ಕಾಳು ಮೆಣಸಿನ ಜೊತೆಯಲ್ಲಿ ಕಲ್ಲುಪ್ಪನ್ನು ಸೇರಿಸಿ ಬಳಸುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ಯಾವ ರೀತಿ ಬಳಸುವುದು, ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಇದು ಸಹಾಯ ಆಗುತ್ತೆ ಅನ್ನೋದನ್ನನೋಡೂಣ. ಕಾಳು ಮೆಣಸು ಹಾಗೆನೇ ಉಪ್ಪು ಎಲ್ಲರ ಮನೆಯಲ್ಲೂ ಇರುವಂಥದಲ್ಲ ಉಪ್ಪಿಗಿಂತ ರುಚಿ ಇಲ್ಲ ಅಂತ ಹೇಳ್ತಾರೆ. ಅಡುಗೆಗೆ ಯಾವುದೇ ಕಡಿಮೆ ಆದರೂ ತಿನ್ನಬಹುದು ಆದರೆ ಉಪ್ಪು ಕಡಿಮೆಯಾದರೆ ತಿನ್ನೋದಕ್ಕೆ ತುಂಬಾನೇ ಕಷ್ಟ. ಆಗುತ್ತೆ. ರುಚಿಗೆ ಅಷ್ಟು ಇಂಪಾರ್ಟೆಂಟ್ ಆಗಿ ಬೇಕಾಗಿರುವಂತಹ ಉಪ್ಪು ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಅಂತಾನೆ ಹೇಳಬಹುದು. ಇನ್ನು ಕಾಳು ಮೆಣಸನ್ನು ನಮಗೆಲ್ಲ ಗೊತ್ತಿರೋ ಹಾಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವಲ್ಲಿ ತುಂಬಾನೇ ಸಹಾಯ ಮಾಡುತ್ತೆ. ಕಾಳು ಮೆಣಸು ಮತ್ತೆ ಕಲ್ಲುಪ್ಪನ ಜೊತೆಯಾಗಿ ಬಳಸೋದ್ರಿಂದ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಅನ್ನೋದನ್ನ ಹೇಳ್ತಾ ಇದ್ದೀನಿ.
ಮೊದಲನೆಯದಾಗಿ ಕೆಲವೊಬ್ಬರಿಗೆ ತುಂಬಾ ಯಾವಾಗಲೂ ಅಜೀರ್ಣ ತರ ಆಗುತ್ತೆ ಇನ್ನು ವಾಂತಿ ವಾಕರಿಕೆ ಕೂಡ ಇರುತ್ತದೆ ಕೆಲವು ಸಾರಿ ವಾಂತಿ ಬಂದಂಗೆ ಆಗ್ತಾ ಇರೋದು ಇಡೀ ದಿನ ಇತರ ಸಮಸ್ಯೆ ಇರೋರು ಕಾಳು ಮೆಣಸು ಮತ್ತು ಉಪ್ಪನ್ನ ಜೊತೆಯಾಗಿ ಬಳಸುವುದರಿಂದ ಈ ಸಮಸ್ಯೆಗಳನ್ನು ದೂರ ಇಡಬಹುದು. ವಾಂತಿ, ವಾಕರಿಕೆ, ನೆಲ ದೂರ ಇಡೋದಕ್ಕೆ ಸಹಾಯ ಆಗುತ್ತೆ. ಹಾಗೇ ನಾವು ಆದಷ್ಟು ಈ ಕಾಳು ಮೆಣಸು ಮತ್ತು ಉಪ್ಪಿನ ಮಿಶ್ರಣವನ್ನು ಅಡುಗೆಯಲ್ಲಿ ಕೂಡ ಬಳಸಬಹುದು. ಬೇರೆ ಬೇರೆ ರೀತಿಯಲ್ಲಿ ಪ್ರತಿ ನಿತ್ಯ ಬಳಸುವುದರಿಂದ ನಮ್ಮ ವೇಟ್ ಲಾಸ್ ಗೆ ಸಹಾಯ ಆಗುತ್ತೆ. ಇದು ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬು ಕರಗಿಸೋದಕ್ಕೆ ಈ ಮಿಶ್ರಣ ತುಂಬಾನೇ ಸಹಾಯ ಮಾಡುತ್ತೆ. ಇನ್ನು ನಮಗೆ ಹೇಳಿದರೆ ಕೆಮ್ಮು, ಕಫ ಗಂಟಲು ಕಿರಿಕಿರಿ ಇದಕ್ಕೆ ಒಂದು ಬೆಸ್ಟ್ ಮನೆ ಮದ್ದು ಅಂತಾನೆ ಹೇಳಬಹುದು. ಈ ಕಾಳು ಮೆಣಸು ಮತ್ತೆ ಕಲ್ಲುಪ್ಪು ಇವೆರಡರ ಮಿಶ್ರಣವನ್ನ ನಾವು ಗಂಟಲ ಕಿರಿಕಿರಿ ದೂರ ಇಡೋದಕ್ಕೆ ಬಳಸಿಕೊಳ್ಳಬಹುದು. ನಾರ್ಮಲ್ ಆಗಿ ಕಫ ಗಟ್ಟಿಯಾಗಿದ್ದು ಕೂಡ ಕರಗಿಸೋದಕ್ಕೆ ನಮಗೆ ಕಾಳು ಮೆಣಸು ತುಂಬಾನೇ ಸಹಾಯ ಮಾಡುತ್ತೆ.
ಅದರ ಜೊತೆಯಲ್ಲಿ ಕೆಮ್ಮು ಗಂಟಲು ಕಿರಿಕಿರಿ ಇಲ್ಲ. ಇದ್ರೆ ಈ ಮಿಶ್ರಣವನ್ನು ಒಂದು ಚಿಟಿಕೆ ಆಗುವಷ್ಟು ನಾವು ಬಾಯಿಗೆ ಹಾಕ್ಕೊಂಡು ಆಮೇಲೆ ಒಂದು ಲೋಟದಷ್ಟು ಬೆಚ್ಚಗಿನ ನೀರನ್ನು ಕುಡಿಯಬಹುದು. ಇದರಿಂದಾಗಿ ಕೆಮ್ಮು, ಗಂಟಲು ಕಿರಿಕಿರಿ ಬೇಗನೆ ಕಡಿಮೆ ಆಗೋದಕ್ಕೆ ಸಹಾಯ ಆಗುತ್ತೆ ಇನ್ನು ಹಲ್ಲು ನೋವಿನ ಸಮಸ್ಯೆಯಿದ್ದರೆ ಹುಳುಕು ಹಲ್ಲು ಆಗಿದ್ರೆ ನೋವಿದ್ರೆ ಎಲ್ಲದಕ್ಕೂ ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ಯಾವ ಹಲ್ಲು ನೋವಿದೆ ಅಥವಾ ಎಲ್ಲಿ ಹುಳುಕು ಆಗಿದೆ. ಅಲ್ಲಿ ನಾವು ಈ ಮಿಶ್ರಣವನ್ನು ಸ್ವಲ್ಪ ಇಡಬಹುದು. ವಸಡು ಎಲ್ಲ ಇದ್ರೆ ಇದನ್ನ ನಾವು ಒಂದು ಪೇಸ್ಟ್ ತರ ಮಾಡಿಕೊಂಡು ಕೂಡ ಅಲ್ಲಿಗೆ ಹಚ್ಚಿಕೊಳ್ಳಬಹುದು. ಈ ರೀತಿ ಮಾಡೋದ್ರಿಂದ ಕೂಡ ನೋವು ಕಡಿಮೆ ಆಗುತ್ತೆ. ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ ಸಮಸ್ಯೆ ಇರೋರಿಗೆ ಕೂಡ ತುಂಬಾನೆ ಒಳ್ಳೆಯದು. ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರೋರು ಜೀರ್ಣ ಸರಿಯಾಗಿ ಆಗಲ್ಲ ಅನ್ನೋರು ಕೂಡ ಇದನ್ನು ಬಳಸಬಹುದು.ಊಟ ಮಾಡುವಾಗ ಮೊದಲ ತುತ್ತಿಗೆ ನಾವು ಈ ಮಿಶ್ರಣ ವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಊಟ ಮಾಡಬಹುದು.