ಹಳ್ಳಿಯ ಕಡೆ ಎಕ್ಕೆಯ ಗಿಡಗಳನ್ನು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಎಕ್ಕೆಯ ಗಿಡಗಳಲ್ಲಿ ಹಲವಾರು ಔಷದಿಯ ಗುಣಗಳು ಇವೆ. ಎಕ್ಕೆಯ ಗಿಡದ ಹೂವುಗಳು ಪೂಜೆಗೆ ಶ್ರೇಷ್ಠವಾದ ಹೂವು. ಎಕ್ಕೆಯ ಗಿಡದ ಅನುಕೂಲವನ್ನು ಹಳ್ಳಿಯ ಕಡೆ ಜನರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಕ್ಕೆಯ ಗಿಡದ ಉಪಯೋಗಗಳನ್ನು ನೋಡೋಣ.

ಎಕ್ಕೆ ಎಲೆ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ, ಮನೆ ಮುಂದೆ ಎಕ್ಕೆ ಗಿಡ ಇರಬೇಕು ಎಂಬುದಾಗಿ ಹಿರಿಯರು ಹೇಳುತ್ತಿರುತ್ತಾರೆ, ಅದು ಯಾಕೆ ಅನ್ನೋದು ಇದನ್ನು ತಿಳಿದ ಮೇಲೆ ಗೊತ್ತಾಗುತ್ತದೆ. ಎಕ್ಕೆಯಲ್ಲಿ ಎಷ್ಟೊಂದು ಲಾಭದಾಯಕ ಅಂಶಗಳಿವೆ ಹಾಗು ಯಾವೆಲ್ಲ ಬೇನೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಮುಂದೆ ನೋಡಿ.

ಎಕ್ಕೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಕೀಲುಗಳು ನೋವಿರುವ ಜಾಗಕ್ಕೆ ಕಟ್ಟಿದರೆ ನೋವು ನಿವಾರಣೆ ಆಗುತ್ತದೆ. ಅತಿ ಸುಲಭ ಹಾಗು ಸರಳವಾದ ಮನೆ ಮದ್ದು ಎನ್ನಬಹುದು. ಕೀಲುಗಳ ನೋವು ನಿವಾರಣೆ ಮಾಡುವುದು ಅಷ್ಟೇ ಅಲ್ಲ ಇನ್ನು ಹಲವು ಉಪಯೋಗಗಳನ್ನು ಈ ಎಕ್ಕೆ ಗಿಡ ಹೊಂದಿದೆ. ಚರ್ಮಕ್ಕೆ ಸಂಬಂದಿಸಿದ ಸಮಸ್ಯೆ ಇದ್ರೆ ಎಕ್ಕೆ ಎಲೆಯ ರಸಕ್ಕೆ ಎಳ್ಳೆಣ್ಣೆ ಮತ್ತು ಅರಿಸಿನ ಬೆರಸಿ ಹಚ್ಚಿದರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಕಿವಿ ನೋವು ಹಾಗು ಕಿವಿ ಸೋರುವ ಸಮಸ್ಯೆಯನ್ನು ನಿವಾರಿಸುತ್ತದೆ: ಎಕ್ಕದ ಎಲೆಯನ್ನು ತುಪ್ಪದಲ್ಲಿ ಹುರಿದು ಅದರಿಂದ ರಸ ತೆಗೆದು, ನಿಯಮಿತವಾಗಿ ಕಿವಿಗಳಿಗೆ ಹಾಕಿದರೆ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕಾಲಿಗೆ ಮುಳ್ಳು ಚುಚ್ಚಿದರೆ, ಎಕ್ಕೆ ಹಾಲನ್ನು ಮುಳ್ಳು ಚುಚ್ಚಿದ ಜಾಗವನ್ನು ಸ್ವಲ್ಪ ಬಗೆದು ಹಾಲು ಹಾಕಿದರೆ ಮುಳ್ಳು ಹೊರಗೆ ಬರುವುದರ ಜೊತೆಗೆ ನೋವು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ನಿಮ್ಮ ಮನೆಮುಂದೆ ಎಕ್ಕೆಯ ಗಿಡ ಇದ್ರೆ ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *