WhatsApp Group Join Now

ಕೆಲ ವ್ಯಕ್ತಿಗಳ ಸಾಧನೆ ಅಂದ್ರೆ ಹಾಗೆ ಇರುತ್ತೆ ಆದರೆ ಅವರ ಹಿನ್ನೆಲೆ ಹಾಗು ಅವರ ಒಂದು ಜೀವನ ನೋಡಿದ್ರೆ ತುಂಬ ವಿಭಿನ್ನವಾಗಿರುತ್ತದೆ. ಅದರಲ್ಲೂ ಈ ಅಜ್ಜ ಮಾಡಿರುವ ಸಾಧನೆ ಮತ್ತು ಅವರ ಜೀವನ ಸಹ ಆಗಿದೆ. ಕಿತ್ತಳೆ ಹಣ್ಣು ಮಾರುವ ಈ ಅಜ್ಜನಿಗೆ ಪದ್ಮಶ್ರೀ ಪ್ರಶಸ್ತಿ ಹಾಗು ರಿಯಲ್ ಹೀರೊ ಅಂತ ಅವಾರ್ಡ್ ಕೊಟ್ಟಿದ್ದು ಯಾಕೆ ಇವರ ಸಾಧನೆ ಏನು ಅನ್ನೋದು ಇಲ್ಲಿದೆ ನೋಡಿ.

ಬಡ ಮಕ್ಕಳಿಗೆ ತಮ್ಮ ಗ್ರಾಮದಲ್ಲಿ ಉಚಿತ ಶಿಕ್ಷಣ ಸಿಗಲೇ ಬೇಕು ಅನ್ನೋದು ಇವರ ಮಹಾದಾಸೆಯಾಗಿತ್ತು ಅದರಿಂದ ಇವರು ಕಿತ್ತಳೆ ಹಣ್ಣು ಮಾರಿ ತಮ್ಮ ಜೀವನ ಸಾಗಿಸುತ್ತ ಅದರಲ್ಲಿ ಅಲ್ಪ ಹಣದಲ್ಲೇ ಅಂಗವಾಡಿ ಆರಂಭಿಸಿ ಶಿಕ್ಷಣ ನೀಡುತಿದ್ದರು ಆಗ ಇವರ ಸಾಧನೆ ನೋಡಿ ೨೦೦೪ ರಲ್ಲಿ ಕನ್ನಡ ದಿನ ಪತ್ರಿಕೆವೊಂದು ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಗೌರವಿಸಿತ್ತು ನಂತರ ದೆಹಲಿಯ ಸಿಎನ್ಎನ್-ಐಬಿಎನ್ ರಿಯಲ್ ಹೀರೋ ಎಂಬ ಪ್ರಶಸ್ತಿಯನ್ನು ನೀಡಿ ಹರೇಕಳ ಹಾಜಬ್ಬ ಅವರನ್ನ ಗೌರವಿಸಿತ್ತು.

ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇಲ್ಲದ ಸಮಯದಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಹಾಜಬ್ಬ ಅವರು ತಾವೇ ತುಂಬ ಕಷ್ಟಪಟ್ಟು ಶಾಲೆಯೊಂದನ್ನು ನಿರ್ಮಿಸಿದ್ದರು. ಒಂದು ದಿನ ಹರೇಕಳ ಹಾಜಬ್ಬ ಅವರು ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯೊಬ್ಬರು ಆಂಗ್ಲ ಭಾಷೆಯಲ್ಲಿ ಪ್ರಶ್ನೆಗೆ ಉತ್ತರ ನೀಡಲಾಗದ ಸಮಯದಲ್ಲಿ ಹಾಜಬ್ಬರಿಗೆ ಶಿಕ್ಷಣದ ಬಗ್ಗೆ ಅರಿವಾಗಿತ್ತು. ಈ ಹಿನ್ನೆಲೆ ಹರೇಕಳ ಹಾಜಬ್ಬ ಅವರು ತನ್ನ ಮಕ್ಕಳಿಗೆ ಶಾಲೆ ತೆರೆಯಲು ಬಹಳ ಕಷ್ಟಪಟ್ಟು ಕಚೇರಿಯಿಂದ ಕಚೇರಿಗೆ ಬಹಳ ದಿನಗಳ ಕಾಲ ಅಲೆದು ಶಾಲೆ ನಿರ್ಮಾಣಕ್ಕೆ ಮುಂದಾದರು.

ಅಂದಿನಿಂದ ಹರೇಕಳ ಹಾಜಬ್ಬ ಅವರು ತನ್ನ ಗ್ರಾಮದಲ್ಲಿ ಶಾಲೆ ನಿರ್ಮಾಣ ಮಾಡಬೇಕೆಂದು ಹೆಚ್ಚು ಹೆಚ್ಚು ಕಿತ್ತಳೆ ವ್ಯಾಪಾರ ಮಾಡಿದರು. ಹೀಗೆ ದಿನೇ ದಿನೇ ಹೆಚ್ಚು ಕಿತ್ತಾಳೆ ವ್ಯಾಪಾರವನ್ನು ಹರೇಕಳ ಹಾಜಬ್ಬ ಅವರು ಮಾಡಿ ಅದರಿಂದ ಬರುವ ಸುಮಾರು 50 ರಿಂದ 100 ರೂಪಾಯಿಯ ಬಹಳ ದಿನಗಳ ಕಾಲ ಉಳಿಸಿ ಶಾಲಾ ಕಟ್ಟಡಕ್ಕೆ ಸಿಮೆಂಟು ಕಲ್ಲು ಇತರೆ ಸಾಮಗ್ರಿಗಳನ್ನು ತಂದು ಶಾಲೆ ಕಟ್ಟಲು ಆರಂಭಿಸಿದರು.

ಸರ್ಕಾರದಿಂದ 1999 ರಲ್ಲಿ ಹರೇಕಲಕ್ಕೆ ಕಿರಿಯ ಪ್ರಾಥಮಿಕ ಶಾಲೆ ಮಂಜೂರಾಯಿತು. ಅ ಸಮಯದಲ್ಲಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಹರೇಕಳ ಹಾಜಬ್ಬ ಅವರು ಧಾನಿಗಳ ನೆರವಿನಿಂದ ಹಿರಿಯ ಪ್ರಾಥಮಿಕದ ಶಾಲೆಯವರೆಗೆ ವಿಸ್ತರಿಸಿದರು. ಹರೇಕಳ ಹಾಜಬ್ಬ ಅವರು ಸ್ವತಃ ತಾವೇ ನೆಲ ಸಮತಟ್ಟುಗೊಳಿಸಿ ದಾನಿಗಳ ನೆರವಿನಿಂದ ಹರೇಕಳ ಹಾಜಬ್ಬ ಅವರು 6 ಮತ್ತು 7 ನೆ ತರಗತಿಯನ್ನು ಆರಂಭಿಸಿದರು.

1 ರಿಂದ 2 ಲಕ್ಷದವರೆಗೂ ದೇಣಿಗೆ ನೀಡಿದ ದಾನಿಗಳ ಹೆಸರನ್ನು ಶಾಲಾ ಗೋಡೆಗಳ ಮೇಲೆ ಕೆತ್ತಿಸಿದ್ದಾರೆ. ಶಾಲೆಯ ನಿರ್ಮಾಣಕ್ಕೆ ಕಲ್ಲು ಇಟ್ಟಿಗೆಗಳನ್ನು ಹೊತ್ತು ಶಾಲೆ ಗೋಡೆಗಳನ್ನು ಕಟ್ಟಿರುವ ಹಾಜಬ್ಬ ಅವರ ಸಾಧನೆಯ ಬಗ್ಗೆ ಎಷ್ಟು ಹೇಳಿದರು ಸಾಲ್ಲದು. ಹಾಜಬ್ಬ ಅವರು ಮಾಡಿದ ಸಾಧನೆಗೆ ಮಂಗಳೂರು ವಿಶ್ವವಿದ್ಯಾಲಯವು ತನ್ನ ಪಠ್ಯದಲ್ಲಿ ಹಾಜಬ್ಬರ ಸಾಧನೆಯನ್ನು ಮಕ್ಕಳಿಗೆ ವಿವರಿಸಿದೆ. ಮಂಗಳೂರಿನ ಇಸ್ಮಂತ್ ಪಾಜೀರ್ ಹರೇಕಳ ಹಾಜಬ್ಬರ ಜೀವನ ಚರಿತ್ರೆ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ಅಂಥರಾಷ್ಟ್ರೀಯ ಮಟ್ಟದಲ್ಲೂ ಹಾಜಬ್ಬರು ಗುರುತಿಸಿ ಬ್ರಿಟಿಷ್ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೊರೇಷನ್ ಅನ್ ಲೆಟರಡ್ ಫ್ರುಟ್-ಸೆಲ್ಲರ ಇಂಡಿಯನ್ ಎಜುಕೇಶನ್ ಡ್ರೀಮ್ ಹೆಸರಿನಲ್ಲಿ ಲೇಖನವನ್ನು ಪ್ರಕಟಿಸಿದೆ.

WhatsApp Group Join Now

Leave a Reply

Your email address will not be published. Required fields are marked *