಕುಳಿತುಕೊಳ್ಳುವ ಭಂಗಿ ಅವರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳುವಂತೆ ಮಾಡುತ್ತದೆ.ವಿವಿಧ ಅಧ್ಯಾಯನಗಳ ಪ್ರಕಾರ ಈ ರೀತಿ ಕುಳಿತುಕೊಳ್ಳುವುದರಿಂದ ಹೃದಯನಾಳಕ್ಕೆ ಸಂಭಂಧಿಸಿದ ಖಾಯಿಲೆಗಳು ಬರುತ್ತದೆಯಂತೆ. ಮಹಿಳೆಯರು ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಒಂದೆಡೆ ಸೊಂಟದ ಭಾಗದ ಸ್ನಾಯುಗಳು ಸಂಕುಚಿತಗೊಂಡು, ಇನ್ನೊಂದು ಬದಿ ವಿಕಸನಗೊಳ್ಳುತ್ತದೆ.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ. ಈ ಭಂಗಿಯಲ್ಲಿ ಕೂರುವವರಿಗೆ ಸ್ನಾಯುಗಳ ಸೆಳತದಿಂದ ಪಾರ್ಶವಾಯು(ಲಕ್ವ) ಹೊಡೆಯುವ ಸಂಭವ ಹೆಚ್ಚಾಗಿರುತ್ತದೆ. ಈ ಹಿಂದೆ ಇದಕ್ಕಾಗಿ ಕಾಲ್ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕೆಟ್ಟ ಅಭ್ಯಾಸವೆಂದು ಹಿರಿಯರು ಹೇಳುತ್ತಿದ್ದರು.
ರಕ್ತದೊತ್ತಡ ಹೆಚ್ಚಾಗಿ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ. ಇದರಿಂದ ಸಡನ್ ಡೆತ್ ಉಂಟಾಗುವ ಸಾಧ್ಯತೆಗಳಿರುತ್ತದೆ. ಪುರುಷರಿಗೆ ಈ ರೀತಿಯಾದ ತೊಂದರೆಗಳು ಬರುತ್ತದೆ. ನಮ್ಮ ದೇಹದ ಆರೋಗ್ಯ ನಾವು ಕುಳಿತುಕೊಳ್ಳುವ ಭಂಗಿಯಲ್ಲಿದೆ ಅನ್ನೋದನ್ನ ಮೆರೆಯಬೇಡಿ. ಒಳ್ಳೆಯ ರೀತಿಯ ಭಂಗಿಗಳಲ್ಲಿ ಕುಳಿತುಕೊಳ್ಳುವುದನ್ನು ಕಲಿಯಿರಿ.
ತಕ್ಷಣವೇ ಕುಳಿತುಕೊಳ್ಳುವ ಭಂಗಿಯನ್ನು ಬದಲಿಸಬೇಡಿ ಇದರಿಂದಲೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸ್ನಾಯುಗಳು ಅದೇ ಭಂಗಿಗೆ ಹೊಂದಿಕೊಂಡಿರುವುದರಿಂದ ಯೋಗ ಮಾಡಿ ನಂತರ ದಿನದಿಂದ ದಿನಕ್ಕೆ ಕುಳಿತುಕೊಳ್ಳವ ಶೈಲಿಯನ್ನು ಅಭ್ಯಾಸ ಮಾಡಿಕೊಳ್ಳಿ.