WhatsApp Group Join Now

ಇದೇನು ಕಾಫಿಗೂ ಕಿಡ್ನಿಗೂ ಏನ್ ಸಂಬಂಧ ಮತ್ತು ಕಾಫಿ ಸೇವನೆಗೂ ಕಿಡ್ನಿ ಸಮಸ್ಯೆಗೂ ಸಂಬಂಧವಿದೆಯಾ ಎನ್ನುವುದರ ಬಗ್ಗೆ ಒಂದು ವಿಶೇಷ ಅಂಶ ಇಲ್ಲಿ ಬೆಳಕಿಗೆ ಬಂದಿದೆ ನೋಡಿ.

ಕಾಫಿ ಸೇವನೆಗೂ ಕಿಡ್ನಿ ಸಮಸ್ಯೆಗೂ ಸಂಬಂಧವಿದೆಯಾ ಆದರೆ ಇದರ ಸೇವನೆ ಲಿಮಿಟ್‌ನಲ್ಲಿ ಇದ್ದರೆ ಕಿಡ್ನಿ ಸಮಸ್ಯೆಯಿಂದ ಸಾಯುವ ಸಾಧ್ಯತೆ ಕಮ್ಮಿ ಆಗಲಿದೆಯಂತೆ. ಈ ಸಂಬಂಧ ನಡೆದ ಅಧ್ಯಯನವೊಂದರಲ್ಲಿ ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ 60 ತಿಂಗಳಲ್ಲಿ ಶೇ. 25ರಷ್ಟು ಮರಣದ ಸಾಧ್ಯತೆ ಕಮ್ಮಿ ಆಗಿದ್ದು ಕಂಡು ಬಂದಿದೆ ಎನ್ನಲಾಗಿದೆ.

ಮಿದುಳಿನ ಆರೋಗ್ಯಕ್ಕೆ ನಾರಿನಂಶ ನಿಮ್ಮ ಮಿದುಳಿಗೆ ವಯಸ್ಸಾಗುವಿಕೆಯನ್ನು ತಡೆಯಬೇಕು ಅಂದರೆ ನಾರಿನಂಶವಿರುವ ಆಹಾರವನ್ನು ಹೆಚ್ಚು ಸೇವಿಸಿ. ಬ್ರಕೋಲಿ, ಬೀನ್ಸ್‌, ಬೇಳೆಕಾಳುಗಳನ್ನು ಹೆಚ್ಚು ಸೇವಿಸುವುದರಿಂದ ಮಿದುಳಿನ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಇದು ಚುರುಕಾಗಿ ಕೆಲಸ ಮಾಡುತ್ತದೆ ಎಂದಿದೆ ಸಮೀಕ್ಷೆ ವರದಿ.

ಒಕ್ಸಾಲಿಕ್ ಆಮ್ಲ ಅಥವಾ ಒಕ್ಸಾಲೇಟ್ ಒಳ್ಳೆಯದಲ್ಲ. ಚಹಾ, ಕಾಫಿ, ದ್ರಾಕ್ಷಿ, ಕಿತ್ತಳೆ, ಹಸಿರೆಲೆ ತರಕಾರಿಗಳನ್ನು ಕಿಡ್ನಿ ಸಮಸ್ಯೆ ಇರುವವರು ಕಡೆಗಣಿಸಬೇಕು. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ನಿರ್ಮಿಸುತ್ತದೆ. ಇದರಿಂದ ಪರಿಸ್ಥಿತಿ ಕೆಡಬಹುದು.

ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಬಾರದು ಎನ್ನುವುದು ಸಾಮಾನ್ಯ ವಿಚಾರ. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಅಸಮರ್ಪಕ ನಿರ್ವಹಣೆಗೆ ಪರಸ್ಪರ ಸಂಬಂಧವಿದೆ. ಒಂದರಿಂದ ಇನ್ನೊಂದಕ್ಕೆ ಅಡ್ಡಪರಿಣಾಮಗಳು ಇವೆ. ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ. ಗಣೀಕೃತ ತರಕಾರಿ ಅಥವಾ ಉಪ್ಪಿನಕಾಯಿ ಸೇವಿಸಬೇಡಿ. ಇವುಗಳನ್ನು ಸಂಸ್ಕರಿಸಲು ಹೆಚ್ಚಿನ ಉಪ್ಪನ್ನು ಬಳಸಿರುತ್ತಾರೆ.

ಕಿಡ್ನಿಯು ತೀವ್ರ ರೀತಿಯಲ್ಲಿ ಹಾನಿಗೀಡಾದ ಬಳಿಕ ಪೊಟಾಶಿಯಂ ಸೇವನೆಯು ನಿಮಗೆ ಸಮಸ್ಯೆ ಉಂಟುಮಾಡಲಿದೆ. ನೀವು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಯಾಕೆಂದರೆ ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ. ಅತಿಯಾಗಿ ಇವುಗಳ ಸೇವನೆ ಮಾಡುವುದು ಕಿಡ್ನಿಗೆ ಒಳ್ಳೆಯದಲ್ಲ.

WhatsApp Group Join Now

Leave a Reply

Your email address will not be published. Required fields are marked *